ಹಾಸನ: ಹಾಸನದಲ್ಲಿ ಇಂದು ಜೆಡಿಎಸ್ ಪಕ್ಷವು ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಣ್ಣೀರಧಾರೆ ಹರಿಸಿದ್ದಾರೆ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದನ್ನ ನೆನಪಿಸಿಕೊಂಡ ಜೆಡಿಎಸ್ ನಾಯಕ HD ಕುಮಾರಸ್ವಾಮಿ ಅವರು ಅದರಿಂದ ನನ್ನ ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸವಾಗಲು ನಾನೇ ಕಾರಣನಾದೆ ಎಂದು ಭಾಷಣದ ವೇಳೆ ಭಾವುಕರಾಗಿ ಕಣ್ಣೀರು ಹಾಕಿದರು. ಅಂದು ನಾನು ನನಗೆ ಅಧಿಕಾರ ಬೇಡ, ನನಗೆ ನೀವು ಬೇಕು ಎಂದೆ. ನೀವು ಬೇಕೆಂದು ಕಾಲು ಹಿಡಿದುಕೊಂಡೆ ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದರು (HD Kumaraswamy Weeping).
ಶಾಸಕ ಶಿವಲಿಂಗೇಗೌಡ ಜೆಡಿಎಸ್‌ಗೆ ಗುಡ್‌ಬೈ ಹೇಳುತ್ತಾರಾ?
ಹಾಸನದಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಯಾತ್ರೆ, ಸಮಾವೇಶದಲ್ಲಿ JDS ವರಿಷ್ಠರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರುಗಳು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ವಿರುದ್ಧ ಬಹಿರಂಗ ವೇದಿಕೆಯಲ್ಲೇ ವಾಗ್ದಾಳಿ ನಡೆಸಿದರು. ಸಮಾವೇಶಕ್ಕೆ ಗೈರಾಗಿದ್ದ ಶಾಸಕ ಶಿವಲಿಂಗೇಗೌಡ ವಿರುದ್ಧ ಕಿಡಿಕಾರಿದ ಹೊರಯ ನಾಯಕರಿಬ್ಬರೂ ಬೇರೆ ಏನಾದ್ರೂ ರಾಜಕಾರಣ ಮಾಡೋಣ. ಆದ್ರೆ ಬೆನ್ನಿಗೆ ಚೂರಿ ಹಾಕೋ ರಾಜಕಾರಣ ಮಾಡಬಾರದು ಎಂದು ಹೆಚ್‌ಡಿ ಕುಮಾರಸ್ವಾಮಿ ಅವರು ಮಾತಾಡುವಾಗ ಮೈಕ್ ಪಡೆದು, HD ದೇವೇಗೌಡ ಹೇಳಿದರು.
ಶಿವಲಿಂಗೇಗೌಡ ಸದನದಲ್ಲಿ ಮಾತಾಡೋದು ಡ್ರಾಮಾನೇ:
ನಾನು ತೆಂಗಿನ ವಿಚಾರವಾಗಿ ಪ್ರತಿಭಟನೆ ಮಾಡುತ್ತೇನೆ. ನೀವು 3 ದಿನ ಬಿಟ್ಟು ಬಂದು ಏಳಿಸಿ ಎಂದು ಹೇಳಿದ್ದರು. ಕುಮಾರಸ್ವಾಮಿಗೆ ಹೇಳಿ ಏನಾದ್ರೂ ಪರಿಹಾರ ಕೊಡಿಸಿ ಅಂದಿದ್ದರು. ಶಿವಲಿಂಗೇಗೌಡರದ್ದು ಎಂತಹ ಡ್ರಾಮಾ ಎಂದು ಹೆಚ್ ಡಿ ದೇವೇಗೌಡ ವಿಷಾದಿಸಿದರು. ಈ ವೇಳೆ, ಬಹುಶಃ ಇಂತಹವರು ಜಿಲ್ಲೆಯಲ್ಲಿ ಮತ್ತೆ ಹುಟ್ಟಲಾರರು. ಶಿವಲಿಂಗೇಗೌಡ ಸದನದಲ್ಲಿ ಮಾತಾಡೋದು ಡ್ರಾಮಾನೇ. ಕ್ಷೇತ್ರದ ಜನ ನೋಡಲಿ ಅಂತಾ ಡ್ರಾಮಾ ಮಾಡುತ್ತಾರೆ ಎಂದು ದೇವೇಗೌಡರ ಮಾತಿಗೆ ಕುಮಾರಸ್ವಾಮಿ ಧ್ವನಿಗೂಡಿಸಿದರು.
ತಪ್ಪು ಸರಿ ಮಾಡಿಕೊಳ್ಳಿ, ನಾನು ಯಾರಿಗೂ ದಮ್ಮಯ್ಯಾ ಅನ್ನಲ್ಲ. ತಪ್ಪು ತಿದ್ದಿಕೊಂಡು ಪಕ್ಷದಲ್ಲಿ ಇರೋದಾದ್ರೆ ಇರಿ. ಪಕ್ಷದಲ್ಲಿ ಇದ್ದು ಕುತ್ತಿಗೆ ಕುಯ್ಯುವ ಕೆಲಸ ಮಾಡಬೇಡಿ ಎಂದು JDS ಶಾಸಕ ಶಿವಲಿಂಗೇಗೌಡಗೆ ಎಂದು ಹೆಚ್ ಡಿ ಕುಮಾರಸ್ವಾಮಿ ನೇರ ಎಚ್ಚರಿಕೆ ನೀಡಿದರು.
ಡ್ರಾಮಾ ಯಾರು ಮಾಡಿದ್ದಾರೆ ಎಂದು ಕ್ಷೇತ್ರದ ಜನರಿಗೆ ಗೊತ್ತು; HDK-HDD ದ್ವಯರಿಗೆ ಶಾಸಕ ಶಿವಲಿಂಗೇಗೌಡ ತಿರುಗೇಟು:
ಶಿವಲಿಂಗೇಗೌಡ ನಾಟಕ ಮಾಡ್ತಾರೆ ಎಂದು HDK-HDD ದ್ವಯರ ಟೀಕೆ ವಿಚಾರವಾಗಿ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಶಾಸಕ ಕೆ ಎಂ ಶಿವಲಿಂಗೇಗೌಡ (KM Shivalinge Gowda) ಪ್ರತಿಕ್ರಿಯೆ ನೀಡಿದ್ದು ಯಾರು ಡ್ರಾಮಾ ಮಾಡಿದ್ದಾರೆ ಎಂದು ಕ್ಷೇತ್ರದ ಜನರಿಗೆ ಗೊತ್ತು. ನಾನು ಯಾವುದೇ ಡ್ರಾಮಾ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಭಿವೃದ್ಧಿ ಕೆಲಸಕ್ಕೆ ಸಿದ್ದರಾಮಯ್ಯ ಬಗ್ಗೆ ಒಳ್ಳೆ ಮಾತಾಡಿರಬಹುದು. ವಿಧಾನ ಸಭೆಯಲ್ಲಿ ನಾನು ಡ್ರಾಮಾ ಆಡ್ತಿನೊ ಏನು? ಎನ್ನೋದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ಶಿವಲಿಂಗೇಗೌಡ ಪರೋಕ್ಷ ವಾಗ್ದಾಳಿ ನಡೆಸುತ್ತಾ, ಅವರ ಬಗ್ಗೆ ನಾನು ಈಗಲೇ ಏನೂ ಹೇಳಲ್ಲ. ಯಾಕೆ ಹೀಗೆ ಮಾತನಾಡಿದ್ರಿ ಎಂದು ಅವರನ್ನು ಕೇಳುತ್ತೇನೆ. ನಾನು ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಹೀಗೆಲ್ಲಾ ಮಾತಾಡಿದ ಮೇಲೆ ಕಾರ್ಯಕರ್ತರನ್ನು ಕೇಳುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.
ಅವರು ಮಾಡಿದ ಕೆಲಸವನ್ನು ನಾವು ಇಲ್ಲಾ ಎಂದು ಹೇಳಿಲ್ಲ. ನಾಟಕ ಆಡ್ತಾರೆ ಅಂದ್ರೆ ಅರಸೀಕೆರೆ ಕ್ಷೇತ್ರವೇ ನಾಟಕೀಯ ರಾಜಕೀಯ. ದೇವೇಗೌಡರಿಗೆ ಒಂದು ಚುನಾವಣೆಯಲ್ಲಿ 13 ಸಾವಿರ ಓಟು ಬಂದಿತ್ತು. ಇಲ್ಲಿ ನಾಟಕ ಮಾಡದೆ ಓಟ್ ಪಡೆಯೋಕೆ ಆಗುತ್ತಾ.. ಶಿವಲಿಂಗೇಗೌಡ ನಾಟಕ ಮಾಡ್ತಾರೆ ಎಂದು ಟೀಕಿಸಿದ್ದ ಕುಮಾರಸ್ವಾಮಿ ದೇವೇಗೌಡ ದ್ವಯರಿಗೆ ಶಾಸಕ ಶಿವಲಿಂಗೇಗೌಡ ಮಾರ್ಮಿಕ ಉತ್ತರ ನೀಡಿದರು.
ಅವರನ್ನ ಇವರನ್ನ ಹೊಗಳ್ತಾನೆ ಕಾಲಿಗೆ ಬೀಳ್ತಾನೆ ಎಂದು ಹಾಗೆ ಹೇಳಿರಬಹುದು. ಕ್ಷೇತ್ರದ ಜನರಿಗೋಸ್ಕರ ನಾಟಕ ಮಾಡಿರಬಹುದು, ಎಲ್ಲರ ಕಾಲಿಗೂ ನಾನು ಬೀಳದೆ ಓಟ್ ತಗೊಳಕೆ ಆಗುತ್ತಾ? ಜೆಡಿಸ್ ಬಾಗಿಲು ಬಂದ್ ಆದ್ರೆ ಇನ್ನೇನು ಮಾಡೋಕೆ ಆಗುತ್ತೆ ನಮ್ಮ ಹಣೆಬರಹ ಅನ್ಕೊತಿನಿ. ನಮ್ಮ ಕ್ಷೇತ್ರದಲ್ಲಿ ಜಾತ್ರೆಗಳು ಇದ್ದಿದ್ದರಿಂದ ನಾನು ಸಮಾವೇಶಕ್ಕೆ ಹೋಗಿಲ್ಲ. ಎಟಿ ರಾಮಸ್ವಾಮಿ ಗೈರಾಗಿರಲಿಲ್ಲವೇ? ಅವರಿಗೆ ಏನೋ ಕೆಲಸದ ಒತ್ತಡ ಇರಬಹುದು. ನಾನು ಈ ಸಭೇಗೆ ಬರಲ್ಲ ಎಂದು ಮೊದಲೇ ಹೇಳಿದ್ದೆ. ನಾನು ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿ ಇಲ್ಲ. ಪಶ್ಚಾತಾಪ ಪಡೋದೊ ಏನೋ, ನೋಡೋಣ ಮೊದಲು ಅವರ ಜೊತೆ ಮಾತಾಡೋಣ ಎಂದು ಶಿವಲಿಂಗೇಗೌಡ ನುಡಿದರು.
ಇಂದಿನ ಕಾರ್ಯಕ್ರಮಕ್ಕೆ ರೇವಣ್ಣ ಮಾತ್ರ ನೀವು ಬರಲೇ ಬೇಕು ಅಂದಿದ್ರು. ನಾನು ಏಕಾಂಗಿ ಆಗಿಲ್ಲ, ಜನರ ದೃಷ್ಟಿಯಲ್ಲಿ ಏನು ಎಂದು ನೋಡೋಣ. ಜನ ಕೈಬಿಟ್ಟಾಗ ಮಾತ್ರ ನಾನು ಏಕಾಂಗಿ, ಜನ ನನ್ನ ತಿರಸ್ಕಾರ ಮಾಡಿದಾಗ ನಾನು ಏಕಾಂಗಿ. 2023 ಕ್ಕೆ ನಾನು ಚುನಾವಣೆಗೆ ನಿಂತು ಸೋತರೆ ಆಗ ನಾನು ಏಕಾಂಗಿ. ನಾನು ಈಗಲೂ ಜೆಡಿಎಸ್ ಕಟ್ಟಾಳೇ. ಆದರೆ ಅವರು ನನ್ನ ಬಗ್ಗೆ ಯಾಕೆ ಹಿಂಗದ್ರಿ ಅಂತಾ ಕೇಳ್ತೀನಿ?
ಕುಮಾರಸ್ವಾಮಿ -ನಾನು ಹೊಡೆದಾಡಿಲ್ಲ, ಬಡಿದಾಡಿಲ್ಲ ಕಿತ್ತಾಡಿಲ್ಲ. ಅವರು ಏನೋ ಸ್ಪಿರಿಟ್ ನಲ್ಲಿ ಮಾತಾಡಿರಬಹುದು. ಯಾಕಣ್ಣ ಹಿಂಗಂದೆ ಅಂತಾ ಕೇಳ್ತಿನಿ. ಕುಮಾರಸ್ವಾಮಿ ನಮ್ಮ ನಾಯಕರು ಅವರ ಬಗ್ಗೆ ಮಾತಾಡಲ್ಲ. ದೊಡ್ಡಗೌಡರು ಏನೇ ಅಂದರು ಆಶೀರ್ವಾದ ಅಂದುಕೊಳ್ತೀನಿ. ಹೊಳೆನರಸೀಪುರ, ಚನ್ನರಾಯಪಟ್ಟಣದ ಹಾಗೆ ಇಲ್ಲಿ ಭದ್ರ ಕೋಟೆ ಇಲ್ಲ. ನಾನೇನಾರ ನಾಟಕ ಮಾಡಿದ್ರೆ ಪಕ್ಷ ಕಟ್ಟೋಕೆ ಮಾಡಿದಿನಿ ಅಷ್ಟೇ. ಅವರು ಬೇರೆಯವರನ್ನ ಕ್ಯಾಂಡೇಟ್ ಮಾಡ್ತಾರೆ ಎನ್ನೋ ಮಾತು ನಡೆದಿದೆ ಎನ್ಕೊ ಮಾಹಿತಿ ಇದೆ. ನೋಡೋಣ ಅವರು ಏನು ಮಾಡ್ತಾರೆ ನೋಡ್ತಿನಿ ಆಮೇಲೆ ಮಾತಾಡ್ತಾನಿ. ಅವರ ಪ್ರತಿಕ್ರಿಯೆ ಮೇಲೆ ಮುಂದೆ ತೀರ್ಮಾನ ಮಾಡ್ತಾನಿ. ಅವರ ಪ್ರತಿಕ್ರಿಯೆ ನೋಡಿ ಆಮೇಲೆ ಜನರ ಮುಂದೆ ಹೋಗ್ತೀನಿ. ನಾನು ಯಾರಿಗೂ ಚೂರಿನೂ ಹಾಕಿಲ್ಲ; ಕತ್ತನ್ನು ಕುಯ್ದಿಲ್ಲ. ಬೆನ್ನಿಗೆ ಚೂರಿ ಹಾಕಿದ್ರು ಎಂದು ಗುಡಿಗಿದ್ದ ಕುಮಾರಸ್ವಾಮಿಗೆ ಶಿವಲಿಂಗೇಗೌಡ ಹೋಗೆ ಟಾಂಗ್ ಕೊಟ್ಟರು.
Also Read:
ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆ ಯಾವ ವಿಷಯದ ಮೇಲೆ? ಇಂದಿನ ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
Published On - 4:55 pm, Thu, 21 April 22