ಹಾವೇರಿ, ಜುಲೈ 22: ಬೃಹತ್ ಬೇವಿನಮರ ಬಿದ್ದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ಹಿರೇಕೆರೂರು-ಮಾಸೂರು ಮಾರ್ಗಮಧ್ಯೆ ನಡೆದಿದೆ. ಹಿರೇಕೇರೂರು ತಾಲೂಕು ಯತ್ತಿನಹಳ್ಳಿ ಗ್ರಾಮದ ನಿವಾಸಿ ಹನುಮಂತ (28) ಮತ್ತು ಚಿನ್ನಮುಳಗುಂದ ಗ್ರಾಮದ ನಿವಾಸಿ ಮಂಜುನಾಥ್ (29) ಮೃತರು. ಹಿರೇಕೇರೂರು ಪಟ್ಟಣದಿಂದ ಮಾಸೂರು ಕಡೆಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ಹಿರೇಕೆರೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಯಾದಗಿರಿ: ಅನಾಮಧೇಯ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ನಜರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಂಡುಬಂದಿದೆ. ಒಂದು ವಾರದ ಹಿಂದೆ ಮೃತಪಟ್ಟ ರೀತಿಯಲ್ಲಿ ಶವ ಪತ್ತೆ ಆಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಧರ್ಮಾಧಿಕಾರಿಯ ಹೊಟ್ಟೆ ಬಗೆದ ದುಷ್ಕರ್ಮಿಗಳು: ಕೊಲೆಗೆ ಕಾರಣವಾಯ್ತಾ ಮಾಟ, ಮಂತ್ರ?
ಸುಮಾರು 50 ವರ್ಷ ವಯಸ್ಸಿನ ಅಪರಿಚಿತ ವೃದ್ಧನ ಶವವಾಗಿದ್ದು, ಗುರುತು ಪತ್ತೆಯಾಗಿಲ್ಲ. ಗುರುಮಠಕಲ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿಕ್ಕೋಡಿ: ನದಿಯಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವಂತ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ರೋಹನ್ ಪಾಟೀಲ್(35) ಮೃತ ವ್ಯಕ್ತಿ. ದುರಾದೃಷ್ಟವೆಂದರೆ ಎಂಟು ದಿನಗಳ ಹಿಂದಷ್ಟೇ ರೋಹನ್ಗೆ ನಿಶ್ಚಿತಾರ್ಥವಾಗಿತ್ತು.
ಇದನ್ನೂ ಓದಿ: ರಾಮನಗರ: ಗೀಸರ್‌ನಿಂದ ವಿಷಾನಿಲ ಸೋರಿಕೆ, ಉಸಿರುಗಟ್ಟಿ ತಾಯಿ, ಮಗ ಸಾವು
ಕೃಷ್ಣಾ ನದಿ ತುಂಬಿರುವ ಹಿನ್ನೆಲೆ ಮಧ್ಯಾಹ್ನ ಪೂಜೆ ಸಲ್ಲಿಸಿ ಬಾಗಿನ ಬಿಡಲು ಹೋದಾಗ ಘಟನೆ ಸಂಭವಿಸಿದೆ. ನದಿ ಮಧ್ಯದಲ್ಲಿ ಹೋಗುತ್ತಿದ್ದಂತೆ ಪಿಡ್ಸ್ ಬಂದು ರೋಹನ್ ಮುಳುಗಲಾರಂಭಿಸಿದ್ದಾರೆ. ಈ ವೇಳೆ ನಾಲ್ಕೈದು ಜನರಿಂದ ತಕ್ಷಣ ಬೋಟ್ ತೆಗೆದುಕೊಂಡಿ ಹೋಗಿ ರೋಹನ್ ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಮೃತಪಟ್ಟಿದ್ದರು. ಯುವಕರು ರೋಹನ್ ಬದುಕಿಸುವ ವಿಡಿಯೋ ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ: ಅಣ್ಣಪ್ಪ ಬಾರ್ಕಿ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.