ಹಾಸನ: ಅವಾಚ್ಯ ಶಬ್ದ ಬಳಸಿ ಪತಿಯಿಂದ ಟಾರ್ಚರ್; ಮಗುವಿನೊಂದಿಗೆ ವೀಡಿಯೋ ಮಾಡಿಟ್ಟು ಮಹಿಳೆ ಸೂಸೈಡ್
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕೌಟುಂಬಿಕ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮತ್ತು ಅತ್ತೆ ಕಿರುಕುಳ ನೀಡಿರುವುದಾಗಿ ಡೆತ್ ನೋಟ್ ಬರೆದಿದ್ದರ ಜೊತೆಗೆ ಮಗುವಿನೊಂದಿಗೆ ವೀಡಿಯೋವನ್ನೂ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಹಾಸನ, ನವೆಂಬರ್ 18: ಪತಿ ಮತ್ತು ಅತ್ತೆ ನೀಡಿದ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಆತ್ಮಹತ್ಯೆ (self destruction) ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ನಡೆದಿದೆ. ಮದುವೆಯಾದಾಗಿನಿಂದಲೂ ಕಿರುಕುಳ ಕೊಡುತ್ತಿದ್ದ ಗಂಡನ ನಡತೆಯಿಂದ ಬೇಸತ್ತ ಮಹಿಳೆ ಡೆತ್ ನೋಟ್ ಬರೆದಿಟ್ಟು, ಮಗು ಜೊತೆ ವಿಡಿಯೋ ಮಾಡಿ ನದಿಗೆ ಹಾರಿದ್ದಾರೆ. ಪೊಲೀಸರ ನಿರ್ಲಕ್ಷ್ಯವೇ ಆಕೆಯ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಮಗಳೊಂದಿಗೆ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ
ಸಾಲಿಗ್ರಾಮ ಮೂಲದ ಮಹಾದೇವಿ (29)ಸುಮಾರು ಮೂರು ವರ್ಷಗಳ ಹಿಂದೆ ಸೀಬಳ್ಳಿ ಗ್ರಾಮದ ಕುಮಾರ್ ಜೊತೆ ವಿವಾಹವಾಗಿದ್ದರು. ಮದುವೆಯ ನಂತರದಿಂದಲೇ ಪತಿ ಅನುಮಾನಪಟ್ಟು ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಲಾಗಿದೆ. ಪತಿಯ ಕಿರುಕುಳ ತಾಳಲಾರದೆ 15 ದಿನಗಳ ಹಿಂದೆ ತವರು ಮನೆ ಸೇರಿದ್ದ ಅವರಿಗೆ ಫೋನ್ ಮತ್ತು ಮೆಸೇಜ್ ಮೂಲಕ ಕುಮಾರ್ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಲೇ ಇದ್ದ ಎಂದು ತಿಳಿದುಬಂದಿದೆ. ನವೆಂಬರ್ 14 ರಂದು ಪತಿ ವಿರುದ್ಧ ದೂರು ನೀಡುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಹಾದೇವಿ, ಇದೀಗ ತನ್ನ ಪತಿ ಮತ್ತು ಅತ್ತೆಯೇ ತನ್ನ ಸಾವಿಗೆ ಕಾರಣವೆಂದು ಹೇಳಿ ಸೆಲ್ಫಿ ವೀಡಿಯೋ ಮಾಡಿ, ಡೆತ್‌ನೋಟ್ ಬರೆದು, ಮಗಳೊಂದಿಗೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ ತನಗಿಂತ 2 ವರ್ಷ ಚಿಕ್ಕವನ ಪ್ರೇಮದ ಬಲೆಗೆ ಬಿದ್ದಿದ್ದ ಯುವತಿ ದುರಂತ ಸಾವು, ಆಗಿದ್ದೇನು?
ಮಹಾದೇವಿ ಕುಟುಂಬಕ್ಕೂ ಜೀವ ಬೆದರಿಕೆ ಹಾಕಿದ್ದ ಪತಿ
ಮಹಾದೇವಿ ತಾನು ಮಾಡಿದ ವೀಡಿಯೋದಲ್ಲಿ ನನ್ನ ಪತಿ ಮತ್ತು ಅತ್ತೆಯೇ ನನ್ನ ಸಾವಿಗೆ ಕಾರಣ, ನನ್ನ ಕುಟುಂಬದವರಿಗೆ ಆತ ಜೀವ ಬೆದರಿಕೆ ಹಾಕಿದ್ದಾನೆ. ಹೀಗಿರುವಾಗ ನಾನು ಏಕೆ ಬದುಕಿರಬೇಕು ಎಂದು ತಮ್ಮ ನೋವು ಹೇಳಿಕೊಂಡಿದ್ದಾರೆ. ಬೆಟ್ಟಸೋಗೆ ಬಳಿಯ ನದಿಯಲ್ಲಿ ಮಹಾದೇವಿಯ ಮೃತದೇಹ ಪತ್ತೆಯಾಗಿದ್ದು, ಮಗುವಿನ ಹುಡುಕಾಟ ಮುಂದುವರಿದಿದೆ. ಪತಿ ಮತ್ತು ಅತ್ತೆಯ ಕಿರುಕುಳ ತಾಳಲಾರದೆ ದೂರು ನೀಡಲು ಬಂದ ಮಹಾದೇವಿಯನ್ನು ಪೊಲೀಸರು ಹೆದರಿಸಿ ವಾಪಾಸ್ ಕಳುಹಿಸಿದ್ದರು ಎಂದು ಮಹಾದೇವಿ ತಮ್ಮ ಹೇಳಿದ್ದು, ಪೊಲೀಸರ ನಿರ್ಲಕ್ಷ್ಯವೆ ಅಕ್ಕನ ಸಾವಿಗೆ ಕಾರಣವಾಗಿದೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:10 am, Tue, 18 November 25