ವಾಲ್ಮೀಕಿ ಹಗರಣ: ಅಧಿಕಾರಿಗೆ ಒತ್ತಡ ಹೇರಿರುವ ಆರೋಪ, ಇಬ್ಬರು ಇಡಿ ಆಫೀಸರ್ ವಿರುದ್ಧ ಎಫ್ಐಆರ್
ಸಿಎಂ ಸಿದ್ದರಾಮಯ್ಯ, ನಾಗೇಂದ್ರ ಹೆಸರು ಹೇಳುವಂತೆ ಒತ್ತಡ ಆರೋಪ ಕೇಳಿಬಂದಿದ್ದು, ಇಡಿ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿಂದಿನ ಜಂಟಿ ನಿರ್ದೇಶಕ ಕಲ್ಲೇಶ್ ಎಂಬುವವರು ದೂರು ಆಧರಿಸಿ ಇದೀಗ ಎಫ್ಐಆರ್ ಹಾಕಲಾಗಿದೆ.
ಬೆಂಗಳೂರು, ಜುಲೈ 22: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Valmiki Development Corporation Scam) ಸಂಬಂಧಿಸಿದಂತೆ ಜಾರಿ ನಿರ್ದೇನಾಲಯ ಇಬ್ಬರು ಅಧಿಕಾರಿಗಳಾದ ಮಿತ್ತಲ್ ಹಾಗೂ ಕಣ್ಣನ್ ವಿರುದ್ಧ ನಗರದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಿಂದಿನ ಜಂಟಿ ನಿರ್ದೇಶಕ ಕಲ್ಲೇಶ್ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶೇಷಾದ್ರಿಪುರಂ ಠಾಣೆಯಲ್ಲಿ ಎನ್ಸಿಆರ್ (NCR) ದಾಖಲಾಗಿದ್ದು, ವಿಲ್ಸನ್ ಗಾರ್ಡನ್ ಠಾಣೆಗೆ ವರ್ಗಾವಣೆ ಬಳಿಕ FIR ದಾಖಲಾಗಿದೆ.
ಯಾವುದೇ ತಪ್ಪು ಮಾಡದಿದ್ದರೂ ಕಾನೂನು ಬಾಹಿರವಾಗಿ ಇಡಿ ಅಧಿಕಾರಿ ವಿಚಾರಣೆ ಮಾಡಿದ್ದಾರೆ. ಬೈದು, ನನ್ನ ಮೇಲೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರಗೆ ನ್ಯಾಯಾಂಗ ಬಂಧನ
ಎಂ.ಜಿ ರೋಡ್ ಖಾತೆಗೆ ಹಣವನ್ನು ಸಿಎಂ ಸಿದ್ದರಾಮಯ್ಯ, ನಾಗೇಂದ್ರ ಮತ್ತು ಎಫ್ಡಿ ನಿರ್ದೇಶನದಂತೆ ಮಾಡಿರುತ್ತೇನೆಂದು ಹೇಳುವಂತೆ ಒತ್ತಡ ಇತ್ತೆಂದು ಬರೆದು ಕೊಡುವಂತೆ ಸೂಚಿಸಿದ್ದು, ಸಿಎಂ, ನಾಗೇಂದ್ರ ಸೂಚನೆ ಇತ್ತೆಂದು ಒಪ್ಪಿಕೊ. ಒಪ್ಪಿಕೊಳ್ಳದಿದ್ರೆ ಬಂಧಿಸ್ತೇವೆಂದು ಭಯ ಹುಟ್ಟಿಸಿದ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ
ಎಂ.ಜಿ.ರೋಡ್ ಬ್ಯಾಂಕ್ ಖಾತೆಗೆ ಅನುದಾನ ಜಮಾಮಾಡಲು ನಾಗೇಂದ್ರ, ಎಫ್ಡಿ ಇಲಾಖೆಯಿಂದ ಸೂಚನೆ ಇತ್ತೆಂದು ಒಪ್ಪಿಕೊಂಡ್ರೆ ಮಾತ್ರ ನಿನ್ನ ಬಿಡುತ್ತೇವೆ. ನಂತರ ಮಿತ್ತಲ್ ಎಂಬ ಅಧಿಕಾರಿ ಬಂದು ನನಗೆ ಬೈದಿದ್ದರು. ನೀನೊಬ್ಬ ಅಪರಾಧಿ, ನಿನ್ನನ್ನು ಈಗಲೇ ಅರೆಸ್ಟ್ ಮಾಡುತ್ತೇನೆ. ಇಡಿ ಬಗ್ಗೆ ನಿನಗೆ ಗೊತ್ತಿಲ, 2-3 ವರ್ಷ ನಿನಗೆ ಬೆಲ್ ಸಿಗಲ್ಲ. ನಿನ್ನ ಹೇಳಿಕೆಯನ್ನು ನಾನು ಓದಿದ್ದೇನೆ, ಪ್ರಯೋಜನಕ್ಕೆ ಬರಲ್ಲ. ನಿನಗೆ ಇಡಿ ಸಹಾಯ ಮಾಡಬೇಕೆಂದ್ರೆ ಬರೆದು ಕೊಡಬೇಕು. ಸಿಎಂ, ನಾಗೇಂದ್ರ ನಿರ್ದೇಶನದಂತೆ ಎಂ.ಜಿ.ರೋಡ್ ಖಾತೆಗೆ ಹಣವನ್ನು ವರ್ಗಾಯಿಸಿದ್ದೇನೆ ಎಂದು ಬರೆದುಕೊಡಲು ಒತ್ತಡ ಹೇರಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.