ಗೋಧ್ರಾದಲ್ಲಿ ಗರ್ಭಿಣಿ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ, ಮಗು ಹೊರತೆಗೆದ ದೃಶ್ಯವೂ ಇದೆ -ಎಚ್ಚರಿಸಿದ ಹೆಚ್ ​ಡಿ ಕುಮಾರಸ್ವಾಮಿ

The Kashmir Files: ಸಿನಿಮಾವನ್ನ ಎಮೋಷನಲಿ ಸಕ್ಸಸ್ ಆಗೋಕೆ ಜನರ ಹೃದಯಕ್ಕೆ ಹತ್ತಿರ ಆಗುವಂತೆ ಮಾಡ್ತಾರೆ. ಗೋಧ್ರಾದಲ್ಲಿ ಗರ್ಭಿಣಿ ಹೆಣ್ಣುಮಕ್ಕಳ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ ಮಗು ಹೊರತೆಗೆದ ದೃಶ್ಯಕೂಡ ನಡೆದು ಹೋಗಿದೆ. ಇಂತವೆಲ್ಲಾ ಮತ್ತೆ ಮುಂದುವರೆಸಿಕೊಂಡು ಹೋಗಬೇಕಾ, ಇದು ಆಗಬಾರದು ಎನ್ನೋದು ನನ್ನ ಅಭಿಪ್ರಾಯ - ಹೆಚ್​ಡಿ ಕುಮಾರಸ್ವಾಮಿ

ಗೋಧ್ರಾದಲ್ಲಿ ಗರ್ಭಿಣಿ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ, ಮಗು ಹೊರತೆಗೆದ ದೃಶ್ಯವೂ ಇದೆ -ಎಚ್ಚರಿಸಿದ ಹೆಚ್ ​ಡಿ ಕುಮಾರಸ್ವಾಮಿ
ಗೋಧ್ರಾದಲ್ಲಿ ಗರ್ಭಿಣಿ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ, ಮಗು ಹೊರತೆಗೆದ ದೃಶ್ಯಕೂಡ ನಡೆದು ಹೋಗಿದೆ - ಎಚ್ಚರಿಸಿದ ಹೆಚ್​ಡಿ ಕುಮಾರಸ್ವಾಮಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 18, 2022 | 4:15 PM

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸುದ್ದಿಗಾರರೊಂದಿಗೆ ಮಾತನಾಡಿದರು. ದಿ ಕಾಶ್ಮೀರಿ ಫೈಲ್ಸ್​ ಸಿನಿಮಾ (The Kashmir Files) ಬಗ್ಗೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ ಅವರು ಹತ್ಯಾಕಂಡಗಳು ಮಹಾಭಾರತ, ಕುರುಕ್ಷೇತ್ರ ಕಾಲದಿಂದಲೂ ನಡೆದುಕೊಂಡು ಬಂದಿವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜನೆ ಆದಾಗ 20 ಲಕ್ಷ ಕುಟುಂಬಗಳ ಬಲಿದಾನ ಆಗಿದೆ. ದೇಶದ ಹಿಂದಿನ ಚರಿತ್ರೆ ಹೀಗಿರುವಾಗ ಮತ್ತೆ ಇಂತಹ ರಕ್ತಪಾತವೇ ಮುಂದುವರಿದುಕೊಂಡು ಬರಬೇಕಾ? ಅವರು ಸಿನಿಮಾ ತೆಗೆದಿರೊದು ನೋವು ಹೇಳಿಕೊಂಡಿರೋದು ಎಲ್ಲವೂ ನಡೆದಿದೆ. ಆದರೆ ಅದು ಎಷ್ಟರಮಟ್ಟಿಗೆ ನಡೆದಿದೆ ನಾನು ಹೋಗಿ ನೋಡಿಲ್ಲ.

ಸಿನಿಮಾವನ್ನ ಎಮೋಷನಲಿ ಸಕ್ಸಸ್ ಆಗೋಕೆ ಜನರ ಹೃದಯಕ್ಕೆ ಹತ್ತಿರ ಆಗುವಂತೆ ಮಾಡ್ತಾರೆ. ಗೋಧ್ರಾದಲ್ಲಿ ಗರ್ಭಿಣಿ ಹೆಣ್ಣುಮಕ್ಕಳ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ ಮಗು ಹೊರತೆಗೆದ ದೃಶ್ಯಕೂಡ ನಡೆದು ಹೋಗಿದೆ (2002 Gujarat riots). ಇಂತವೆಲ್ಲಾ ಮತ್ತೆ ಮುಂದುವರೆಸಿಕೊಂಡು ಹೋಗಬೇಕಾ, ಇದು ಆಗಬಾರದು ಎನ್ನೋದು ನನ್ನ ಅಭಿಪ್ರಾಯ. ನಾವೇನಾದ್ರು ನಿಜ ಹೇಳೋಕೆ ಹೋದ್ರೆ ಅದನ್ನ ತಿರುಚುತ್ತಾರೆ ಏನು ಮಾಡೋದು. ಈಗ ಜನರ ಅಭಿವೃದ್ಧಿ ಕೆಲಸದ ಮೇಲೆ ಓಟ್ ಕೇಳ್ತಾ ಇಲ್ಲಾ, ಅವರವರದೇ ಅದ ಅಜೆಂಡಾ ಇಟ್ಟುಕೊಂಡಿದಾರೆ. ಭಾವನಾತ್ಮಕ ವಿಚರಗಳ ಮೇಲೆ ಮತ ಕೇಳಲು ಹೊರಟಿದ್ದಾರೆ. ಕೊನೆಗೆ ಇದಕ್ಕೆ ಪ್ರಾಯಶ್ಚಿತ್ತ ಪಡೋದು ಅಮಾಯಕ ಜನರಲ್ಲವೆ? ಅಧಿಕಾರ ಯಾರಿಗೂ ಶಾಶ್ವತ ಅಲ್ಲಾ, ಯಾವ ವಂಶ ಕೂಡ ಉಳಿದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಜನರೇ ಅಂತಿಮ ತೀರ್ಮಾನ ಮಾಡೋರು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ​ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಎಚ್ಚರಿಸಿದರು.

ಹಿಜಾಬ್‌ ಯಾಕೆ ದೊಡ್ಡದು ಮಾಡ್ತೀರಾ… ಸರ್ಕಾರವೇ ಈ ಬಗ್ಗೆ ಕಾಂಪ್ರೊಮೈಸ್ ಮಾಡಲು ಮುಂದಾಗಲಿ: ಹಿಜಾಬ್‌ ಸಂಬಂಧ ನಾನು ನೀಡಿದ್ದ ಹೇಳಿಕೆ ತಿರುಚಲಾಗಿದೆ. ಹೈಕೋರ್ಟ್‌ನ ತೀರ್ಪನ್ನು ತಲೆಬಾಗಿ ಸ್ವೀಕರಿಸಬೇಕೆಂದಿದ್ದೆ. ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ ನಿಯಮ ಪಿಯುವರೆಗಿದೆ. ಈ ಗೊಂದಲ ನಿವಾರಣೆಗೆ ಸರ್ಕಾರ ಪ್ರಯತ್ನ ಮಾಡಬೇಕು. ಹೈಕೋರ್ಟ್ ಇದರ ಹಿಂದೆ ಕಾಣದ ಕೈ ಇದೆ ಎಂದು ಹೇಳಿದೆ. ಸರ್ಕಾರ ಆ ಕಾಣದ ಕೈಗಳನ್ನ ಗುರ್ತಿಸಲಿ. ಹಿಜಾಬ್‌ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಶಾಲಾ ಮಕ್ಕಳು ಹಾಲಿನಂತಾ ಪರಿಶುದ್ಧ ಮನಸ್ಸಿನವರು, ಅದನ್ನ ಕಲುಷಿತ ಮಾಡಬೇಡಿ.

ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಸರ್ಕಾರ ಆರೂವರೆ ಕೋಟಿ ಜನರಿಗೆ ಇದೆ, ಅವರಿಗಾಗಿ ಕೆಲಸ ಮಾಡಬೇಕು. ಸರ್ಕಾರವೇ ಕೊಟ್ಟ ಯೂನಿಫಾರ್ಮ್ ದುಪ್ಪಟ್ಟಾವನ್ನು ಹೆಣ್ಣು ಮಕ್ಕಳು ತಲೆ ಮೇಲೆ‌ ಸುತ್ತಿ ಹಾಕಿಕೊಳ್ಳಲಿ ಬಿಡಿ. ಇದನ್ನ ಅವರು ನೆರಳಿಗಾಗಿಯೊ, ಧೂಳಿಗಾಗಿ ಹಾಕೊತ್ತಾರೋ ಗೊತ್ತಿಲ್ಲ. ಕಸ್ತೂರಬಾ, ಮದರ್ ತೆರೆಸಾ ಹಾಕುತ್ತಿರಲಿಲ್ಲವಾ ಅದನ್ನೇ ಯಾಕೆ ದೊಡ್ಡದು ಮಾಡ್ತೀರಾ. ಸರ್ಕಾರವೇ ಈ ಬಗ್ಗೆ ಕಾಂಪ್ರೊಮೈಸ್ ಮಾಡಲು ಮುಂದಾಗಲಿ ಎಂದೂ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಟಿ. ಮಾಯಗೌಡನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು.

Published On - 4:05 pm, Fri, 18 March 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?