ಹಾಸನದಲ್ಲಿ ತಂದೆಯ 13 ಲಕ್ಷ ರೂ. ಕದ್ದು ಸಿಕ್ಕಿಬಿದ್ದ ಪುತ್ರ; ದೇವನಹಳ್ಳಿಯಲ್ಲಿ ಬೇರೆಯವರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನ

ಸರ್ಕಾರದ ಜಮೀನು ಸ್ವಾಧೀನದಿಂದ 13.20 ಲಕ್ಷ ಹಣ ಬಂದಿತ್ತು. ತನ್ನ ನಾಲ್ವರು ಮಕ್ಕಳಿಗೆ ಹಂಚಲು ರಂಗಸ್ವಾಮಿ ಹಣ ಇಟ್ಟಿದ್ದರು. ರಂಗಸ್ವಾಮಿ ಏ.23ರಂದು ಬ್ಯಾಂಕ್​ನಿಂದ ಹಣ ತಂದು ಕಬೋಡ್​ನಲ್ಲಿಟ್ಟಿದ್ದರು.

ಹಾಸನದಲ್ಲಿ ತಂದೆಯ 13 ಲಕ್ಷ ರೂ. ಕದ್ದು ಸಿಕ್ಕಿಬಿದ್ದ ಪುತ್ರ; ದೇವನಹಳ್ಳಿಯಲ್ಲಿ ಬೇರೆಯವರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನ
ವಶಕ್ಕೆ ಪಡೆದ ಹಣ
Follow us
TV9 Web
| Updated By: sandhya thejappa

Updated on:Apr 30, 2022 | 10:42 AM

ಹಾಸನ: ತನ್ನ ಮನೆಯಲ್ಲಿ ತಂದೆಯ (Father) 13.20 ಲಕ್ಷ ರೂ. ಹಣ (Money) ಕದ್ದು ಮಗ ಸಿಕ್ಕಿಬಿದ್ದಿರುವ ಘಟನೆ ಹಾಸನ ತಾಲೂಕಿನ ದೊಡ್ಡಾಲದಹಳ್ಳಿ ಗ್ರಾಮದಲ್ಲಿ ನಡೆದಿದೆ. ಸರ್ಕಾರದ ಜಮೀನು ಸ್ವಾಧೀನದಿಂದ 13.20 ಲಕ್ಷ ಹಣ ಬಂದಿತ್ತು. ತನ್ನ ನಾಲ್ವರು ಮಕ್ಕಳಿಗೆ ಹಂಚಲು ರಂಗಸ್ವಾಮಿ ಹಣ ಇಟ್ಟಿದ್ದರು. ರಂಗಸ್ವಾಮಿ ಏ.23ರಂದು ಬ್ಯಾಂಕ್​ನಿಂದ ಹಣ ತಂದು ಕಬೋಡ್​ನಲ್ಲಿಟ್ಟಿದ್ದರು. ಆದರೆ ಮಗನೊಬ್ಬ ಮನೆ ಬಾಗಿಲು ಮುರಿದು ಹಣ, ಆಸ್ತಿ ದಾಖಲೆ ಪತ್ರ ಎಗರಿಸಿದ್ದ. ತನಗೆ ಹಣ ನೀಡಲ್ಲ ಎಂದು ಭಾವಿಸಿ ಹಣ ಕದ್ದಿದ್ದಾನೆ. ಕಳ್ಳರ ಕೃತ್ಯ ಎಂದು ಬಿಂಬಿಸಲು ಬಾಗಿಲು, ಬೀರು ಮುರಿದು ಕಳ ಮಾಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಿಜಬಣ್ಣ ಬಯಲಾಗಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಲು ಯತ್ನ: ದೇವನಹಳ್ಳಿ: ಬೇರೆಯವರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನ ದೇವನಹಳ್ಳಿ ಠಾಣೆ ಪೊಲೀಸಿದ್ದಾರೆ. ಬೆಂಗಳೂರು ಮೂಲದ ಸುಧಾಕರ ರೆಡ್ಡಿ, ಅಶೋಕ್ ಕೃಷ್ಣ ಚವ್ಹಾಣ್, ಕುಮಾರಸ್ವಾಮಿ, ಪ್ರಿಯಾಕುಮಾರಿ ಬಂಧಿತ ಆರೋಪಿಗಳು. ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಪುಟ್ಟಪ್ಪನಗುಡಿ ಬೀದಿಯ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಬಂಧಿತ ಆರೋಪಿಗಳಿಂದ 11 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡರು.

ಪುಷ್ಪ ಸಿನೆಮಾ ರೀತಿಯಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ದಂಧೆ: ರಾಯಚೂರು: ಪುಷ್ಪ ಸಿನೆಮಾ ರೀತಿಯಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ದಂಧೆ ನಡೆದಿದೆ. ಸಿನಿಮಾದಲ್ಲಿ ರಕ್ತ ಚಂದನದ ದಂಧೆ ನಡೆಯುತ್ತದೆ. ಆದರೆ ರಾಯಚೂರು ನಗರದ ಕೃಷ್ಣಗಿರಿ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಬಡವರ ಹಸಿವು ನೀಗಿಸುವ ಪಡಿತರ ಅಕ್ಕಿ ಸಾಗಾಟ ದಂಧೆ ನಡೆದಿದೆ. ಗುಡ್ಡಗಾಡು ಪ್ರದೇಶದಲ್ಲಿ ಪಡಿತರ ಅಕ್ಕಿ ಸಂಗ್ರಹಿಸಿ, ರಾತ್ರೋ ರಾತ್ರಿ ಸಾಗಾಟ ಮಾಡಿದ್ದಾರೆ. ರಾಯಚೂರಿನಿಂದ ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿಗೆ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದರು. ನಗರದ ಪಶ್ಚಿಮ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 405 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಈ ಪಡಿತರ ಅಕ್ಕಿ ದಂಧೆ ನಡೆಯುತ್ತಿದೆ ಅಂತ ಹೇಳಲಾಗುತ್ತಿದ್ದು, ಕಿಂಗ್ ಪಿನ್​ಗಳ ಪತ್ತೆಗೆ ಖಾಕಿ ಶೋಧಕಾರ್ಯ ನಡೆಸುತ್ತಿದೆ.

ಇದನ್ನೂ ಓದಿ

Solar Eclipse 2022: ಇಂದು 2022ರ ಮೊದಲ ಸೂರ್ಯ ಗ್ರಹಣ; ಎಲ್ಲೆಲ್ಲಿ ಗೋಚರವಾಗಲಿದೆ?

ಚಿತ್ರದುರ್ಗದಲ್ಲಿ ಸಿಡಿ ಉತ್ಸವ ವೇಳೆ ಭಕ್ತರ ಮೇಲೆ ಮುರಿದುಬಿದ್ದ ಸಿಡಿ ಕಂಬ! ಮೊಬೈಲ್​ನಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ

Published On - 10:36 am, Sat, 30 April 22