ಹಾಸನ: ಮ್ಯಾನ್ಹೋಲ್ಗೆ ಪೌರಕಾರ್ಮಿಕರನ್ನು ಇಳಿಸಿ ಸ್ವಚ್ಛತೆ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಸಕ್ಕಿಂಗ್ ಯಂತ್ರವಿದ್ದರೂ ಬಳಸದೆ ಅಧಿಕಾರಿಗಳಿಂದ ನಿರ್ಲಕ್ಷ್ಯ ವಹಿಸಲಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಕೇಳಿಬಂದಿದೆ. ಬೇಜವಾಬ್ದಾರಿಯುತ ಅದಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ಹಾಸನ: ಮ್ಯಾನ್ಹೋಲ್ಗೆ ಪೌರ ಕಾರ್ಮಿಕರನ್ನು ಇಳಿಸಿ ಕ್ಲೀನಿಂಗ್ ಮಾಡಿಸಿದ ಅಮಾನವೀಯ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದಿದೆ. ಒಳಚರಂಡಿ ಚೇಂಬರ್ಗೆ ಪೌರಕಾರ್ಮಿಕರನ್ನು ಇಳಿಸಿ ಸ್ವಚ್ಛತೆ ಮಾಡಿಸಲಾಗಿದೆ. ಮ್ಯಾನ್ಹೋಲ್ಗೆ ಇಳಿಸದಂತೆ ನಿರ್ಬಂಧವಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಹೊಳೆನರಸೀಪುರ ಪಟ್ಟಣ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಇಲ್ಲಿನ 17ನೇ ವಾರ್ಡ್ನಲ್ಲಿ ಮ್ಯಾನ್ಹೋಲ್ ಅನ್ನು ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಸಕ್ಕಿಂಗ್ ಯಂತ್ರವಿದ್ದರೂ ಬಳಸದೆ ಅಧಿಕಾರಿಗಳಿಂದ ನಿರ್ಲಕ್ಷ್ಯ ವಹಿಸಲಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ ಕೇಳಿಬಂದಿದೆ. ಬೇಜವಾಬ್ದಾರಿಯುತ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ರಾಮನಗರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಬಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಲಕ್ಷ್ಮಮ್ಮ(60) ದುರ್ಮರಣವನ್ನಪ್ಪಿದ್ದಾರೆ. ಹೊಲಕ್ಕೆ ಹೋಗುವಾಗ ವಿದ್ಯುತ್ ತಂತಿ ತುಳಿದು ಘಟನೆ ಸಂಭವಿಸಿದೆ. ಬೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿಕ್ಕಮಗಳೂರು: ನಿರ್ಮಾಣ ಹಂತದ ಮನೆಯ ಸಂಪ್ಗೆ ಬಿದ್ದು ಇಬ್ಬರ ಸಾವು ನಿರ್ಮಾಣ ಹಂತದ ಮನೆಯ ಸಂಪ್ಗೆ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಸಂಪ್ಗೆ ಬಿದ್ದು ಕುಮಾರ್(50), ವಸಂತ್(35) ಸಾವನ್ನಪ್ಪಿದ್ದಾರೆ. ಕಲೀಮ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಹಾಸನ: 9 ವರ್ಷ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟ ಪತಿ; ಬೇರೊಂದು ಯುವತಿ ಜತೆ ಎಂಗೇಜ್ಮೆಂಟ್
ಇದನ್ನೂ ಓದಿ: ಹಾಸನದಲ್ಲಿ ಚಪ್ಪಲಿ ಅಂಗಡಿಗೆ ಬೆಂಕಿಬಿದ್ದು ಲಕ್ಷಾಂತರ ಬೆಲೆಯ ಪಾದರಕ್ಷೆಗಳು ಭಸ್ಮ, ಶಾರ್ಟ್ ಸರ್ಕ್ಯೂಟ್ನಿಂದಾದ ಅವಗಢ