ಹಾಸನ ಜಿಲ್ಲಾಧಿಕಾರಿ ಪಿಎ ವಾಟ್ಸ್​​ಆ್ಯಪ್​​​ ಚಾಟ್ ಪ್ರಕರಣ: ಡಿಸಿ ಕೆ.ಎಸ್.ಲತಾಕುಮಾರಿಗೆ ಸಂಸದ ಶ್ರೇಯಸ್‌ ಪಟೇಲ್ ಪತ್ರ

ಹಾಸನ ಜಿಲ್ಲಾಧಿಕಾರಿ ಪಿಎ ಶಶಿಕಿರಣ್ ವಿರುದ್ಧದ ವಾಟ್ಸ್​​ಆ್ಯಪ್​ ಚಾಟ್ ಹಾಗೂ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಡಿಸಿ ಕಚೇರಿಯಿಂದ ಹೊರಗೆ ವರ್ಗಾಯಿಸುವಂತೆ ಸಂಸದ ಶ್ರೇಯಸ್ ಪಟೇಲ್, ಡಿಸಿ ಕೆ.ಎಸ್. ಲತಾಕುಮಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಮನವಿಯ ಮೇರೆಗೆ ಕೈಗೊಂಡ ಕ್ರಮಗಳ ಬಗ್ಗೆ ಲಿಖಿತವಾಗಿ ತಿಳಿಸುವಂತೆ ವಿನಂತಿ ಮಾಡುವುದಾಗಿ ಡಿಸಿಗೆ ಬರೆದ ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಪಿಎ ವಾಟ್ಸ್​​ಆ್ಯಪ್​​​ ಚಾಟ್ ಪ್ರಕರಣ: ಡಿಸಿ ಕೆ.ಎಸ್.ಲತಾಕುಮಾರಿಗೆ ಸಂಸದ ಶ್ರೇಯಸ್‌ ಪಟೇಲ್ ಪತ್ರ
ಡಿಸಿ ಕೆ.ಎಸ್.ಲತಾಕುಮಾರಿಗೆ ಸಂಸದ ಶ್ರೇಯಸ್‌ ಪಟೇಲ್ ಪತ್ರ
Edited By:

Updated on: Nov 10, 2026 | 10:54 AM

ಹಾಸನ, ನವೆಂಬರ್​​ 10: ಜಿಲ್ಲಾಧಿಕಾರಿ ಪಿಎ ವಾಟ್ಸ್​​ಆ್ಯಪ್​​​ ಚಾಟ್ ಪ್ರಕರಣ ಸಂಬಂಧ ಡಿಸಿ ಕೆ.ಎಸ್.ಲತಾಕುಮಾರಿಗೆ ಹಾಸನ ಸಂಸದ ಶ್ರೇಯಸ್‌ ಪಟೇಲ್ ಪತ್ರ ಬರೆದಿದ್ದು, ಶಶಿಕಿರಣ್​ರನ್ನು ಬೇರೆಡೆಗೆ ನಿಯೋಜಿಸುವಂತೆ ಆಗ್ರಹಿಸಿದ್ದಾರೆ. ಶಶಿಕಿರಣ್ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು, ಆರೋಪಗಳು ಕೇಳಿ ಬಂದಿದೆ. ಹೀಗಾಗಿ ಈ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

‘ಕೈಗೊಂಡ ಕ್ರಮಗಳ ಬಗ್ಗೆ ಲಿಖಿತವಾಗಿ ತಿಳಿಸಿ’

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಶಶಿಕಿರಣ್ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಯ ಯಾವುದೇ ಕರ್ತವ್ಯದಲ್ಲೂ ಮುಂದುವರಿಸದೆ, ಡಿಸಿ ಕಚೇರಿಯಿಂದ ಹೊರಗೆ ಬೇರೆ ಸೂಕ್ತ ಸರ್ಕಾರಿ ಕಚೇರಿಗೆ ವರ್ಗಾಯಿಸಿ ನಿಯೋಜಿಸಬೇಕು. ಆರೋಪಗಳ ಕುರಿತು ನಡೆಸುವ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀಳದಂತೆ ಅಗತ್ಯ ಕ್ರಮ ಕೈಗೊಂಡು, ಈ ಮನವಿಯ ಮೇರೆಗೆ ಕೈಗೊಂಡ ಕ್ರಮಗಳ ಬಗ್ಗೆ ಲಿಖಿತವಾಗಿ ತಿಳಿಸುವಂತೆ ವಿನಂತಿ ಮಾಡುವುದಾಗಿ ಡಿಸಿಗೆ ಬರೆದ ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ.

Loading...

ಇದನ್ನೂ ಓದಿ: ಹಾಸನಾಂಬೆ ಮೇಲೆ ಆಣೆ; ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ರೆ ತಾಯಿ ನೋಡಿಕೊಳ್ಳಲಿ; ಸಚಿವ ಶಿವಲಿಂಗೇಗೌಡ

ಶಶಿಕಿರಣ್ ವಿರುದ್ಧ ಕೇಳಿಬಂದಿರುವ ಆರೋಪವೇನು?

ಸುದ್ದಿಗೋಷ್ಠಿ ನಡೆಸಿ ಹಾಸನ ಡಿಸಿ ಪಿಎ ಶಶಿಕಿರಣ್​​ರದ್ದು ಎನ್ನಲಾದ ವಾಟ್ಸ್​​ಆ್ಯಪ್​​​ ​​ ಚಾಟ್​​ನ 15 ಪುಟಗಳ ಸ್ಕ್ರೀನ್ ಶಾಟ್ ಪ್ರತಿಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು. ಇವನ್ನು ತನೆಗೆ ಯಾವುದೋ ಅಧಿಕಾರಿ ತಂದುಕೊಟ್ಟು ಹೋಗಿರುವುದಾಗಿಯೂ ತಿಳಿಸಿದ್ದರು. ಮೂರು ಕ್ರಷರ್ ಅನುಮತಿಗಾಗಿ 60 ಲಕ್ಷ ರೂ. ಲಂಚ ಕೇಳಿದ್ದ ಆರೋಪ ಮಾತ್ರವಲ್ಲದೆ ಡಿಸಿ ಲತಾಕುಮಾರಿ ಹಾಸನದಲ್ಲೇ ಉಳಿಯಲು ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ರೂಪಾಯಿ ಲಂಚ ನೀಡಿರುವ ಸಂಬಂಧ ಮಾತುಕತೆ ಕೂಡ ಈ ಚಾಟ್​​ಗಳಲ್ಲಿ ಕಂಡುಬಂದಿತ್ತು. ರಾಜ್ಯಾದ್ಯಂತ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆ ಬೆನ್ನಲ್ಲೇ, ತಮ್ಮ ಮೊಬೈಲ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶ ಸೃಷ್ಟಿಸಿ ಹರಡಲಾಗುತ್ತಿದೆ. ಇದರಿಂದ ವೈಯಕ್ತಿಕ ವರ್ಚಸ್ಸು, ಆಡಳಿತಾತ್ಮಕವಾಗಿ ಧಕ್ಕೆ ಆಗುತ್ತಿದೆ ಎಂದು ಆರೋಪಿಸಿ ಶಶಿಕಿರಣ್​​ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us