ಹಾಸನ: ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನುಗವಳ್ಳಿ ಗ್ರಾಮದ ಯೋಧ ಸಾವು
ಯೋಧ ಗುರುಮೂರ್ತಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು (ಡಿಸೆಂಬರ್ 31) ಮಧ್ಯಾಹ್ನದ ವೇಳೆಗೆ ಹುಟ್ಟೂರಿಗೆ ಪರ್ಥೀವ ಶರೀರ ಆಗಮಿಸಲಿದೆ. ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರ ಯೋಧ ಗುರುಮೂರ್ತಿಯ ಅಂತ್ಯಕ್ರಿಯೆ ನಡೆಯಲಿದೆ.
ಹಾಸನ: ಅನಾರೋಗ್ಯದಿಂದ ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ತಾಲೂಕಿನ ಅನುಗವಳ್ಳಿ ಗ್ರಾಮದ ಯೋಧ (soldier) ಸಾವನ್ನಪ್ಪಿದ್ದಾರೆ. ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುರುಮೂರ್ತಿ(36) ಮೃತಪಟ್ಟಿದ್ದಾರೆ. ಕಳೆದ 19 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಕೆಲವೇ ದಿನಗಳಲ್ಲಿ ನಿವೃತ್ತಿಯಾಗಿ ಮನೆಗೆ ಮರಳಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಯೋಧ ಗುರುಮೂರ್ತಿ ಸಾವನ್ನಪ್ಪಿದ್ದಾರೆ.
ಯೋಧನ ಅಕಾಲಿಕ ಸಾವಿನಿಂದ ಕುಟುಂಬ ಸದಸ್ಯರಲ್ಲಿ ದುಖಃ ಮಡುಗಟ್ಟಿದೆ. ಯೋಧ ಗುರುಮೂರ್ತಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು (ಡಿಸೆಂಬರ್ 31) ರಾತ್ರಿ ವೇಳೆಗೆ ಹುಟ್ಟೂರಿಗೆ ಪರ್ಥೀವ ಶರೀರ ಆಗಮಿಸಲಿದೆ. ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರ ಯೋಧ ಗುರುಮೂರ್ತಿಯ ಅಂತ್ಯಕ್ರಿಯೆ ನಡೆಯಲಿದೆ.
ಹಾಸನ: ಅಪರಿಚಿತ ಶವ ಪತ್ತೆ; ಜನರಿಗೆ ಆತಂಕ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆ ಆಗಿದ್ರು. ಮಹಿಳೆಯ ಬಲಗೈ ಮೇಲೆ ಮೂರ್ತಿ ಎಂದು ಬರೆಸಿಕೊಂಡಿರೋ ಹಚ್ಚೆ ಗುರುತು ಇತ್ತು. ಆದ್ರೆ, ಇಲ್ಲಿ ಶವವಾಗಿ ಪತ್ತೆಯಾದ ಮಹಿಳೆ ಯಾರು? ಯಾವ ಊರಿನವರು ಅನ್ನೋದು ಯಾರಿಗೂ ಗೊತ್ತಿಲ್ಲ. ಮೇಲ್ನೋಟಕ್ಕೆ ಯಾರೋ ಪಾಪಿಗಳು ಕೊಲೆ ಮಾಡಿ ಮೃತದೇಹ ಬಿಸಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗ್ತಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಸಾವಿನ ರಹಸ್ಯ ಬೇಧಿಸಲು ಮುಂದಾಗಿದ್ದಾರೆ. ಸಣ್ಣ ಸುಳಿವು ಸಿಕ್ಕರೇ ಸಾಕು ಸಾವಿನ ರಹಸ್ಯ ಬಯಲು ಮಾಡಲು ಖಾಕಿ ಟೀಮ್ ಪ್ರಯತ್ನ ಮಾಡ್ತಿದೆ.
ಇನ್ನು, ಕಳೆದ ಎರಡು ವರ್ಷಗಳ ಹಿಂದೆ ಯಸಳೂರು ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವವೊಂದರ ರಹಸ್ಯ ವರ್ಷಗಳ ಬಳಿಕ ಬಯಲಾಗಿತ್ತು. ಅಲ್ದೆ, ಮೂರು ತಿಂಗಳ ಹಿಂದೆ ಬಿಸಿಲೆಘಾಟ್ ವ್ಯಾಪ್ತಿಯ ಹಿಜ್ಜನಹಳ್ಳಿ ಬಳಿ ಗೋಣಿ ಚೀಲವೊಂದರಲ್ಲಿ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಇದೀಗ ಮತ್ತೊಂದು ಮಹಿಳೆ ಶವ ಶಿರಾಢಿಘಾಟ್ನಲ್ಲಿ ಪತ್ತೆಯಾಗಿದ್ದು, ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ. ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿರೋದ್ರಿಂದ ಸ್ಥಳೀಯರು ಭಯ ಪಡುತ್ತಿದ್ದಾರೆ. ಅಲ್ದೆ, ಪ್ರವಾಸಿತಾಣ ಆಗಿರೋದ್ರಿಂದ ಪೊಲೀಸ್ ಇಲಾಖೆ ಜೊತೆಗೆ ಪ್ರವಾಸೋದ್ಯಮ ಇಲಾಖೆ ಕೂಡ ಈ ಪ್ರದೇಶಗಳಲ್ಲಿ ಅಗತ್ಯಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ.
ಒಟ್ನಲ್ಲಿ ಗುರುತೇ ಸಿಗದ ರೀತಿಯಲ್ಲಿ ಪತ್ತೆಯಾಗೋ ಶವಗಳು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕೋ ಜೊತೆಗೆ ಪೊಲೀಸರ ತನಿಖೆಗೂ ದೊಡ್ಡ ಸವಾಲಾಗುತ್ತಿವೆ. ಕೊಲೆಯೋ ಆತ್ಮಹತ್ಯೆಯೋ ಅನ್ನೋ ಪ್ರಶ್ನೆ ಒಂದೆಡೆಯಾದ್ರೆ, ಮೃತಪಟ್ಟು ತಿಂಗಳುಗಳೇ ಕಳೆದರೂ ಸಣ್ಣ ಸುಳಿವು ಪತ್ತೆಯಾಗ್ತಿಲ್ಲ. ಇದ್ರಿಂದ ಜನರಿಗೆ ಯಾವಾಗ ಏನ್ ಆಗುತ್ತೋ ಅನ್ನೋ ಭೀತಿ ಎದುರಾಗಿದೆ.
ಇದನ್ನೂ ಓದಿ: ಅಕ್ಕನ ಮಗಳ ಮದುವೆಗೆ ಬಂದಿದ್ದ ಯೋಧನ ಕೊಲೆ, ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿಯಾಗಿ ಇಬ್ಬರ ಸಾವು
ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ
Published On - 9:56 am, Fri, 31 December 21