AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಂದರ ಸಂಸಾರಕ್ಕೆ ಗಂಡನೇ ಕೊಳ್ಳಿಯಿಟ್ಟನಾ? ಪುಟ್ಟ ಕಂದನ ಎದುರಿಗೆ ಪತ್ನಿಯ ಕೊಂದು ಆತ್ಮಹತ್ಯೆ ಅನ್ನುತ್ತಿದ್ದಾನಂತೆ

ಗಂಡ ತನಗೆ ಏನೇ ಕಿರುಕೊಳ ಕೊಟ್ಟರೂ ಮಗಳು ತವರಿಗೆ ವಿಷಯ ಮುಟ್ಟಿಸುತ್ತಿರಲಿಲ್ಲ. ಆದ್ರೆ ಸ್ನೇಹಿತರ ಬಳಿ ತನಗಾಗ್ತಿರೊ ನೋವು ಹೇಳಿಕೊಂಡಿದ್ದಾಳೆ. ಇದೆಲ್ಲವೂ ತಿಳಿದು ಸರಿಮಾಡುವಷ್ಟರಲ್ಲಿ ಮಗಳೇ ಇಲ್ಲವಾಗಿದ್ದಾಳೆ ಎಂದು ಹೆತ್ತವರು ಕಣ್ಣೀರಿಡುತ್ತಿದ್ದಾರೆ. ನಿನ್ನೆ ಮುಂಜಾನೆ 4 ಗಂಟೆ ವೇಳೆಯಲ್ಲಿ ಮಗಳ ಸಾವಿನ ಬಗ್ಗೆ ತಿಳಿಸಿದ್ದಾರೆ. ಬಂದು ನೋಡಿದ್ರೆ ನೆಲಕ್ಕೆ ಕಾಲು ತಾಗುವ ಸ್ಥಿತಿಯಲ್ಲಿದ್ದು ಆತ್ಮಹತ್ಯೆ ಎಂದು ಹೇಳ್ತಾ ಇದಾರೆ.

ಸುಂದರ ಸಂಸಾರಕ್ಕೆ ಗಂಡನೇ ಕೊಳ್ಳಿಯಿಟ್ಟನಾ? ಪುಟ್ಟ ಕಂದನ ಎದುರಿಗೆ ಪತ್ನಿಯ ಕೊಂದು ಆತ್ಮಹತ್ಯೆ ಅನ್ನುತ್ತಿದ್ದಾನಂತೆ
ಪುಟ್ಟ ಕಂದನ ಎದುರಿಗೆ ಪತ್ನಿಯ ಕೊಂದು ಆತ್ಮಹತ್ಯೆ ಅನ್ನುತ್ತಿದ್ದಾನಂತೆ ಗಂಡ
ಮಂಜುನಾಥ ಕೆಬಿ
| Updated By: ಸಾಧು ಶ್ರೀನಾಥ್​|

Updated on: Mar 27, 2024 | 1:09 PM

Share

ಅದು ಮುದ್ದಾದ ಗಂಡ ಹೆಂಡಿರ ಸುಂದರ ಜೋಡಿ.. ಹಸೆಮಣೆ ಏರಿ ಮೂರೂವರೆ ವರ್ಷವಾಗಿದ್ದ ದಂಪತಿಗೆ ಮುದ್ದಾದ ಮಗನೂ ಇದ್ದ. ಆದ್ರೆ ವಿನಾಕಾರಣ ಪತ್ನಿಗೆ ಕಿರುಕುಳ ಕೊಡ್ತಿದ್ದ ಪತಿ ವರದಕ್ಷಿಣೆಗಾಗಿ ಹಿಂಸೆ ಕೊಡೋಕೆ ಶುರು ಮಾಡಿದ್ದನಂತೆ. ಎಲ್ಲವನ್ನೂ ಸಹಿಸಿಕೊಂಡು ಮಗುವಿನಾಗಿ ಸುಮ್ಮನಿದ್ದ ಮಹಿಳೆ (wife) ನಿನ್ನೆ ಮುಂಜಾನೆ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಗಂಡನೆ (husband) ಹೆಂಡತಿಯನ್ನ ಕೊಂದು (murder) ಆತ್ಮಹತ್ಯೆ (suicide) ನಾಟಕ ಮಾಡ್ತಿದ್ದಾನೆ ಅನ್ನೋದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು ಸೂಕ್ತ ತನಿಖೆ ನಡೆಸಿ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಹೌದು ಅದು ಗಂಡ ಹೆಂಡತಿ ಮುದ್ದಾದ ಮಗ ಇದ್ದ ಸುಂದರ ಕುಟುಂಬ. ದುರ್ಭಿಕ್ಷದ ಕೊರೊನಾ ಕಾಲದಲ್ಲಿಯೇ ಮದುವೆ ಮಾಡಿದ್ದರೂ ವರದಕ್ಷಿಣ, ವರೋಪಚಾರ ಎಂದೆಲ್ಲಾ ಕೊಟ್ಟು ಮಾಡಿ ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು. ತವರು ಮನೆಯವರು ಮಗಳು ಚೆನ್ನಾಗಿರ್ತಾಳೆ ಎಂದು ಕನಸು ಕಂಡಿದ್ದರು. ಆದ್ರೆ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಅದೇನಾಯ್ತೊ ಗೊತ್ತಿಲ್ಲ. ನಿನ್ನೆ ಮಂಗಳವಾರ ಮುಂಜಾನೆ ಶುಭ (28) ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು ಗಂಡ ಸುನಿಲ್ ಕುಮಾರನೇ ಕೊಂದು ಮಗಳನ್ನ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಾನೆ ಎಂದು ಮನೆಯವರು ಆರೋಪಿಸಿದ್ದಾರೆ (Hassan News).

ಗಂಡ ತನಗೆ ಏನೇ ಕಿರುಕೊಳ ಕೊಟ್ಟರೂ ಮಗಳು ತವರಿಗೆ ವಿಷಯ ಮುಟ್ಟಿಸುತ್ತಿರಲಿಲ್ಲ. ಆದ್ರೆ ಸ್ನೇಹಿತರ ಬಳಿ ತನಗಾಗ್ತಿರೊ ನೋವು ಹೇಳಿಕೊಂಡಿದ್ದಾಳೆ. ಇದೆಲ್ಲವೂ ತಿಳಿದು ಸರಿಮಾಡುವಷ್ಟರಲ್ಲಿ ಮಗಳೇ ಇಲ್ಲವಾಗಿದ್ದಾಳೆ ಎಂದು ಹೆತ್ತವರು ಕಣ್ಣೀರಿಡುತ್ತಿದ್ದಾರೆ. ನಿನ್ನೆ ಮುಂಜಾನೆ 4 ಗಂಟೆ ವೇಳೆಯಲ್ಲಿ ಮಗಳ ಸಾವಿನ ಬಗ್ಗೆ ತಿಳಿಸಿದ್ದಾರೆ. ಬಂದು ನೋಡಿದ್ರೆ ನೆಲಕ್ಕೆ ಕಾಲು ತಾಗುವ ಸ್ಥಿತಿಯಲ್ಲಿದ್ದು ಆತ್ಮಹತ್ಯೆ ಎಂದು ಹೇಳ್ತಾ ಇದಾರೆ. ಪುಟ್ಟ ಮಗುವನ್ನ ಮನೆಯೊಳಗೆ ಕೂಡಿ ಹಾಕಿದ್ದಾರೆ ಎಂದು ನೋವು ತೋಡಿಕೊಳ್ತಿರೊ ತಾಯಿ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಮೊರೆಯಿಟ್ಟಿದ್ದಾರೆ.

ಮೂಲತಃ ಚಿಕ್ಕಮಗಳೂರಿನ ಗವೇನಹಳ್ಳಿಯವರಾದ ಶುಭಾರನ್ನ ಹಾಸನ ತಾಲ್ಲೂಕಿನ ಉದ್ದೂರು ಕೊಪ್ಪಲು ನಿವಾಸಿ ಸುನಿಲ್ ಅವರಿಗೆ ಮೂರೂವರೆ ವರ್ಷದ ಹಿಂದೆ ಮದುವೆ ಮಾಡಲಾಗಿತ್ತಂತೆ. ಚಿಕ್ಕಮಗಳೂರಿನಲ್ಲೇ ಕೆಲಸ ಮಾಡಿಕೊಂಡಿದ್ದ ಸುನೀಲ್ ಮದುವೆ ಬಳಿಕ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಗಂಡ ಹೆಂಡತಿ ನಡುವೆ ಹಲವು ಬಾರಿ ಗಲಾಟೆಯಾಗಿದ್ದರೂ… ಇದ್ದ ಪುಟ್ಟ ಕಂದನ ಭವಿಷ್ಯ ಹಾಳಾಗುತ್ತೆ ಎಂದು ಶುಭಾ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದಳಂತೆ.

Also Read: ವಿಜಯಪುರದಲ್ಲಿ ಅಕ್ಷರಶಃ ಬಾವಿಯ ಆಳಕ್ಕಿಳಿದು ಜಾಲಾಡಿದ ಇನ್ಸ್​ಪೆಕ್ಟರ್​​​ ಸಂಜೀವ್ ಕಾಂಬಳೆ ಹಾಗೂ ಟೀಂ ಜೋಡಿ ಶವಗಳ ಪ್ರಕರಣ ಭೇದಿಸಿದ್ದು ಹೇಗೆ ಗೊತ್ತಾ?

ಮೊನ್ನೆ ಸಂಜೆ ತಾಯಿಗೆ ಫೋನ್ ಮಾಡಿದ್ದ ಶುಭ ಚೆನ್ನಾಗಿಯೇ ಮಾತನಾಡಿದ್ದಾಳೆ, ಆದ್ರೆ ಇಂದು ಮುಂಜಾನೆ 4 ಗಂಟೆ ವೇಳೆಗೆ ಸಂಬಂಧಿಕರು ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಬನ್ನಿ ಎಂದು ಹೇಳಿದರಂತೆ. ಬಂದು ನೋಡಿದ್ರೆ ಮೃತದೇಹವನ್ನ ಕೆಳಗಿಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳ್ತಿರೊ ಸ್ಥಳದಲ್ಲಿ ಆಕೆಯ ಎತ್ತರಕ್ಕೆ ನಿಲ್ಲೋ ಸ್ಥಳವೇ ಇಲ್ಲ.

ಮಗುವನ್ನ ಕೇಳಿದ್ರೆ ಅಪ್ಪ ಹೊಡೆದ ಎಂದು ಹೇಳುತ್ತಿದೆ. ಇನ್ನು ಏನೂ ಹೇಳದಂತೆ ಮಗುವಿಗೆ ಹೆದರಿಸಿದ್ದಾರೆ. ಶುಭ ಮೈಮೇಲೆ ಗಾಯದ ಗುರ್ತುಗಳಿವೆ, ಆತನ ಮೈ ಮೇಲೂ ಗಾಯದ ಗುರ್ತಿದೆ, ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡನೇ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರ ಆರೋಪಿಸುತ್ತಿದ್ದಾರೆ. ಈ ಎಲ್ಲಾ ಅನುಮಾನಗಳ ನಡುವೆ ಗಂಡ ಹಾಗೂ ಅವರ ಮನೆಯವರು ನಾಪತ್ತೆಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ತವರು ಮನೆಯವರು ಮಗಳನ್ನ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಪೊಲೀಸರು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಶುಭ ಸಹೋದರಿ ಪಲ್ಲವಿ ಒತ್ತಾಯಿಸಿದ್ದಾರೆ.

ಒಟ್ನಲ್ಲಿ ಮೊನ್ನೆವರೆಗೂ ಚೆನ್ನಾಗಿಯೇ ತಾಯಿ ಜೊತೆಗೆ ಮಾತನಾಡಿದ್ದ ಶುಭ ಮರುದಿನ ಬೆಳಗಾಗುವಷ್ಟರಲ್ಲಿ ಸಾವಿಗೀಡಾಗಿದ್ದೇಕೆ? ಆಕೆಯ ಸಾವಿನಲ್ಲಿ ಪತಿಯ ಕೈವಾಡ ಇದೆ ಎನ್ನೋ ಸಂಬಂಧಿಕರ ಆರೋಪದ ನಡುವೆ ಪ್ರಕರಣ ದಾಖಲು ಮಾಡಿಕೊಂಡಿರೊ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದು ತನಿಖೆ ಬಳಿಕ ಸತ್ಯ ಬಯಲಾಗಬೇಕಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ