ಸಂಸತ್‌ನಲ್ಲಿ ನಾನು ಏಕಾಂಗಿಯಾದೆ, ಜಲ ವಿವಾದದ ಬಗ್ಗೆ ನಮ್ಮ ರಾಜ್ಯದ ನಾಯಕರು ಒಂದಾಗಲ್ಲ: ಹೆಚ್‌ಡಿ ದೇವೇಗೌಡ ಬೇಸರ
ತಮಿಳುನಾಡಿನವರು ಜೀವ ಹಿಂಡುತ್ತಾರೆ, ಹೇಮಾವತಿ ನೀರು ಪಡೆಯಲು ಶಾಸಕ ರಾಮಸ್ವಾಮಿ ಹೋರಾಡುತ್ತಿದ್ದಾರೆ. ಸಂಸತ್‌ನಲ್ಲಿ ನಾನು ಮಾತನಾಡಲು ಯತ್ನಿಸಿದೆ. ಆದ್ರೆ ತಮಿಳುನಾಡಿನ ಎಲ್ಲಾ ಪಕ್ಷಗಳ ಸಂಸದರು ಒಂದಾದರು. ಹೀಗಾಗಿ ಸಂಸತ್‌ನಲ್ಲಿ ಈ ಬಗ್ಗೆ ಮಾತನಾಡಲು ನನಗೆ ಆಗಲಿಲ್ಲ. -ಹೆಚ್‌ಡಿ ದೇವೇಗೌಡ
ಹಾಸನ: ಹೇಮಾವತಿ ಜಲಾಶಯವನ್ನು ಕಟ್ಟಿಸಿದ್ದು ನಾನೇ. ಆದ್ರೆ ಡ್ಯಾಂನ ನೀರನ್ನು ಬಳಸಲು ನಮಗೆ ಅವಕಾಶ ನೀಡ್ತಿಲ್ಲ ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿಯಲ್ಲಿ JDS ವರಿಷ್ಠ ಹೆಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನವರು ಜೀವ ಹಿಂಡುತ್ತಾರೆ, ಹೇಮಾವತಿ ನೀರು ಪಡೆಯಲು ಶಾಸಕ ರಾಮಸ್ವಾಮಿ ಹೋರಾಡುತ್ತಿದ್ದಾರೆ. ಸಂಸತ್‌ನಲ್ಲಿ ನಾನು ಮಾತನಾಡಲು ಯತ್ನಿಸಿದೆ. ಆದ್ರೆ ತಮಿಳುನಾಡಿನ ಎಲ್ಲಾ ಪಕ್ಷಗಳ ಸಂಸದರು ಒಂದಾದರು. ಹೀಗಾಗಿ ಸಂಸತ್‌ನಲ್ಲಿ ಈ ಬಗ್ಗೆ ಮಾತನಾಡಲು ನನಗೆ ಆಗಲಿಲ್ಲ. ನಾನು ಒಬ್ಬನೇ ಆದೆ, ನಮ್ಮದು ಮೂರು ಪಕ್ಷ, ಮೂರು ಗುಂಪು. ಜಲ ವಿವಾದದ ಬಗ್ಗೆ ನಮ್ಮ ರಾಜ್ಯದ ನಾಯಕರು ಒಂದಾಗಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ. ನನಗೆ ಶಕ್ತಿ ಇರುವವರೆಗೂ ಈ ನಾಡಿಗಾಗಿ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ, JDS ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಟಿ.ಮಾಯಗೌಡನಹಳ್ಳಿಯಲ್ಲಿ ಗ್ರಾಮದಲ್ಲಿ ನಂಜುಂಡೇಶ್ವ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ವೇಳೆ ಈ ರೀತಿ ಕೇಳಿಕೆ ನೀಡಿದ್ದಾರೆ. ನಾವು ಯಾವತ್ತು ಅಧಿಕಾರಕ್ಕೆ ರಾಜಕೀಯ ಮಾಡಿಲ್ಲ. ತಾತ್ವಿಕ ವಿಚಾರಕ್ಕೆ ರಾಜಕೀಯ ಮಾಡಿದ್ದೀವಿ. ದೈವದ ಆಟ ನೋಡಿ ಒಬ್ಬ ಮಗ ಹಾಸನ, ಇನ್ನೊಬ್ಬ ಮಗ ರಾಮನಗರ. ಅಣ್ಣ ತಮ್ಮ ಯಾವತ್ತಾದ್ರು ಜಗಳ ಆಡ್ತಾರಾ ಅಂದ್ರೆ ಇಲ್ಲವೇ ಇಲ್ಲಾ. ಕುಮಾರಸ್ವಾಮಿ ಫಿಲಂ ಪ್ರಡ್ಯೂಸರ್ ಆಗಿದ್ದರು, ಆ ಭಾಗದ ಜನ ಎಳೆದುಕೊಂಡು ಬಂದರು. ಸೋತಿರಬಹುದು ಗೆದ್ದಿರಬಹುದು, ಆದರೆ ಜನರಿಗಾಗಿ ಕೆಲಸ ಮಾಡಿದ್ದಾರೆ. ನಾನು ಪ್ರಧಾನಿ ಆಗಿದ್ದೆ ಮಹಿಳೆಯರಿಂದ ನಾನು ಪ್ರಧಾನಿ ಆದಾಗ 16 ಸ್ಥಾನ ಗೆಲ್ಲಿಸಿಕೊಟ್ಟಿದ್ದರು. ಈ ಗ್ರಾಮಕ್ಕೆ 1962 ರಲ್ಲಿ ಬಂದಿದ್ದೆ, ನಿಮ್ಮನ್ನ ನೋಡಬೇಕು ಬನ್ನಿ ಎಂದರು. ನನ್ನ ರಾಜಕೀಯ ಏಳಿಗೆ ಹಿಂದೆ ಈ ಊರಿನ ಜನರು ಇದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಹಳೆ ದಿನಗಳನ್ನ ನೆನೆದಿದ್ದಾರೆ. ಚುನಾವಣೆ ಸಂದರ್ಭ ನಾನಿಲ್ಲಿಗೆ ಬರೊದು ಸತ್ಯ, ಪಕ್ಷ ಗೆಲ್ಲಿಸಿ ಎಂದು ಕೈ ಮುಗಿಯೋದು ಸತ್ಯ. ಮುಂದಿನ ಚುನಾವಣೆ ಗಾಗಿ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Oksana Shvets: ಕೀವ್ನ ವಸತಿ ಕಟ್ಟಡದ ಮೇಲೆ ರಷ್ಯಾ ದಾಳಿ; ಉಕ್ರೇನ್ನ ಖ್ಯಾತ ನಟಿ ದುರ್ಮರಣ
ಢಾಕಾದಲ್ಲಿ ಇಸ್ಕಾನ್ ದೇವಾಲಯ ಧ್ವಂಸಗೊಳಿಸಿದ ದುಷ್ಕರ್ಮಿಗಳ ಗುಂಪು; ಮೂವರು ಭಕ್ತರಿಗೆ ಗಾಯ