AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಘಾಟನೆಯಾಗದ ಅರ್ಜುನ ಆನೆಯ ಸ್ಮಾರಕ; ಕಾಡಿನಲ್ಲಿ ಐದು ತಿಂಗಳಿನಿಂದ ಅನಾಥವಾದ ಪುತ್ಥಳಿ

ಹಾಸನದ ಸಕಲೇಶಪುರದ ದಬ್ಬಳ್ಳಿಕಟ್ಟೆಯಲ್ಲಿ ಹುತಾತ್ಮ ಕಾಡಾನೆ ಕ್ಯಾಪ್ಟನ್ ಅರ್ಜುನನ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದೆ. ದಸರಾದಲ್ಲಿ ಅಂಬಾರಿ ಹೊತ್ತ, ಕಾರ್ಯಾಚರಣೆಗಳಲ್ಲಿ ಪ್ರಾಣತ್ಯಾಗ ಮಾಡಿದ ಅರ್ಜುನನಿಗೆ ಗೌರವಾರ್ಥವಾಗಿ ನಿರ್ಮಿಸಿದ ಈ ಸ್ಮಾರಕದ ಉದ್ಘಾಟನೆಗೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಶೀಘ್ರ ಲೋಕಾರ್ಪಣೆಗೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಉದ್ಘಾಟನೆಯಾಗದ ಅರ್ಜುನ ಆನೆಯ ಸ್ಮಾರಕ; ಕಾಡಿನಲ್ಲಿ ಐದು ತಿಂಗಳಿನಿಂದ ಅನಾಥವಾದ ಪುತ್ಥಳಿ
ಕಾಡಿನಲ್ಲಿ ಐದು ತಿಂಗಳಿನಿಂದ ಅನಾಥವಾದ ಅರ್ಜುನನ ಪುತ್ಥಳಿ
ಮಂಜುನಾಥ ಕೆಬಿ
| Edited By: |

Updated on: Dec 02, 2025 | 8:49 AM

Share

ಹಾಸನ, ಡಿಸೆಂಬರ್ 02:  2023ರ ಡಿಸೆಂಬರ್ 4ರಂದು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಕಾದಾಡಿ ಮಡಿದ  ದಸರಾ ಆನೆ ಕ್ಯಾಪ್ಟನ್ ಅರ್ಜುನನಿಗೆ (Captain Arjun) ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಪ್ರಾಜೆಕ್ಟ್‌ಗೆ ಅನುಮೋದನೆ ನೀಡಿತ್ತು. ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯ ಅರಣ್ಯದಲ್ಲಿ ಹುತಾತ್ಮ ಕಾಡಾನೆ ಅರ್ಜುನನ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದ್ದು, ಈಗ ಉದ್ಘಾಟನೆಗಾಗಿ ಸ್ಥಳೀಯರು ಸರ್ಕಾರಕ್ಕೆ  ಒತ್ತಾಯಿಸಿದ್ದಾರೆ.

ಅರ್ಜುನನ ಸ್ಮಾರಕದಲ್ಲಿ ಮೂಲ ಸೌಕರ್ಯಗಳ ಕೊರತೆ

ಸ್ಥಳೀಯರು 5 ಕೋಟಿ ರೂ. ವೆಚ್ಚದಲ್ಲಿ ಭವ್ಯ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿದ್ದರು. ಸರ್ಕಾರ ಮೊದಲ ಹಂತದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಶುರುಮಾಡಿತ್ತು. ಇದೀಗ ಮೂಲ ಸೌಲಭ್ಯಗಳ ಕೊರತೆ ಇದ್ದರೂ ಸ್ಮಾರಕ ಉದ್ಘಾಟನೆಗೆ ಸಿದ್ದವಾಗಿದೆ. ಡಿಸೆಂಬರ್ 6 ರಂದು ಹಾಸನಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಮಾರಕ ಲೋಕಾರ್ಪಣೆ ಮಾಡಬೇಕೆಂಬ ಆಗ್ರಹ ಹೊರಹೊಮ್ಮಿದೆ. ಅರ್ಜುನ ಹುತಾತ್ಮನಾಗಿ ಎರಡು ವರ್ಷ ಪೂರ್ತಿಯಾಗುತ್ತಿರುವುದರಿಂದ ಪುತ್ಥಳಿಯ ಉದ್ಘಾಟನೆ ವಿಳಂಬವಾಗಬಾರದೆಂದು ಸ್ಥಳೀಯರು ಹೇಳುತ್ತಿದ್ದಾರೆ.

10 ತಿಂಗಳ ಹಿಂದೆಯೇ ತಯಾರಾಗಿರುವ ಪುತ್ಥಳಿ

ದಕ್ಷಿಣ ಕನ್ನಡ ಮೂಲದ ಶಿಲ್ಪಿ ಧನಂಜಯ್ ಪಡು ಅವರ ತಂಡ 10 ತಿಂಗಳ ಹಿಂದೆಯೇ 9.8 ಅಡಿ ಎತ್ತರ, 12.4 ಅಡಿ ಉದ್ದದ ಅರ್ಜುನನ ಪುತ್ಥಳಿ ನಿರ್ಮಾಣ ಪೂರ್ಣಗೊಳಿಸಿದೆ. ಅರ್ಜುನನ ಸಮಾದಿ ಮೇಲೆಯೇ ಮೂರ್ತಿಯನ್ನು ನಿಲ್ಲಿಸಲಾಗಿದೆ. ಸರ್ಕಾರ ಇದುವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕದ ಪ್ರಮುಖ ಭಾಗಗಳನ್ನು ನಿರ್ಮಿಸಿದ್ದು, ಇನ್ನೂ ಶೌಚಾಲಯ, ವಿಶ್ರಾಂತಿ ಗೃಹ, ಭದ್ರತಾ ಸಿಬ್ಬಂದಿ ಕೊಠಡಿ ಸೇರಿದಂತೆ ಹಲವಾರು ಮೂಲ ಸೌಲಭ್ಯಗಳು ಬಾಕಿ ಇವೆ ಎಂದು ತಿಳಿದು ಬಂದಿದೆ. ಈ ಕುರಿತು ಮಾತನಾಡಿರುವ ಶಾಸಕ ಸಿಮೆಂಟ್ ಮಂಜು, ಅರ್ಜುನ ಈ ದೇಶದ ಆಸ್ತಿ. ಅದಕ್ಕೆ ಗೌರವ ಇದ್ದರೆ ಸರ್ಕಾರ ಶೀಘ್ರ ಸ್ಮಾರಕ ಉದ್ಘಾಟನೆ ಮಾಡಬೇಕು. ಕಂಚಿನ ಪ್ರತಿಮೆ ಬೇಡಿಕೆ ಇದ್ದರೂ ಫೈಬರ್ ಮೂರ್ತಿ ನಿರ್ಮಾಣವಾಗಿದೆ. ಈ ವಿಷಯವನ್ನು ಅರಣ್ಯ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ ಹಾಸನ: ಕಾಡಾನೆ ಮತ್ತಿನಲ್ಲಿ ಇದ್ದರೂ ಕಾಳಗಕ್ಕಿಳಿದಿದ್ದ ಅರ್ಜುನ; ದಸರಾ ಆನೆ ಸಾವಿನ ಬಗ್ಗೆ ಡಿಎಫ್​ಓ ನೀಡಿದ ವಿವರ ಇಲ್ಲಿದೆ

ಮೈಸೂರಿನ ವಿಶ್ವವಿಖ್ಯಾತ ದಸರಾದಲ್ಲಿ 8 ಬಾರಿ ಚಾಮುಂಡೇಶ್ವರಿಯನ್ನು ಹೊತ್ತು ಅಂಬಾರಿ ಮೆರಗಿಸಿದ ಅರ್ಜುನ, ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ತನ್ನ ಶೌರ್ಯ ಪ್ರದರ್ಶಿಸಿದ್ದ. ತನ್ನ ಕೊನೆಯ ಕಾರ್ಯಾಚರಣೆಯಲ್ಲಿಯೇ ಕಾಡಾನೆ ವಿರುದ್ಧ ಹೋರಾಡಿ ಮಡಿದಿದ್ದರೂ ಹತ್ತಾರು ಜನರ ಜೀವ ಉಳಿಸಿದ್ದ. ಇದರಿಂದ ಅರ್ಜುನ ಕರ್ನಾಟಕದ ಕೋಟ್ಯಾಂತರ ಜನರ ಅಭಿಮಾನವನ್ನು ಗಳಿಸಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಅಶ್ಲೀಲ ಕಮೆಂಟ್ ಪ್ರಕರಣ: ರಮ್ಯಾ ಹಠ ಹಿಡಿದು ಕೇಸ್ ಹಾಕಿದ್ದಕ್ಕೆ ಇದೇ ಕಾರಣ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!