ಪೊಲೀಸರ ಸಮಯ ಪ್ರಜ್ಞೆ: ತಾಯಿ ಸೇರಿದಂತೆ ಇಬ್ಬರು ಮಕ್ಕಳು ಬಚಾವ್​

ಪೊಲೀಸರ ಸಮಯ ಪ್ರಜ್ಞೆಯಿಂದ ಮೂರು ಜೀವಗಳ ರಕ್ಷಣೆ ಮಾಡಲಾಗಿದೆ. ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಯನ್ನು ಪೊಲೀಸರು ರಕ್ಷಣೆ ಮಾಡಿರುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುಗ್ವೆ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.

ಪೊಲೀಸರ ಸಮಯ ಪ್ರಜ್ಞೆ: ತಾಯಿ ಸೇರಿದಂತೆ ಇಬ್ಬರು ಮಕ್ಕಳು ಬಚಾವ್​
ಪೊಲೀಸರ ಸಮಯ ಪ್ರಜ್ಞೆ: ತಾಯಿ ಸೇರಿದಂತೆ ಇಬ್ಬರು ಮಕ್ಕಳು ಬಚಾವ್​
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2024 | 9:42 PM

ಶಿವಮೊಗ್ಗ, ಜುಲೈ 22: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆಗೆ (suicide) ಯತ್ನಿಸಿದ್ದ ತಾಯಿಯನ್ನು ಪೊಲೀಸರು ರಕ್ಷಣೆ (rescue) ಮಾಡಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕುಗ್ವೆ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಸಮಯ ಪ್ರಜ್ಞೆಯಿಂದ 3 ಜೀವಗಳ ರಕ್ಷಣೆ ಮಾಡಲಾಗಿದೆ. ಪ್ರೀತಿ(13), ಪ್ರಜ್ವಲ್(9) ಹಾಗೂ ಸಂಗೀತಾ(33) ಆತ್ಮಹತ್ಯೆಗೆ ಯತ್ನಿಸಿದ್ದವರು. ಜಿಲ್ಲೆಯ ಸಾಗರ ತಾಲೂಕಿನ ಅಣಲೇಕೊಪ್ಪ ನಿವಾಸಿಗಳು.

ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಸ್ಥಳೀಯರು ಪೊಲೀಸರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನ ರಕ್ಷಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅರೆನಗ್ನ ಸ್ಥಿತಿಯಲ್ಲಿ ವಿಶೇಷಚೇತನ ವ್ಯಕ್ತಿ ರಂಪಾಟ 

ಉಡುಪಿ: ಅರೆನಗ್ನ ಸ್ಥಿತಿಯಲ್ಲಿದ್ದ ವಿಶೇಷಚೇತನ ವ್ಯಕ್ತಿಯೊಬ್ಬ ಅತಿಯಾದ ಮದ್ಯಸೇವನೆ ಮಾಡಿ ರಂಪಾಟ ಮಾಡಿದ್ದ ಘಟನೆ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಇತ್ತೀಚೆಗೆ ನಡೆದಿತ್ತು. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನ ತಾಯಿಯನ್ನು ಕರೆಯಿಸಿ ವಶಕ್ಕೆ ನೀಡಿದ್ದರು.

ಇದನ್ನೂ ಓದಿ: ರಾಮನಗರ: ಗೀಸರ್‌ನಿಂದ ವಿಷಾನಿಲ ಸೋರಿಕೆ, ಉಸಿರುಗಟ್ಟಿ ತಾಯಿ, ಮಗ ಸಾವು

ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಈತನ ಅವಾಂತರ ಕಂಡು ಸಾರ್ವಜನಿಕರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅವರು ವಿಶೇಷಚೇತನ ವ್ಯಸನಿಯ ಉಗ್ರವರ್ತನೆ ನಿಯಂತ್ರಿಸಲಾಗದೆ ಪೋಲಿಸರ ನೆರವು ಪಡೆದಿದ್ದರು. ಪೋಲಿಸರ ಕರ್ತವ್ಯಕ್ಕೂ ಅಡ್ಡಿಪಡಿಸುವ ವರ್ತನೆ ಆತನಿಂದ ನಡೆದಿತ್ತು. ಕೊನೆಗೆ ಆತನ ತಾಯಿಯನ್ನು ಸ್ಥಳಕ್ಕೆ ಕರೆಯಿಸಿ ವಶಕ್ಕೆ ನೀಡಲಾಗಿತ್ತು. ರಂಪಾಟ ನಡೆಸಿದ ವ್ಯಕ್ತಿ ಹೊರ ರಾಜ್ಯದ ಪ್ರಜೆ ಎಂದು ಶಂಕಿಸಲಾಗಿತ್ತು.

ಕಾಲಿಗೆ ಗಾಯಗೊಂಡು, ಹಾರಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಮಂಗವನ್ನು ರಕ್ಷಿಸಿ ಉಡುಪಿಯ ಜಿಲ್ಲಾ ನಾಗರಿಕ ಸಮಿತಿ ಪ್ರಾಣಿದಯೆ ತೋರಿದೆ. ಉದ್ಯಾವರ ಪಶುಚಿಕಿತ್ಸಾಲಯದ ಪಶುವೈದ್ಯ ಡಾ. ಸಂದೀಪ್ ಕುಮಾರ್ ಅವರು ಔಷಧೋಪಚಾರದ ನೀಡಿದ ಬಳಿಕ ಮಂಗವನ್ನು ಆರೈಕೆಗಾಗಿ ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿಯವರ ವಶಕ್ಕೆ ನೀಡಲಾಗಿದೆ.

ಇದನ್ನೂ ಓದಿ: ಬಸ್​ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿಂದ ಕಿಡ್ನ್ಯಾಪ್‌ ಆರೋಪ

ಮಂಗವು ಜಿಗಿಯುವಾಗ ಜಂಗು ಹಿಡಿದ ಕಬ್ಬಿಣದ ಕಂಬಿ ಕಾಲಿಗೆ ತಾಗಿದ್ದು, ಕಾಲಿಗಾದ ಗಾಯವು ಕೊಳೆತು ಹುಳಗಳಾಗಿ ಗ್ಯಾಂಗ್ರಿನಿಗೆ ತಿರುಗಿತ್ತು. ನಡೆದಾಡುವ, ಹಾರುವ ಶಕ್ತಿ ಕಳೆದುಕೊಂಡಿದ್ದ ಮಂಗವು ಬೀದಿ ನಾಯಿಗಳ ಆಕ್ರಮಣಕ್ಕೆ ಬಲಿಯಾಗುವ ಸ್ಥಿತಿಯಲ್ಲಿತ್ತು. ಪ್ರಾಣಿಪ್ರಿಯೆ ಅವರು ಶಂಕರಪುರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಂಗವನ್ನು ಉಡುಪಿಗೆ ತಂದು, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರಿಗೆ ಒಪ್ಪಿಸಿದರು. ಆ ಬಳಿಕ ಒಳಕಾಡುವರು ಮಂಗದ ಚಿಕಿತ್ಸೆ ಮತ್ತು ಆರೈಕೆಗೆ ಸೂಕ್ತ ವ್ಯವಸ್ಥೆಗೊಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.