ವಕೀಲ ದೇವರಾಜೇಗೌಡಗೆ ಸಂಕಷ್ಟ; ಒಂದು ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ ಕೋರ್ಟ್
ಅತ್ಯಾಚಾರ ಆರೋಪ ಕೇಸ್ನಲ್ಲಿ ವಕೀಲ ದೇವರಾಜೇಗೌಡ(Devaraje Gowda) ಬಂಧನವಾಗಿದ್ದು, ಪೊಲೀಸ್ ಕಸ್ಟಡಿ ಮುಗಿಸಿ ಹಾಸನ(Hassan) ಜಿಲ್ಲಾ ಕಾರಾಗೃಹಕ್ಕೆ ದೇವರಾಜೇಗೌಡರನ್ನ ಹಸ್ತಾಂತರ ಮಾಡಲಾಗಿತ್ತು. ಈ ಮಧ್ಯೆ ಪೆನ್ ಡ್ರೈವ್ ವೈರಲ್ ಪ್ರಕರಣದಲ್ಲಿ 8ನೇ ಆರೋಪಿಯಾಗಿ ಎಫ್ಐಆರ್ ದಾಖಲಿಸಿಕೊಂಡು ಎಸ್‌ಐಟಿ ವಿಚಾರಣೆಗಾಗಿ ಕಸ್ಟಡಿಗೆ ಕೇಳಿತ್ತು. ಎರಡೂ ಕಡೆಯ ವಾದ ಆಲಿಸಿ ಒಂದು ದಿನ ಎಸ್‌ಐಟಿ ಕಸ್ಟಡಿಗೆ ನ್ಯಾಯಾಲಯ ನೀಡಿದೆ.
ಹಾಸನ, ಮೇ.17: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ(ಮೇ.18) ಸಂಜೆ 5 ಗಂಟೆವರೆಗೆ ದೇವರಾಜೇಗೌಡ(Devarajegowda)ನನ್ನು ಎಸ್‌ಐಟಿ(SIT) ಕಸ್ಟಡಿಗೆ ನೀಡಿ ಹಾಸನದ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ. ಈಗಾಗಲೇ ಅತ್ಯಾಚಾರ ಕೇಸ್ನಲ್ಲಿ ಮೇ 11. ರಂದು ಬಂಧನಕ್ಕೆ ಒಳಗಾಗಿದ್ದ ದೇವರಾಜೇಗೌಡನನ್ನು ಮೇ 14. ರಿಂದ ಮೇ16 ರವರೆಗೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದರು.
ನಿನ್ನೆ ಮತ್ತೊಂದು ದಿನ ಕಸ್ಟಡಿಗೆ ಮನವಿ ಮಾಡಿ ಇಂದು(ಮೇ.17) ಮದ್ಯಾಹ್ನದ ವರೆಗೆ ವಿಚಾರಣೆ ನಡೆಸಿದ್ದ ಪೊಲೀಸರು, ಇಂದು ಮಧ್ಯಾಹ್ನ ನ್ಯಾಯಾಂಗ ಬಂಧನಕ್ಕೆ ಹೋಗುತ್ತಲೆ ಮತ್ತೆ ಸಂಕಷ್ಟ ಎದುರಾಗಿದೆ. ಪೆನ್ ಡ್ರೈವ್ ವೈರಲ್ ಪ್ರಕರಣದಲ್ಲಿ 8ನೇ ಆರೋಪಿಯಾಗಿ ಎಫ್ಐಆರ್ ದಾಖಲಿಸಿಕೊಂಡು ಎಸ್ ಐ ಟಿ ವಿಚಾರಣೆಗಾಗಿ ಕಸ್ಟಡಿಗೆ ಕೇಳಿತ್ತು. ಎರಡೂ ಕಡೆಯ ವಾದ ಆಲಿಸಿ ಒಂದು ದಿನ ಎಸ್‌ಐಟಿ ಕಸ್ಟಡಿಗೆ ಕೋರ್ಟ್ ನೀಡಿದೆ. ಇನ್ನು ಈ ಕುರಿತು ಏಪ್ರಿಲ್ 23 ರಂದು ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ಈ ಕೇಸ್ ದಾಖಲಾಗಿತ್ತು. ಐವರ ವಿರುದ್ದ ದಾಖಲಾಗಿದ್ದ ಕೇಸ್ಗೆ ಹೊಸದಾಗಿ ಇಬ್ಬರು ಸೇರ್ಪಡೆ ಮಾಡಿ ಬಂದಿಸಿದ್ದರು. ಇದೀಗ ಎಂಟನೇ ಆರೋಪಿಯಾಗಿ ವಿಚಾರಣೆ ನಡೆಸಲು ದೇವರಾಜೇಗೌಡರನ್ನು ಕಸ್ಟಡಿಗೆ ಎಸ್‌ಐಟಿ ಪಡೆದಿದೆ.
ಇದನ್ನೂ ಓದಿ:ಹಾಸನ: ಸ್ವಲ್ಪ ದಿನಗಳಲ್ಲಿ ಸತ್ಯ ಹೊರ ಬರುತ್ತೆ- ದೇವರಾಜೇಗೌಡ
ಅತ್ಯಾಚಾರ ಆರೋಪ ಕೇಸ್ನಲ್ಲಿ ವಕೀಲ ದೇವರಾಜೇಗೌಡ ಬಂಧನವಾಗಿದ್ದು, ಪೊಲೀಸ್ ಕಸ್ಟಡಿ ಮುಗಿಸಿ ಹಾಸನ ಜಿಲ್ಲಾ ಕಾರಾಗೃಹಕ್ಕೆ ದೇವರಾಜೇಗೌಡರನ್ನ ಹಸ್ತಾಂತರ ಮಾಡಲಾಯಿತು. ಮೇ.11 ರಂದು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಎಂಎಫ್ಸಿ ಕೋರ್ಟ್ ಆದೇಶಿಸಿತ್ತು. ನಂತರ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 4 ದಿನ ಕಸ್ಟಡಿಗೆ ಅನುಮತಿ ಪಡೆದಿದ್ದರು. ಇಂದು ವಿಚಾರಣೆ ಮುಕ್ತಾಯ ಹಿನ್ನಲೆ ಕೋಟ್ಗೆ ಹಾಜರುಪಡಿಸಿ ಬಳಿಕ ಮೇ 24ರವರೆಗೂ JMFC ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಮಧ್ಯೆ ಒಂದು ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Fri, 17 May 24