ಲೈಂಗಿಕ ದೌರ್ಜನ್ಯ ಆರೋಪ; ಸೂರಜ್ ರೇವಣ್ಣ ವಿರುದ್ದ ದಾಖಲಾಯ್ತು ಎಫ್‌ಐಆರ್
ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ(Suraj Revanna)ವಿರುದ್ದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಎಫ್‌ಐಆರ್(FIR) ದಾಖಲಾಗಿದೆ. ನಿನ್ನೆ(ಜೂ.21) ಬೆಂಗಳೂರಿನ ಡಿಜಿ ಕಛೇರಿಗೆ ದೂರು ನೀಡಿದ್ದ ಸಂತ್ರಸ್ಥ, ದೂರು ನೀಡುವಾಗಲೇ ಹಾಸನ ಎಸ್ಪಿ ಗೆ ದೂರಿನ ಪ್ರತಿ ಮೇಲ್ ಮಾಡಿದ್ದರು.
ಹಾಸನ, ಜೂ.22: ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ(Suraj Revanna)ವಿರುದ್ದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಎಫ್‌ಐಆರ್(FIR) ದಾಖಲಾಗಿದೆ. ನಿನ್ನೆ(ಜೂ.21) ಬೆಂಗಳೂರಿನ ಡಿಜಿ ಕಛೇರಿಗೆ ದೂರು ನೀಡಿದ್ದ ಸಂತ್ರಸ್ಥ, ದೂರು ನೀಡುವಾಗಲೇ ಹಾಸನ ಎಸ್ಪಿ ಗೆ ದೂರಿನ ಪ್ರತಿ ಮೇಲ್ ಮಾಡಿದ್ದರು. ಇದರ ಜೊತೆಗೆ ಮೇಲ್ ಮಾಡಿದ್ದ ಬಗ್ಗೆಯೂ ವೀಡಿಯೋ ಹೇಳಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ದೂರು ನೀಡಲು ಠಾಣೆಗೆ ಆಗಮಿಸಿದ ಸಂತ್ರಸ್ಥ
ಅದರಂತೆ ಇಂದು ಹಾಸನದ ಜಿಲ್ಲಾ ಪೊಲೀಸ್ ಕಛೇರಿಗೆ ಸಂತ್ರಸ್ಥನ ದೂರು ತಲುಪಿದ್ದು, ಜಿಲ್ಲಾ ಪೊಲೀಸ್ ಕಛೇರಿಗೆ ಬಂದ ದೂರನ್ನು, ಅಧಿಕಾರಿಗಳನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ದೂರಿನ ಸತ್ಯಾಸತ್ಯತೆಗಾಗಿ ದೂರುದಾರನನ್ನು ಸಂಪರ್ಕ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದು, ಈ ಹಿನ್ನಲೆ ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ದೂರು ನೀಡಲು ಅರಕಲಗೂಡು ತಾಲ್ಲೂಕು ಮೂಲದ ಸಂತ್ರಸ್ಥ ಆಗಮಿಸಿದ್ದಾರೆ.
ಇದನ್ನೂ ಓದಿ:ಅರಕಲುಗೂಡಿನ ಜೆಡಿಎಸ್ ಕಾರ್ಯಕರ್ತನನ್ನು ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರೀಡೆಗೆ ಬಳಸಿಕೊಂಡರೇ?
ಪ್ರತಿ ದೂರು ನೀಡಿದ್ದ ಸೂರಜ್ ರೇವಣ್ಣ ಆಪ್ತ
ಇನ್ನು ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ ಎಂದು ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ದೂರು ನೀಡಿದ್ದರು. ಈ ಹಿನ್ನಲೆ ಆತನ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಸೂರಜ್ ರೇವಣ್ಣ ವಿರುದ್ಧ ದೂರುದಾರ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿ, ಐದು ಕೋಟಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದಿದ್ದನಂತೆ. ಅದರಂತೆ ಸುಳ್ಳು ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖಿಸಿ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ದೂರು ಸಲ್ಲಿಕೆ ಮಾಡಿದ್ದರಿಂದ ಐಪಿಸಿ ಸೆಕ್ಸೆನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Sat, 22 June 24