ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು

15 ದಿನ ಹಿಂದೆ ಅಷ್ಟೇ ಮದುವೆಯಾಗಿದ್ದು, ಹೊಸ ಸಂಸಾರ ಪ್ರಾರಂಭಿಸುವ ಮುನ್ನ ದೇವರ ಆಶೀರ್ವಾದಕ್ಕೆ ತೆರಳಿದ್ದರು. ತಮ್ಮ ಹೊಸ ಜೀವನ ಚೆನ್ನಾಗಿರಲಿ ಎಂದು ನವದಂಪತಿ ದೇವರ ಹತ್ತಿರ ಬೇಡಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಆದ್ರೆ, ವಿಧಿ ನವದಂಪತಿಯನ್ನು ಮಾರ್ಗ ಮಧ್ಯದಲ್ಲೇ ಬಲಿ ಪಡೆದುಕೊಂಡಿದೆ. ಇದರೊಂದಿಗೆ ಇನ್ನೇನು ಹೊಸ ಬಾಳಿನ ಹೊಸಿಲಲ್ಲೇ ಜೋಡಿ ದುರಂತ ಅಂತ್ಯಕಂಡಿದೆ.

ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು
Haveri Accident

Updated on: Mar 01, 2026 | 4:18 PM

ಹಾವೇರಿ, (ಮಾರ್ಚ್ 01): ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ (New Couple) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರ್ತಿಕ್ ಹೂಗಾರ(34), ಐಶ್ವರ್ಯಾ(30) ಮೃತ ದುರ್ದೈವಿಗಳು. ಕಾರ್ತಿಕ್​, ಐಶ್ವರ್ಯಾ 15 ದಿನಗಳಿಂದ ಅಷ್ಟೇ ಮದುವೆಯಾಗಿದ್ದು, ಹೊಸ ಸಂಸಾರ ಪ್ರಾರಂಭಿಸುವ ಮುನ್ನ ದೇವರ ದರ್ಶನಕ್ಕೆ ಹೋಗಿ ಒಳ್ಳೇದು ಮಾಡಪ್ಪ ಎಂದು ಬೇಡಿಕೊಂಡು ಊರಿಗೆ ವಾಪಸ್ ಆಗುತ್ತಿದ್ದರು. ಆದ್ರೆ, ವಿಧಿ ಅರ್ಧ ದಾರಿಯಲ್ಲೇ ನವದಂಪತಿಯನ್ನು ಬಲಿ ಪಡದುಕೊಂಡಿದೆ.

ಹಾವೇರಿ ನಗರದ ನಿವಾಸಿಯಾಗಿರುವ ಕಾರ್ತಿಕ್ ಹೂಗಾರ ಹಾಗೂ ಐಶ್ವರ್ಯಾ 15 ದಿನದ ಹಿಂದೆ ಹೊಸ ಬಾಳಿಗೆ ಕಾಲಿಟ್ಟಿದ್ದು, ಹೊಸತರಲ್ಲಿ ದೇವರ ಆಶೀರ್ವಾದ ಇರಲಿ ಎಂದು ದೇವಸ್ಥಾನಕ್ಕೆ ಹೋಗಿದ್ದರು. ಆದ್ರೆ, ನಿನ್ನೆ (ಫೆಬ್ರವರಿ 28) ದೇವರ ದರ್ಶನಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮದುವೆಯಾಗಿ ಕೇವಲ 15 ದಿನಗಳು ಆಗಿತ್ತು ಅಷ್ಟೇ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಚರಣೆ ನಡೆಸಿ ಕಾರಿನಿಂದ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ಇದನ್ನೂ ನೋಡಿ: Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!

ಜೋಡಿ KA-63 M-0522 ವ್ಯಾಗನಾರ್ ಕಾರಿನಲ್ಲಿ ಹುಬ್ಬಳ್ಳಿ ಕಡೆಯಿಂದ ಶಿಗ್ಗಾಂವಿ ಕಡೆಗೆ ತೆರಳುತ್ತಿದ್ದು, ಈ ವೇಳೆ ಕಾರು ವೇಗವಾಗಿ ಹೋಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಕಾರಿನಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಇತ್ತ ಎರಡೂ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us