ಹೆಚ್ಡಿ ರೇವಣ್ಣ ಕಿಡ್ನಾಪ್ ಕೇಸ್ಗೆ ಬಿಗ್ ಟ್ವಿಸ್ಟ್: ನನ್ನನ್ನು ಯಾರೂ ಅಪಹರಿಸಿರಲಿಲ್ಲ ಎಂದ ಸಂತ್ರಸ್ತೆ
ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಅದರಂತೆ ಇಂದು (ಮೇ.12) ಸುಮಾರು ಎರಡು ನಿಮಿಷ 32 ಸೆಕೆಂಡ್ ಇರುವ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆ, "ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ, ನಾನಾಗಿ ಮನೆಯಿಂದ ಬಂದಿದ್ದೇನೆ ಎನ್ನುವ ಮೂಲಕ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹಾಸನ, ಮೇ.12: ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ(HD Revanna) ವಿರುದ್ಧದ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣ ಟ್ವಿಸ್ಟ್ ಪಡೆದಿದೆ. ಇದೀಗ ಸಂತ್ರಸ್ತೆ ಇಂದು (ಮೇ.12) ಸುಮಾರು 2 ನಿಮಿಷ 32 ಸೆಕೆಂಡ್ನ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ “ನನ್ನನ್ನು ಯಾರೂ ಅಪಹರಿಸಿಲ್ಲ, ನಾನಾಗಿ ಮನೆಯಿಂದ ಹೊರಗೆ ಬಂದಿದ್ದೇನೆ. ಭವಾನಿ, ರೇವಣ್ಣ, ಪ್ರಜ್ವಲ್ ಮತ್ತು ಬಾಬಣ್ಣರಿಂದ ಯಾವುದೇ ತೊಂದರೆ ಆಗಿಲ್ಲ. ನಮ್ಮ ಊರಿನವರು ಏನೇನೋ ಮಾತನಾಡಿದ್ದನ್ನು ಕೇಳಿ ಬೇಸರವಾಗಿತ್ತು. ಹೀಗಾಗಿ ನಾಲ್ಕು ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ. ಎರಡು ದಿನಗಳ ಬಳಿಕ ನಾನೇ ಬರುತ್ತೇನೆ ಎಂದಿದ್ದಾರೆ.
“ಗಾಬರಿ ಪಡಬೇಡಿ ಏನೂ ತೊಂದರೆ ಆಗಿಲ್ಲ, ಚೆನ್ನಾಗಿ ಇದ್ದೇನೆ ವಾಪಸ್ ಬರುತ್ತೆನೆ. ಯಾರೂ ಏನೇ ಅಂದರು ತಲೆಗೆ ಹಾಕೊ ಬೇಡಿ ಅರಾಮಾಗಿ ಇರಿ. ನಾನು ಸೇಫ್ ಆಗಿ ಇದ್ದೀನಿ. ಅವರಿಂದ ನಮಗೆ ತೊಂದರೆ ಆಗಿಲ್ಲ. ಮೊಬೈಲ್ಗೂ ನಮಗೂ ಸಂಬಂಧವಿಲ್ಲ. ನಾಲ್ಕು ದಿನ ನೆಂಟರ ಮನೆಗೆ ಹೋಗಿದ್ದೆ. ನೆಂಟರ ಮೆನಯಿಂದ ಬಂದ ಕೂಡಲೇ ಎಲ್ಲ ಮಾಹಿತಿ ನೀಡುತ್ತೇನೆ. ಆದರೆ, ಪೊಲೀಸರ ಕಳಿಸಿ ಮನೆ ಬಳಿ ಟಾರ್ಚರ್ ಕೊಡಬೇಡಿ. ಮಕ್ಕಳು-ಮರಿ ಇರುತ್ತಾರೆ ಭಯಪಡುತ್ತಾರೆ” ಎಂದು ಸಂತ್ರಸ್ತೆ ಹೇಳಿದ್ದಾರೆ.
ಇದನ್ನೂ ಓದಿ:ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣ ಕಿಡ್ನ್ಯಾಪ್ ಕೇಸ್ ಭವಿಷ್ಯ, ಅಪ್ಪ-ಮಗನ ಹಣೆಬರಹ ಬರೆಯಲಿರುವ ಮಹಿಳೆ
‘ನಾವು ಕೂಲಿ ಮಾಡಿ ಜೀವನ ಸಾಗಿಸುವರು, ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ. ಪೊಲೀಸರು ಬಂದು ಹೋಗ್ತಾ ಇದ್ದರೆ ಅಕ್ಕ-ಪಕ್ಕದವರು ಏನಂದುಕೊಳ್ಳಲ್ಲ. ಕೂಲಿ ಮಾಡಿಕೊಂಡು ಇರೋರಿಗೆ ನೆಮ್ಮದಿಯಾಗಿ ಇರಲು ಬಿಡಿ. ನನಗೆ ಯಾರಿಂದ ತೊಂದರೆ ಆಗಿಲ್ಲ , ತೊಂದರೆ ಆಗಿದ್ದರೆ ನಾನೇ ಬಂದು ಹೇಳುತ್ತೇನೆ. ನನಗೆ ಏನೂ ತೊಂದರೆ ಇಲ್ಲ, ನೀವು ತೊಂದರೆ ಕೊಟ್ಟರೆ ನನಗೆ ಹಾಗೂ ನನ್ನ ಗಂಡನಿಗೆ ಏನಾದರೂ ಆದರೆ ನೀವೇ ಜವಾಬ್ದಾರಿ ಆಗಬೇಕಾಗುತ್ತೆ. ನೀವೆ ಹೊಣೆ, ಹೊಣೆ ಆಗೋದಾದರೆ ಮನೆ ಹತ್ತಿರ ಬನ್ನಿ. ನನ್ನ ಮಗ ಗೊತ್ತಿಲ್ಲದೆ ಗಾಬರಿಪಟ್ಟು ಹೀಗೆ ಮಾಡಿದ್ದಾನೆ, ಯಾರೂ ನನಗೆ ತೊಂದರೆ ಕೊಟ್ಟಿಲ್ಲ. ನಾನೇ ಹೋಗಿದ್ದೀನಿ, ಸೇಫ್ ಆಗಿ ಬರುತ್ತೇನೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Sun, 12 May 24