ಹಾಸನದಲ್ಲಿ ರಾತ್ರೋರಾತ್ರಿ ತಾಲೂಕು ಕಚೇರಿ ಹಳೇ ಕಟ್ಟಡ ನೆಲಸಮ! ಗೋಲಿಬಾರ್ ಆದರೂ ಕಟ್ಟಡ ತೆರವಿಗೆ ಬಿಡಲ್ಲ ಎಂದಿದ್ದ ರೇವಣ್ಣಗೆ ಟಾಂಗ್

ಕಟ್ಟಡ ಕೆಡವಿ ಮಾಜಿ ಸಚಿವ ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ. 2 ಹಿಟಾಚಿ ಮೂಲಕ ಕಿಟಕಿ, ಬಾಗಿಲು ಸಮೇತ ಕಚೇರಿ ಕಟ್ಟಡವನ್ನು ನೆಲಸಮ

ಹಾಸನದಲ್ಲಿ ರಾತ್ರೋರಾತ್ರಿ ತಾಲೂಕು ಕಚೇರಿ ಹಳೇ ಕಟ್ಟಡ ನೆಲಸಮ! ಗೋಲಿಬಾರ್ ಆದರೂ ಕಟ್ಟಡ ತೆರವಿಗೆ ಬಿಡಲ್ಲ ಎಂದಿದ್ದ ರೇವಣ್ಣಗೆ ಟಾಂಗ್
ನೆಲಸಮವಾದ ತಾಲೂಕು ಕಚೇರಿ ಹಳೇ ಕಟ್ಟಡ
Follow us
TV9 Web
| Updated By: sandhya thejappa

Updated on:May 01, 2022 | 12:04 PM

ಹಾಸನ: ಟ್ರಕ್ ಟರ್ಮಿನಲ್ (Truck Terminal) ನಿರ್ಮಾಣ ವಿವಾದದ ನಡುವೆಯೇ ಹಾಸನದಲ್ಲಿ ರಾತ್ರೋರಾತ್ರಿ ತಾಲೂಕು ಕಚೇರಿ (Taluk Office) ಹಳೇ ಕಟ್ಟಡವನ್ನು ನೆಲಸಮ ಮಾಡಿದ್ದಾರೆ. ಟ್ರಕ್ ಟರ್ಮಿನಲ್ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿತ್ತು. ತಾಲೂಕು ಕಚೇರಿ ಕಟ್ಟಡ ಕೆಡವಲು ಬಿಡಲ್ಲವೆಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಎಚ್ಚರಿಸಿದ್ದರು. ಗೋಲಿಬಾರ್ ಆದರೂ ಕಟ್ಟಡ ತೆರವಿಗೆ ಬಿಡಲ್ಲ ಎಂದಿದ್ದರು. ಹಳೇ ಕಟ್ಟಡ ಕೆಡವದೆ ಹೊಸ ಕಟ್ಟಡ ಕಟ್ಟಿ ಎಂದು ಆಗ್ರಹಿಸಿದ್ದರು. ಆದರೆ ರೇವಣ್ಣ ಮಾತಿಗೆ ಸೊಪ್ಪುಹಾಕದೆ ಗುತ್ತಿಗೆದಾರ ರಾತ್ರೋರಾತ್ರಿ ಕಟ್ಟಡ ತೆರವು ಮಾಡಿದ್ದಾರೆ.

ಕಟ್ಟಡ ಕೆಡವಿ ಮಾಜಿ ಸಚಿವ ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ. 2 ಹಿಟಾಚಿ ಮೂಲಕ ಕಿಟಕಿ, ಬಾಗಿಲು ಸಮೇತ ಕಚೇರಿ ಕಟ್ಟಡವನ್ನು ನೆಲಸಮ ಮಾಡಿದ್ದಾರೆ.

ನಿನ್ನೆ ರಣರಂಗವಾಗಿದ್ದ ಉದ್ದೇಶಿತ ಟ್ರಕ್ ಟರ್ಮಿನಲ್ ಸ್ಥಳ ಇಂದು ನೀರವ ಮೌನದಿಂದ ಕೂಡಿದೆ. ಜಿಲ್ಲಾಡಳಿತ ಟರ್ಮಿನಲ್ ನಿರ್ಮಾಣಕ್ಕೆ ಕೆಲಸ ನಡೆಯುತ್ತಿರುವ ಸ್ಥಳದ ವ್ಯಾಪ್ತಿಯಲ್ಲಿ ನಿಷೇಧಾಜ್ಙೆ ಜಾರಿ ಮಾಡಿದೆ.  ನಿಷೇಧಾಜ್ಙೆ ಹಿನ್ನೆಲೆಯಲ್ಲಿ ಜನರು ಸ್ಥಳಕ್ಕೆ ಆಗಮಿಸಿಲ್ಲ. ಹಾಸನ ಹೊರ ವಲಯದ ಕೆಂಚಟ್ಟಹಳ್ಳಿ ಸಮೀಪ 3.24 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ವಾಗುತ್ತಿದೆ. ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರದ ಸಮೀಪ ಟ್ರಕ್ ಟರ್ಮಿನಲ್ ಬೇಡಾ ಎಂದು ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದರು. ಉದ್ದೇಶಿತ ಟರ್ಮಿನಲ್ ಸಮೀಪ ವಿದ್ಯಾರ್ಥಿನಿಯರ ಹಾಸ್ಟೆಲ್ ಇದ್ದು ಸುರಕ್ಷತೆಗೆ ಸಮಸ್ಯೆ ಆಗಲಿದೆ ಎಂದು ಆರೋಪಿಸಿದ್ದರು.

ಆದರೆ ಜೆಡಿಎಸ್ ವಿರೋಧ ಲೆಕ್ಕಿಸದೆ ಶಾಸಕ ಪ್ರೀತಂಗೌಡ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಯತ್ನಿಸಿದ್ದಾರೆ ಜೆಡಿಎಸ್ ಬಿಜೆಪಿ ನಡುವೆ ಟರ್ಮಿನಲ್ ವಿಚಾರ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಙೆ ಜಾರಿ ಮಾಡಲಾಗಿದೆ. ಹಾಸನ ಘಟನಾ ಸ್ಥಳದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಮಾಲಾಗಿದೆ.

ತಿರುಗಿ ಬೀಳ್ತಾರಾ ಜೆಡಿಎಸ್ ನಾಯಕರು?: ತಾಲೂಕು ಕಚೇರಿಯನ್ನು ತೆರವುಗೊಳಿಸಿದ ಹಿನ್ನೆಲೆ ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್ ನಾಯಕರು ತಿರುಗಿ ಬೀಳ್ತಾರಾ ಎಂಬ ಪ್ರಶ್ನೆ ಮೂಡಿದೆ. ಗೋಲಿಬಾರ್ ಆದ್ರೂ ಕಟ್ಟಡ ಕೆಡವಲು ಬಿಡಲ್ಲ ಅಂತ ರೇವಣ್ಣ ಹೇಳಿದ್ದರು. ಆದರೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆ ಕಟ್ಟಡ ನೆಲಸಮ ಮಾಡಲಾಗಿದೆ. ವಿರೋಧದ ನಡುವೆಯೂ ಶಾಸಕ ಪ್ರೀತಂಗೌಡ ಕಟ್ಟಡ ತೆರವುಗೊಳಿಸಿದ್ದಾರೆ. ಹೀಗಾಗಿ ಜೆಡಿಎಸ್​ ನಾಯಕರು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.

ಮತ್ತೊಂದು ಅಸ್ತ್ರ ಪ್ರಯೋಗಿಸಿದ ಬಿಜೆಪಿ: ಜೆಡಿಎಸ್ ವಿರುದ್ಧ ಬಿಜೆಪಿ ಮತ್ತೊಂದು ಅಸ್ತ್ರ ಪ್ರಯೋಗಿಸಿದೆ. ರೇವಣ್ಣ ಮಾಲೀಕತ್ವದ ಕಲ್ಯಾಣ ಮಂಟಪದಿಂದ ರಾಜಕಾಲುವೆ ಪ್ರದೇಶ ಬಂದ್ ಮಾಡಿರೋ ಆರೋಪ ಕೇಳಿಬಂದಿದೆ. ರಾಜಕಾಲುವೆಗೆ ಮೇಲ್ಚಾವಣಿ ಹಾಕಿ ಪಾರ್ಕಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಓಡಾಡದಂತೆ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಬಿಜೆಪಿ ಶಾಸಕ ಪ್ರೀತಂಗೌಡ ದೂರು ನೀಡಿದ್ದಾರೆ. ಡಿಸಿಗೆ ದೂರು ನೀಡಲು ಸಲಹೆ ಶಾಸಕ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ. ಮ್ಯೂಸಿಯಂ ಮಾಡೋದಾಗಿ ಟ್ರಸ್ಟ್ ಹೆಸರಿಗೆ ಜಾಗ ಪಡೆದ್ರು. ಆದ್ರೆ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ

World Laughter Day 2022: ಇಂದು ವಿಶ್ವ ನಗು ದಿನ; ಏನಿದರ ವಿಶೇಷ? ಮೊದಲಿಗೆ ಆಚರಿಸಿದ್ದು ಎಲ್ಲಿ? ಕುತೂಹಲಕರ ಮಾಹಿತಿ ಇಲ್ಲಿದೆ

Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ

Published On - 9:06 am, Sun, 1 May 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್