AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆ ಮೇಲೆ ಆಣೆ; ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ರೆ ತಾಯಿ ನೋಡಿಕೊಳ್ಳಲಿ; ಸಚಿವ ಶಿವಲಿಂಗೇಗೌಡ

ಹಾಸನ ಡಿಸಿ ವರ್ಗಾವಣೆ ಭ್ರಷ್ಟಾಚಾರ ಆರೋಪದ ಬಗ್ಗೆ ಸಚಿವ ಶಿವಲಿಂಗೇಗೌಡ ಪ್ರತಿಕ್ರಿಯಿಸಿದ್ದು, ಎಫ್‌ಎಸ್‌ಎಲ್ ವರದಿ ಬರುವವರೆಗೂ ಪ್ರತಿಕ್ರಿಯಿಸಲ್ಲ. ಒಂದೇ ಪೈಸೆ ಮುಟ್ಟಿದ್ದರೆ ಹಾಸನಾಂಬೆ ಶಿಕ್ಷಿಸಲಿ ಎಂದಿದ್ದಾರೆ. ಕುಮಾರಸ್ವಾಮಿ ಆಧಾರರಹಿತ ಹಿಟ್ ಅಂಡ್ ರನ್ ರಾಜಕಾರಣ ಮಾಡುತ್ತಿದ್ದಾರೆ. ನನಗೆ ಮಾನಸಿಕವಾಗಿ ಆಘಾತವಾಗಿದೆ ಎಂದು ಹೇಳಿದ್ದಾರೆ.

ಹಾಸನಾಂಬೆ ಮೇಲೆ ಆಣೆ; ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ರೆ ತಾಯಿ ನೋಡಿಕೊಳ್ಳಲಿ; ಸಚಿವ ಶಿವಲಿಂಗೇಗೌಡ
ಸಚಿವ ಶಿವಲಿಂಗೇಗೌಡ
ಮಂಜುನಾಥ ಕೆಬಿ
| Edited By: |

Updated on:Nov 09, 2026 | 3:51 PM

Share

ಮುಖ್ಯಾಂಶಗಳು

  • ಹಾಸನ ಡಿಸಿ, ಸಚಿವ ಶಿವಲಿಂಗೇಗೌಡ ವಿರುದ್ಧ ಭ್ರಷ್ಟಾಚಾರ ಆರೋಪ
  • ಮಾನಸಿಕವಾಗಿ ಆಘಾತವಾಗಿದೆ ಎಂದ ಸಚಿವ ಶಿವಲಿಂಗೇಗೌಡ
  • ನನ್ನ ವಿರುದ್ಧದ ಆರೋಪ ಸಾಬೀತಾದರೆ, ನಾನು ಶಿಕ್ಷೆ ಅನುಭವಿಸುತ್ತೇನೆ ಎಂದ ಸಚಿವ

ಹಾಸನ, ನವೆಂಬರ್​​ 09: ಹಾಸನ ಡಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಲಂಚ ಆರೋಪ ಸದ್ಯ ಚರ್ಚೆಗೆ ಗ್ರಾಸವಾಗಿದೆ. ‘ಅದೆಲ್ಲವೂ ಸುಳ್ಳು ಆರೋಪ’ ಎಂದು ಡಿಸಿ ಲತಾಕುಮಾರಿ, ಕುಮಾರಸ್ವಾಮಿ ಆರೋಪಗಳಿಗೆ ಕೌಂಟರ್​ ನೀಡಿದ್ದಾರೆ. ಇದೀಗ ಸಚಿವ ಕೆಎಂ ಶಿವಲಿಂಗೇಗೌಡ ಪ್ರತಿಕ್ರಿಯಿಸಿದ್ದು, ‘ಹಾಸನಾಂಬೆ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ, ಡಿಸಿ ವರ್ಗಾವಣೆ ವಿಚಾರದಲ್ಲಿ 1 ಪೈಸೆ ಮುಟ್ಟಿದ್ದರೆ ತಾಯಿ ನೋಡಿಕೊಳ್ಳಲಿ. ಇಲ್ಲದಿದ್ದರೆ ಯಾರು ಆರೋಪ ಮಾಡಿದ್ರೋ ಅವರನ್ನು ನೋಡಿಕೊಳ್ಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಕೆಎಂ ಶಿವಲಿಂಗೇಗೌಡ ಹೇಳಿದ್ದಿಷ್ಟು 

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆಎಂ ಶಿವಲಿಂಗೇಗೌಡ, ‘ಹಾಸನಾಂಬೆ ಜಾತ್ರೆ ವೇಳೆ ಇಂತಹ ಆರೋಪ ಆಘಾತವಾಗಿದೆ. ಎಫ್​ಎಸ್​​ಎಲ್​​ ವರದಿ ಬರುವವರೆಗೂ ಮಾತಾಡಲ್ಲ. ಇನ್ನು 15 ದಿನಗಳಲ್ಲಿ ಎಫ್​ಎಸ್​ಎಲ್​ ವರದಿ ಬರಲಿದೆ. ಆ ವಾಟ್ಸಾಪ್​ ಚಾಟ್​​ನಲ್ಲಿ ಅವನ ನಂಬರ್ ಕಾಣಲ್ಲ, ಹೆಸರು ಕಾಣುತ್ತೆ. ನೀವು ಸಚಿವರಾಗಿ ಹಾಸನಕ್ಕೆ ಒಂದೇ ಒಂದು ಕೈಗಾರಿಕೆ ಬಂತಾ? ಇದು ಹೊರಗೆ ಬಂದಾಗಿದೆ ಎಫ್​ಐಆರ್​ ಆಗಿದೆ. ಇದನ್ನ ಕಾನೂನು ಪ್ರಕಾರ ಎದುರಿಸುತ್ತೇವೆ. ಇದರಲ್ಲಿ ಯಾರೇ ಅಪರಾಧ ಇದ್ದರೂ ಸಿಕ್ಕಿಬೀಳುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ: ಹಾಸನ ಡಿಸಿ, ಉಸ್ತುವಾರಿ ಸಚಿವರ ವಿರುದ್ಧ ಲಂಚ ಆರೋಪ: ನಕಲಿ ಸಂದೇಶ ಹರಡಲಾಗ್ತಿದೆ ಎಂದು ಜಿಲ್ಲಾಧಿಕಾರಿ ಪಿಎಯಿಂದ ದೂರು

‘ಕುಮಾರಸ್ವಾಮಿ ಒಂದು ಸಂಭಾಷಣೆಯ ಪ್ರತಿ ಬಿಡುಗಡೆ ಮಾಡಿದ್ದಾರೆ. ಇನ್ನೊಬ್ಬರು ಮಾತಾಡಿರುವ ವ್ಯಕ್ತಿ ಯಾರು ಅನ್ನೋದು ಅಲ್ಲಿ ಕಾಣಲ್ಲ. ಎಐ ಯುಗದಲ್ಲಿ ಯಾರನ್ನು ಬೇಕಾದರು ಬಿತ್ತರಿಸುವುದನ್ನು ನೋಡಿದ್ದೇವೆ. ಕುಮಾರಸ್ವಾಮಿ ಆಧಾರ ಇಲ್ಲದೆ ಎಐ ಚಾಟ್ ಬಗ್ಗೆ ಹೇಳಿದ್ದಾರೆ. ಯಾರು ಯಾರ ಜತೆ ಮಾತನಾಡಿದ್ದರೆಂದು ಹೇಳಿದ್ದರೆ ಘನತೆ ಬರೋದು. ತಂದುಕೊಟ್ಟವರು ಯಾರು ಎಂದು ಕುಮಾರಸ್ವಾಮಿ ಧೈರ್ಯವಾಗಿ ಹೇಳಲಿ. ಈ ಚಾಟ್​​ FSLಗೆ ಹೋಗುತ್ತೆ, ಸತ್ಯ ಗೊತ್ತಾದಾಗ ನಿಮ್ಮ ಗೌರವ ಏನಾಗುತ್ತೆ. ಕುಮಾರಸ್ವಾಮಿ ಹಿಟ್​ ಆ್ಯಂಡ್ ರನ್​ ಕೇಸ್​ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ಮಾಡಿದರು.

ಅಪರಾಧ ಮಾಡಿದ್ದರೆ ಸಚಿವ ಸ್ಥಾನದಿಂದ ತೆಗೆಸಿಹಾಕಿ ಎಂದ ಶಿವಲಿಂಗೇಗೌಡ

‘ಶಿವಲಿಂಗೇಗೌಡ ಸಚಿವ ಆಗಿದ್ದಾನೆ ಎಂದು ಹೀಗೆ ಮಾಡುತ್ತೀರಲ್ಲಾ, ಯಾರ ಬಳಿಯಾದರೂ ಲಂಚ ತೆಗೆದುಕೊಂಡಿದ್ದನ್ನು ತೋರಿಸುತ್ತೀರಾ? ನಿಮ್ಮ ಬಳಿ 20 ವರ್ಷ ಇದ್ದೆ, ಇದು ನಿಮ್ಮ ಮನಸ್ಸಿಗೆ ಒಪ್ಪುತ್ತಾ? ನಾನು ಘೋರ ಅಪರಾಧ ಮಾಡಿದ್ದರೆ ಸಚಿವ ಸ್ಥಾನದಿಂದ ತೆಗೆಸಿಹಾಕಿ’ ಎಂದಿದ್ದಾರೆ.

ಆರೋಪ ಸುಳ್ಳಾದರೆ ನನ್ನ ಮಾನಹಾನಿಗೆ ಬೆಲೆ ಕಟ್ಟೋರು ಯಾರು?

‘ಡಿಸಿ ಪಿಎ ಶಶಿಕಿರಣ್ ಪೊಲೀಸರಿಗೆ ದೂರು ಕೊಟ್ಟು ಎಫ್​ಐಆರ್ ಮಾಡಿಸಿದ್ದಾನೆ. ಅವರ ಮೊಬೈಲ್​ ಸರೆಂಡರ್​ ಮಾಡಿ ಬಂದಿದ್ದಾರೆ. ಆ ಚಾಟ್​​ ನನ್ನದೇ ಆಗಿದ್ದರೆ ಶಿಕ್ಷೆಗೆ ಗುರಿಯಾಗ್ತೀನಿ ಎಂದು ಹೇಳಿದ್ದಾನೆ. ಬಡವರ ಮಕ್ಕಳು ಹೇಗೋ ದಡ ಸೇರಿದ್ದೀವಿ, ಏಕೆ ತೊಂದರೆ ಕೊಡ್ತೀರಾ? ನನಗೆ ಮಾನಸಿಕವಾಗಿ ಆಘಾತವಾಗಿದೆ. ಕೇಂದ್ರದ ಮಂತ್ರಿಯಾಗಿ ಇಂತಹ ಚಾಟ್ ಬಿಡುಗಡೆ ಮಾಡುತ್ತೀರಲ್ಲಾ, ನನ್ನ ವಿರುದ್ಧದ ಆರೋಪ ಸಾಬೀತಾದರೆ, ನಾನು ಶಿಕ್ಷೆ ಅನುಭವಿಸುತ್ತೇನೆ. ಇದು ಸುಳ್ಳು ಎಂದಾದರೆ ನನ್ನ ಮಾನಹಾನಿಗೆ ಬೆಲೆ ಕಟ್ಟೋರು ಯಾರು’ ಎಂದು ಸಚಿವ ಶಿವಲಿಂಗೇಗೌಡ ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:49 pm, Mon, 9 November 26

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ನವೆಂಬರ್ 13ರಂದು ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಶಾಸಕ ಜನಾರ್ದನ ರೆಡ್ಡಿಗೆ ಶಾಕ್​​ ಕೊಟ್ಟ ಬಳ್ಳಾರಿ ಜಿಲ್ಲಾಡಳಿತ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಹಾಸನಾಂಬೆಯ ದರ್ಶನ ಪಡೆದ ಪ್ರಿಯಾ; ಅತ್ತೆ ಸಂಪ್ರದಾಯ ಮುಂದುವರಿಸಿದ ಸೊಸೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಆಸ್ಪತ್ರೆ
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಸ್ಟಿಂಗ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಛಲವಾದಿ ಮನೆಗೆ ಚಾಕು, ಚೂರಿ ಪಾರ್ಸೆಲ್; ಇತ್ತ ಜೋರಾಯ್ತು ಪೋಸ್ಟರ್ ವಾರ್!
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ರಂಪಾಟ ಸೃಷ್ಟಿಸಿದ ಮಂಜು
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ
ದೀಪಾವಳಿ ಹಬ್ಬದ ಹಿನ್ನೆಲೆ ಕೆಆರ್ ಮಾರುಕಟ್ಟೆಯಲ್ಲಿ ಜನಸಾಗರ