ಸಿದ್ದರಾಮೋತ್ಸವ ಮುಗಿಯುವವರೆಗೂ ಪಾದಯಾತ್ರೆ ಮಾಡಬಾರದು; ಡಿಕೆಶಿ ಬೆಂಬಲಿಗರಿಗೆ ಸಿದ್ದರಾಮಯ್ಯ ಬೆಂಬಲಿಗರಿಂದ ತಾಕೀತು

ಸಿದ್ದರಾಮೋತ್ಸವಕ್ಕೆ ಅಡ್ಡಿಪಡಿಸಲುಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಬೆಂಬಲಿಗರು, ಶ್ರೀಧರ್​ಗೌಡ ಸೇರಿದಂತೆ ಕೆಲವರಿಗೆ ಆವಾಜ್ ಹಾಕಿದ್ದಾರೆ.

ಸಿದ್ದರಾಮೋತ್ಸವ ಮುಗಿಯುವವರೆಗೂ ಪಾದಯಾತ್ರೆ ಮಾಡಬಾರದು; ಡಿಕೆಶಿ ಬೆಂಬಲಿಗರಿಗೆ ಸಿದ್ದರಾಮಯ್ಯ ಬೆಂಬಲಿಗರಿಂದ ತಾಕೀತು
ಸಿದ್ದರಾಮಯ್ಯ ಬೆಂಬಲಿಗರು ಪಾದಯಾತ್ರೆಯನ್ನು ತಡೆದರು
TV9kannada Web Team

| Edited By: sandhya thejappa

Jul 30, 2022 | 9:43 AM

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯನವರ (Siddaramaiah) ಹುಟ್ಟು ಹಬ್ಬದ ಹಿನ್ನೆಲೆ ಬೆಂಬಲಿಗರು ಅಮೃತ ಮಹೋತ್ಸವ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸಿದ್ದರಾಮೋತ್ಸವ ಮುಗಿಯುವವರೆಗೆ ಪಾದಯಾತ್ರೆ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬೆಂಬಲಿಗರಿಗೆ ಸಿದ್ದರಾಮಯ್ಯನವರ ಅಭಿಮಾನಿಗಳು ತಾಕೀತು ಮಾಡಿದ್ದಾರೆ. ನಿನ್ನೆ (ಜುಲೈ 29) ಡಿಕೆಶಿ ಬೆಂಬಲಿಗರು 75ನೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಪಾದಯಾತ್ರೆ ನಡೆಸಿದ್ದರು. ಟಿಕೆಟ್ ಆಕಾಂಕ್ಷಿ ಆಗಿರುವ ಶ್ರೀಧರ್​ಗೌಡ ನೇತೃತ್ವದಲ್ಲಿ ಅರಕಲಗೂಡು ಕ್ಷೇತ್ರದ ಶ್ರವಣೂರಿನಿಂದ ಪಾದಯಾತ್ರೆ ಆರಂಭವಾಗಿತ್ತು. ದೊಡ್ಡಳ್ಳಿಗೆ ಪಾದಯಾತ್ರೆ ಬಂದಾಗ ಸಿದ್ದು ಅಭಿಮಾನಿಗಳು ಪಾದಯಾತ್ರೆಯನ್ನು ತಡೆದಿದ್ದಾರೆ.

ಸಿದ್ದರಾಮೋತ್ಸವಕ್ಕೆ ಅಡ್ಡಿಪಡಿಸಲುಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಬೆಂಬಲಿಗರು, ಶ್ರೀಧರ್​ಗೌಡ ಸೇರಿದಂತೆ ಕೆಲವರಿಗೆ ಆವಾಜ್ ಹಾಕಿದ್ದಾರೆ. ಕೂಡಲೆ ಪಾದಯಾತ್ರೆ ನಿಲ್ಲಿಸಿ ವಾಪಸ್ ತೆರಳಿ ಎಂದು ಸೂಚಿಸಿದರು. ಬಳಿಕ ಪಾದಯಾತ್ರೆ ನಿಲ್ಲಿಸಿ ಕಾಂಗ್ರೆಸ್ ಮುಖಂಡರು ವಾಪಸ್ ತೆರಳಿದರು.

ಇದನ್ನೂ ಓದಿ; ಮೈಸೂರು: ನಾಲೆಗೆ ಕಾರು ಉರುಳಿ ಬಿದ್ದು ವಕೀಲರು ನಾಪತ್ತೆ ಪ್ರಕರಣ; ವಕೀಲರಿಗಾಗಿ ಮುಂದುವರಿದ ಹುಡುಕಾಟ

ಇಡಿ ಕೋರ್ಟ್​ಗೆ ಹಾಜರಾಗಲಿರುವ ಡಿಕೆ‌ ಶಿವಕುಮಾರ್: ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಆಗಿರುವ ಹಿನ್ನೆಲೆ ಇಂದು ಡಿಕೆ‌ ಶಿವಕುಮಾರ್ ದೆಹಲಿಯ ಇಡಿ ಕೋರ್ಟ್​ಗೆ ಹಾಜರಾಗುತ್ತಾರೆ. ಚಾರ್ಜ್​ಶೀಟ್ ಸಲ್ಲಿಕೆ ನಂತರ ರೆಗ್ಯೂಲರ್ ಬೇಲ್ ಪಡೆಯಬೇಕು. ಕಳೆದ ವಿಚಾರಣೆ ವೇಳೆ ರೆಗ್ಯೂಲರ್ ಬೇಲ್​​ಗೆ ಇಡಿ ಆಕ್ಷೇಪಿಸಿತ್ತು. ಡಿಕೆಶಿ ಸೇರಿ ಐವರು ಆರೋಪಿಗಳು ಇಂದು ಕೋರ್ಟ್​​ಗೆ ಹಾಜರಾಗುತ್ತಾರೆ. ಕೋರ್ಟ್​ಗೆ ಹಾಜರಾಗಲು ಡಿಕೆಶಿ ನಿನ್ನೆಯೇ ದೆಹಲಿಗೆ ತೆರಳಿದ್ದಾರೆ.

ಇದನ್ನೂ ಓದಿ

ಇದನ್ನೂ ಓದಿ: ವರುಧಿನಿಯ ಕಳ್ಳಾಟ ಬಯಲು; ಕೈ-ಕಾಲು ಮುರಿಯುವ ಎಚ್ಚರಿಕೆ ನೀಡಿದ ಹರ್ಷ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada