ಗದಗ: ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದರ ಕಿರುಕುಳಕ್ಕೆ ಬೇಸತ್ತು ಮಕ್ಕಳ ಶಾಲೆ ಬಿಡಿಸಿ ಊರನ್ನೇ ತ್ಯಜಿಸಿದ ಕುಟುಂಬ
ರಿಹಾನಾಳ ಪತಿ ರಫೀಕ್ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಕುಟುಂಬದ ನಿರ್ವಹಣೆಯೆಲ್ಲ ಅಕೆಯೊಬ್ಬಳ ಮೇಲೆ ಬಿದ್ದಿದೆ. ಏಳನೇ ತರಗತಿಯಲ್ಲಿ ಓದುತ್ತಿದ್ದ ಮಗಳು ಮತ್ತು 5ನೇ ತರಗತಿಯಲ್ಲಿದ್ದ ಮಗನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರಂತೆ. ಚಿಕ್ಕಮಕ್ಕಳು ಎಷ್ಟು ಕೆಲಸ ಮಾಡಿಯಾವು? ಫೈನಾನ್ಸ್ ಸಂಸ್ಥೆಯು ಇವರ ಮನೆಯನ್ನು ಜಪ್ತಿ ಮಾಡಿಕೊಂಡು ಹೋಗಿದೆ.
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಖಾನಾಪುರದ ನಿವಾಸಿ ರಿಹಾನಾ ದೊಡ್ಮನಿಯ ಕಣ್ಣೀರ ಕಥೆಯಿದು. ಮೈಕ್ರೋ ಫೈನಾನ್ಸ್ ಸಂಸ್ಥಯೊಂದು ನೀಡಿದ ಕಿರುಕುಳದಿಂದ ಬೇಸತ್ತು, ರೋಸಿ ಈಕೆ ತನ್ನ ಮಕ್ಕಳ ಶಾಲೆ ಬಿಡಿಸಿ ಗಂಡ ರಫೀಕ್ ದೊಡ್ಮನಿಯೊಂದಿಗೆ ಬೇರೊಂದು ಊರಿಗೆ ಬಂದು ಕೂಲಿನಾಲಿ ಮಾಡಿ ಬದುಕುತ್ತಿದ್ದಾರೆ. ಗದಗಿನ ಎಎಮ್ಒಎಮ್ ಹೆಸರಿನ ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ ₹3 ಲಕ್ಷ ಸಾಲ ಮಾಡಿದ್ದ ಈಕೆ ತಿಂಗಳಿಗೆ ₹ 7250 ರಂತೆ ₹ 1.30 ಲಕ್ಷ ಸಾಲವನ್ನು ತೀರಿಸಿದ್ದಾರೆ. ಅದರೆ ಸಂಸ್ಥೆಯ ಖದೀಮರು ಅದರಲ್ಲಿ ₹90,000 ಬಡ್ಡಿಗೆ ಹೋಗಿದೆ, ಸಾಲದ ಮೊತ್ತಕ್ಕೆ ಕೇವಲ ₹40,000 ಮಾತ್ರ ಜಮಾ ಆಗಿದೆ ಅಂತ ಹೇಳಿದ್ದಾರೆ. ಸಜ್ಜನ ರಾಜಕಾರಣಿಯೆಂದು ಹೆಸರಾಗಿರುವ ಹೆಚ್ ಕೆ ಪಾಟೀಲ್ ಅವರ ಜಿಲ್ಲೆಯಲ್ಲಿ ಹೀಗೆ ನಡೆಯುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಸರ್ಕಾರ ಯಾಕೆ ಮೀನಮೇಷ ಎಣಿಸುತ್ತಿದೆ?