ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂದು ತಪಸ್ಸು ಮಾಡುತ್ತಿರುವವರಲ್ಲಿ ನಾನು ಒಬ್ಬ: ಮಾಜಿ ಶಾಸಕ ಪ್ರೀತಂಗೌಡ

ಮೋದಿ ಪ್ರಧಾನಮಂತ್ರಿ ಆಗಬೇಕೆಂದು ಯಾರೆಲ್ಲಾ ಇಷ್ಟಪಟ್ಟು ಬರುತ್ತಾರೆ, ಬೆಂಬಲ ಕೊಡುತ್ತಾರೆ ಅದಕ್ಕೆ ಸ್ವಾಗತ ಇದೆ. ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ತಪಸ್ಸು ಮಾಡುತ್ತಿರುವವರಲ್ಲಿ ನಾನು ಒಬ್ಬ. ಮೋದಿ ಅನ್ನು ಪ್ರಧಾನಮಂತ್ರಿ ಮಾಡಬೇಕು, ದೇಶಕ್ಕೆ ಒಳ್ಳೆಯದಾಗಬೇಕು ಎಂದು ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಹೇಳಿದ್ದಾರೆ.

ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂದು ತಪಸ್ಸು ಮಾಡುತ್ತಿರುವವರಲ್ಲಿ ನಾನು ಒಬ್ಬ: ಮಾಜಿ ಶಾಸಕ ಪ್ರೀತಂಗೌಡ
ಮಾಜಿ ಶಾಸಕ ಪ್ರೀತಂಗೌಡ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 13, 2023 | 9:56 PM

ಹಾಸನ, ಸೆಪ್ಟೆಂಬರ್​ 13: ಮೈತ್ರಿ ಬಗ್ಗೆ ಬಿಜೆಪಿಯ ಯಾವುದೇ ಮುಖಂಡರು, ನಿರ್ಧಾರ ತೆಗೆದುಕೊಳ್ಳುವ ನಾಯಕರು ಮೈತ್ರಿ ಎಂದು ಹೇಳಿಲ್ಲ. ಮೈತ್ರಿ ಎಂದು ಹೇಳಿರುವವರು ಯಾರು ಎಂದು ಗಮನಿಸಬೇಕು. ಯಾರಿಗೋ ಕಷ್ಟ ಇದೆ. ಆ ಕಷ್ಟದಿಂದ ಪಾರಾಗುವದಕ್ಕೆ ಮೈತ್ರಿ ಎಂದು ಅನೌನ್ಸ್ ಮಾಡುತ್ತಾರೆ ಎಂದು ಮಾಜಿ ಶಾಸಕ ಪ್ರೀತಂಗೌಡ (Preetham Gowda) ಕೆಂಡಾಮಂಡಲರಾಗಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು ಎಂದು ತಪಸ್ಸು ಮಾಡುತ್ತಿರುವವರಲ್ಲಿ ನಾನು ಒಬ್ಬ ಎಂದು ಹೇಳಿದ್ದಾರೆ.

ಮೋದಿಯವರು ಪ್ರಧಾನಮಂತ್ರಿ ಆಗಬೇಕೆಂದು ಯಾರೆಲ್ಲಾ ಇಷ್ಟಪಟ್ಟು ಬರುತ್ತಾರೆ, ಬೆಂಬಲ ಕೊಡುತ್ತಾರೆ ಅದಕ್ಕೆ ಸ್ವಾಗತ ಇದೆ. ಅವರ ಕಾರ್ಯಕರ್ತರನ್ನು, ಪಕ್ಷ ಉಳಿಸಿಕೊಳ್ಳಬೇಕು ಎನ್ನುವುದಕ್ಕೆ ಮೈತ್ರಿ ಪ್ರಸ್ತಾಪ ಮಾತನಾಡಿದರು ಎಂದು ಕಿಡಿಕಾರಿದ್ದಾರೆ.

ಅವರು ಅವರ ಕಾರ್ಯಕರ್ತರು, ಅವರ ಪಕ್ಷ ಉಳಿಸಿಕೊಳ್ಳಲು ಮೈತ್ರಿ ಅವಶ್ಯಕತೆ ಅನಿವಾರ್ಯ ಇದೆ ಅಂತ ಹೇಳಿದರೆ, ಆ ಮೈತ್ರಿ ಭಾರತೀಯ ಜನತಾ ಪಕ್ಷಕ್ಕೆ ಅವಶ್ಯಕತೆ ಇಲ್ಲಾ. ಮೋದಿಯವರು ಪ್ರಧಾನಮಂತ್ರಿ ಮಾಡಬೇಕು, ದೇಶಕ್ಕೆ ಒಳ್ಳೆಯದಾಗಬೇಕು, ರಾಷ್ಟ್ರೀಯತೆ ವಿಚಾರ ಅಂತ ಬಂದರೆ ಅವರು ನಮ್ಮ ಶತ್ರುಗಳಾದರು ಒಪ್ಪಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಈ ನಾಡಿನ ಹಿತರಕ್ಷಣೆಗಾಗಿ ನಾವು ಈ ಮೈತ್ರಿಗೆ ಮುಂದಾಗಿದೇವೆ; ಹಾಸನದಲ್ಲಿ ಹೆಚ್​ಡಿ ಕುಮಾರಸ್ವಾಮಿ

ಯಾರೋ ಒಬ್ಬರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕು, ನಮ್ಮ ಪಕ್ಷ ಹೋಗುತ್ತಿದೆ. ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು. ಹಾಗಾಗಿ ಈ ಮೈತ್ರಿ ಅನಿವಾರ್ಯ ಅಂತ ಹೇಳಿದರೆ, ಅದು ಮತ್ಲಬಿ ರಾಜಕಾರಣ ಆಗುತ್ತೆ, ಆ ಮತ್ಲಬಿ ರಾಜಕಾರಣ ಅವಶ್ಯಕತೆ ಬಿಜೆಪಿ ಕಾರ್ಯಕರ್ತರಿಗೆ ಇಲ್ಲಾ. ನಾನೊಬ್ಬ ಕಾರ್ಯಕರ್ತ ಹಿಡನ್ ಅಜೆಂಡಾ ಇಟ್ಕೊಂಡು, ಅವರ ಪಕ್ಷ, ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಂಡರೆ ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು ಒಪ್ಪೋದಿಲ್ಲ, ಅದರಲ್ಲಿ ಪ್ರೀತಂಗೌಡ ಕೂಡ ಒಬ್ಬ ಎಂದು ಹೇಳಿದ್ದಾರೆ.

ನಾವು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡುತ್ತಿದ್ದೇವೆ

28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಿಲ್ಲಲಿ, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಬೇಕು ಅಂತ ಬಂದರೆ ಸ್ವಾಗತವಿದೆ. ಬಿಜೆಪಿ ಪಕ್ಷ ಉಳಿಸಿಕೊಳ್ಳಲು ನಮಗೆ ಗೊತ್ತಿದೆ. ನಾವು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಹಾಸನದಲ್ಲಿ ಅವರ ಕುಟುಂಬದವರು ಅಭ್ಯರ್ಥಿ ಆಗುತ್ತಾರೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಉಳಿಸಲು ನಾನ್ಯಾಕೆ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಒಪ್ಪಲ್ಲ.

ಇದನ್ನೂ ಓದಿ: ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ, ವ್ಯಂಗ್ಯ

ನಾಲ್ಕು ತಿಂಗಳ‌ ಹಿಂದೆ, ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಮಾಜಿ ಮಂತ್ರಿ, ಸಂಸದರು, ಎಂಎಲ್‌ಸಿ ಬಂದು ನಮ್ಮ ವಿರುದ್ಧ ಚುನಾವಣೆ ಮಾಡಿದ್ದಾರೆ. ಈಗ ಪಕ್ಷ ಉಳಿಸಿಕೊಳ್ಳಬೇಕು, ಬಿಜೆಪಿಯವರು ಓಟು ಹಾಕುತ್ತಾರೆ ಅಂತ ಹೇಳಿದರೆ, ರಾಜಕಾರಣ ಗಣಿತವಲ್ಲ, ಕೆಮಿಸ್ಟ್ರಿ ಅನ್ನೊಂದು ನನಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಕೆಮಿಸ್ಟ್ರಿ ಹಾಸನ ರಾಜಕಾರಣದಲ್ಲಂತೂ ನಡೆಯಲ್ಲ. ನಾನು ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.

ಮೋದಿ‌ ಮುಖ ನೋಡಿ ಓಟು ಹಾಕುತ್ತಾರೆ

ಪ್ರೀತಂಗೌಡನನ್ನ, ಜಿಲ್ಲೆಯಿಂದ ಓಡಿಸಿ, ರಾಜಕೀಯವಾಗಿ ಮುಗಿಸಿ, ನಾನು ರಾಜಕಾರಣ ಮಾಡಬಾರದು ಅನ್ನುವ ರೀತಿಯಲ್ಲಿ ಮಾತನಾಡಿದ್ದರು. ಈಗ ಅವರು ಕಾರ್ಯಕರ್ತರ ಬಳಿ ಬಂದು ಓಟು ಹಾಕಿ ಎಂದು ಕೇಳುವ ಮನಸ್ಥಿತಿ ಹೇಗೆ ಬರುತ್ತೆ. ದೇಶದ ಪರಿಸ್ಥಿತಿಗೆ ಕಂಡಿತ ನರೇಂದ್ರ ಮೋದಿಯವರ ಅವಶ್ಯಕತೆ ಇದೆ ಎಂದು ಬೆಂಬಲ ನೀಡಲಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೀಟ್ ಕೇಳಿದರೆ ರಾಜ್ಯ ನಾಯಕರು ಬಿಟ್ಟುಕೊಡಲಿ, ನಮ್ಮ ಅಭ್ಯಂತರವಿಲ್ಲ. ಈಗ ನಡೆಯುತ್ತಿರುವುದು ಲೋಕಸಭಾ ಚುನಾವಣೆ, ಮೋದಿ‌ ಮುಖ ನೋಡಿ ಓಟು ಹಾಕುತ್ತಾರೆ. ಅಪ್ಪಿತಪ್ಪಿ ಒಂದೆರಡು ಸೀಟ್ ಗೆಲ್ಲುವ ಹಾಗಿದ್ದರೆ ಅವರು ಮೈತ್ರಿಗೆ ಬರುತ್ತಿರಲಿಲ್ಲ. ಗೆಲ್ಲುವುದು ಕಷ್ಟ ಎನ್ನುವ ಕಾರಣಕ್ಕೆ ಇವತ್ತು ಬಿಜೆಪಿ ಜೊತೆ ಮೈತ್ರಿ ಎಂದು ಯೋಚನೆ ಮಾಡುವ ಪರಿಸ್ಥಿತಿ ಬಂದಿರುವುದು ಎಂದರು.

ಮಾಜಿಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಶಾಸಕ ಪ್ರೀತಂಗೌಡ ವಾಗ್ದಾಳಿ

ಮೈತ್ರಿ ಹೇಳಿಕೆ ಕುಮಾರಸ್ವಾಮಿ ಅವರ ಅನಿಸಿಕೆ, ಬಿಜೆಪಿ ಕಾರ್ಯಕರ್ತರ ಅನಿಸಿಕೆ ಹೇಳಲು ಅವರಿಗೆ ಯಾರು ಅಧಿಕಾರ ಕೊಟ್ಟಿರುವುದು. ಅವರು ಹಾಸನದಲ್ಲಿ ಬಂದು ಮೂರು ಸಾರಿ ರೌಂಡ್ ಹೊಡಿಯುವ ಬದಲು ಅದೇ ಪಕ್ಕದ ರಾಮನಗರದಲ್ಲಿ ಅದೇ ಎಫರ್ಟ್ ಹಾಕಿದ್ದರೆ, ಅವರ ಮಗನನ್ನು ಗೆಲ್ಲಿಸಿಕೊಳ್ಳಬಹುದಿತ್ತು. ನೀನೋಂದು ಬಗೆದರೆ ದೈವವೊಂದು ಬಗೆದಿತು ಅಂತ ಮಾತು ಹೇಳಿರುವುದಕ್ಕೆ ಅದಕ್ಕೆ ದೇವೇಗೌಡರು, ಕುಮಾರಸ್ವಾಮಿ ಅವರು ಹಾಸನದ ಮೇಲೆ‌ ಬಾರಿ ಪ್ರೀತಿ ಇಟ್ಟುಕೊಂಡು ಬಂದಿದ್ದರು. ಅದೇ ಪ್ರೀತಿ ಅವರ ಮೊಮ್ಮಗ, ಮಗನ ಮೇಲೆ ಇಟ್ಕಂಡಿದ್ದರೆ ರಾಮನಗರ ಗೆದ್ದಿರುವುದು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:11 pm, Wed, 13 September 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ