ಜೆಡಿಎಸ್​ ಜತೆ ಹೊಂದಾಣಿಕೆ ರಾಜಕೀಯ ಮಾಡಿದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ: ಶಾಸಕ ಪ್ರೀತಂಗೌಡ ಕಿಡಿಕಿಡಿ

| Updated By: guruganesh bhat

Updated on: Aug 07, 2021 | 3:11 PM

Karnataka Politics: ನೀವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳಿ ಎಂದು ಹೇಳುತ್ತೀರಿ. ಹೀಗೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡರೆ ಕಷ್ಟವಾಗುತ್ತದೆ. ದಿನ ಬೆಳಗಾದ್ರೆ ನಮ್ಮ ಮನೆಗೆ ಕಲ್ಲು ಹೊಡಿಸಿಕೊಳ್ಳುತ್ತೇವೆ. ಕಾರ್ಯಕರ್ತರು ಹೇಗೆ ಚುನಾವಣೆ ಎದುರಿಸುತ್ತಾರೆ? ಎಂದು ಶಾಸಕ ಪ್ರೀತಂಗೌಡ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ  ಕಿಡಿಕಾರಿದ್ದಾರೆ.

ಜೆಡಿಎಸ್​ ಜತೆ ಹೊಂದಾಣಿಕೆ ರಾಜಕೀಯ ಮಾಡಿದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ: ಶಾಸಕ ಪ್ರೀತಂಗೌಡ ಕಿಡಿಕಿಡಿ
ಪ್ರೀತಂಗೌಡ
Follow us on

ಹಾಸನ: ಹೊಂದಾಣಿಕೆ ರಾಜಕೀಯ ಮಾಡುವುದಕ್ಕೆ ನಾನು ಬಿಡುವುದಿಲ್ಲ. ಆದರೂ ಹೊಂದಾಣಿಕೆ ರಾಜಕೀಯ ಮಾಡಿದರೆ ನಾನು ಮತದಾರನಾಗಿ ಮನೆಯಲ್ಲಿಯೇ ಇದ್ದುಬಿಡುತ್ತೇನೆ. ಇಲ್ಲವೇ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿಕೊಂಡು ಇದ್ದುಬಿಡುತ್ತೇನೆ. ಸಿಎಂ ನಡೆಯಿಂದ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿದ್ದರ ಬಗ್ಗೆ ಶಾಸಕ ಪ್ರೀತಂಗೌಡ ಅಸಮಧಾನ ವ್ಯಕ್ತಪಡಿಸಿದರು.

ಹೊಂದಾಣಿಕೆ ರಾಜಕಾರಣ ಮಾಡಲು ಯತ್ನಿಸಿದರೆ ಈ ಬಗ್ಗೆ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿಯಾಗುತ್ತೇನೆ. ಅಗತ್ಯಬಿದ್ದರೆ ದೆಹಲಿಗೂ ಹೋಗುತ್ತೇನೆ ಎಂದು ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ನೇರ ಎಚ್ಚರಿಕೆ ನೀಡಿದ್ದಾರೆ.

ನಾವು ಇಲ್ಲಿ ಹೊಡೆದಾಡಿ ಪಕ್ಷವನ್ನು ಸಂಘಟಿಸುತ್ತೇವೆ. ಜೆಡಿಎಸ್‌ನವರಿಗೇಕೆ ಅಡ್ಜೆಸ್ಟ್ ಮಾಡಿಕೊಳ್ಳಲು ಹೇಳುತ್ತೀರಿ? ನನಗೆ, ನಮ್ಮ ಕಾರ್ಯಕರ್ತರಿಗೇ ಈ ಮಾತನ್ನು ಹೇಳಿ. ನಾವೇ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು ಹೋಗುತ್ತೇವೆ. ಜೆಡಿಎಸ್ ಜತೆ ರಾಜಿ ಮಾಡಿಕೊಳ್ತೇವೆ ಎಂದು ಹೇಳಿ, ನಾವು ಕೂಡ ರಾಜಿ ಮಾಡಿಕೊಂಡು ಹೋಗುತ್ತೇವೆ ಎಂದು ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನೇರಾನೇರ ಗುಡುಗಿದರು.

ನೀವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳಿ ಎಂದು ಹೇಳುತ್ತೀರಿ. ಹೀಗೆ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡರೆ ಕಷ್ಟವಾಗುತ್ತದೆ. ದಿನ ಬೆಳಗಾದ್ರೆ ನಮ್ಮ ಮನೆಗೆ ಕಲ್ಲು ಹೊಡಿಸಿಕೊಳ್ಳುತ್ತೇವೆ. ಕಾರ್ಯಕರ್ತರು ಹೇಗೆ ಚುನಾವಣೆ ಎದುರಿಸುತ್ತಾರೆ? ಎಂದು ಶಾಸಕ ಪ್ರೀತಂಗೌಡ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ  ಕಿಡಿಕಾರಿದ್ದಾರೆ.

ಇದನ್ನೂ ಓದಿ: 

ದೇವೇಗೌಡರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರಿಂದ ನೂತನ ಸಿಎಂಗೆ ಸನ್ಮಾನ

School Opening: 9, 10, 12ನೇ ತರಗತಿಗಳಿಗೆ ಶಾಲಾ ಕಾಲೇಜುಗಳು ಆಗಸ್ಟ್‌ 23ರಿಂದ ಆರಂಭ: ಬಸವರಾಜ ಬೊಮ್ಮಾಯಿ

(MLA Preetham Gowda says BJP Workers upset with CM Basavaraj Bommai visit Former PM HD Deve Gowda)