
ಹಾವೇರಿ, (ಸೆಪ್ಟೆಂಬರ್ 13): ನೀನೇ ನನ್ನ ಜೀವ. ನೀನೇ ನನ್ನ ಪ್ರಾಣ ಅಂತ ಯುವಕನೋರ್ವ ಜೀವಕ್ಕಿಂತ ಹೆಚ್ಚಾಗಿ ಯುವತಿಯನ್ನು ಹುಚ್ಚನಂತೆ ಪ್ರೀತಿ ಮಾಡುತ್ತಿದ್ದ. ಆದರೆ ವಿಧಿಯಾಟವೇ ಬೇರೆ ಇತ್ತು. ಪೋಷಕರ ಒತ್ತಾಯಕ್ಕೆ ಮಣಿದ ಯುವತಿ ನಾನು ನಿನ್ನ ಜೊತೆ ಇರಲ್ಲ ಎಂದಿದ್ದಾಳೆ. ಪ್ರೀತಿಸಿ ಮದುವೆಯಾದ ಹುಡುಗಿ ಬಿಟ್ಟು ಹೋದಳೆಂದು ಪ್ರೇಮಿ ನೇಣಿಗೆ ಸಾವಿಗೆ ಶರಣಾಗಿದ್ದಾನೆ. ಪ್ರೀತಿಸಿ ಮದುವೆಯಾದ ಹುಡುಗಿಯನ್ನು ತನ್ನಿಂದ ಬೇರ್ಪಡಿಸಿದರು ಎಂದು ನೊಂದುಕೊಂಡು ಪಾಗಲ್ ಪ್ರೇಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಜುನಾಥ್ ಅಗಡಿ ಎಂಬ 24 ವರ್ಷ ವರ್ಷದ ಯುವಕನೇ ಈ ನತದೃಷ್ಟ. ಆತ್ಮಹತ್ಯೆಗೆ ಶರಣಾದ ಮಂಜುನಾಥ್ ಹಾವೇರಿ ನಗರದ ನಿವಾಸಿ.
ಕಳೆದ 2 ವರ್ಷಗಳ ಹಿಂದೆ ಹಾವೇರಿ ಬಳಿಯ ಗ್ರಾಮವೊಂದರ ಯುವತಿಯೊಬ್ಬಳ ಜೊತೆ ಮಂಜುನಾಥ್ ಲವ್ ನಲ್ಲಿದ್ದ. ಇಬ್ರೂ ಪರಸ್ಪರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆದರೆ ಯುವತಿ ಪೋಷಕರಿಗೆ ಈ ಜೋಡಿ ಬಿಲ್ ಕುಲ್ ಇಷ್ಟ ಇರಲಿಲ್ಲ. ಯುವತಿ ಪೋಷಕರ ವಿರೋಧದ ನಡುವೆ ಮಂಜುನಾಥ್ ಕಳೆದ 15 ದಿನಗಳ ಹಿಂದೆ ಯುವತಿ ಜೊತೆ ಪರಾರಿಯಾಗಿ ಧರ್ಮಸ್ಥಳದಲ್ಲಿ ಯುವತಿ ಕೊರಳಿಗೆ ಅರಿಶಿಣ ಕೊಂಬು ಕಟ್ಟಿ ಮದುವೆ ಆಗಿದ್ದ.
ಆದ್ರೆ, ಇತ್ತ ಯುವತಿ ಪೋಷಕರು ಮಗಳು ಕಾಣೆಯಾಗಿದ್ದರಿಂದ ಗಾಬರಿಗೊಂಡ ಪೋಷಕರು ಹಾವೇರಿ ಮಹಿಳಾ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಕೆಲ ದಿನಗಳ ಬಳಿಕ ಈ ಲವ್ ಬರ್ಡ್ ಗಳನ್ನು ಪತ್ತೆ ಹಚ್ಚಿದ್ದ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಯುವತಿ, ಮಂಜುನಾಥ್ ಜೊತೆ ಸಂಸಾರ ಮಾಡಲು ಒಲ್ಲೆ ಎಂದು ಪೋಷಕರ ಜೊತೆ ಮನೆಗೆ ತೆರಳಿದ್ದಾಳೆ. ಇದರಿಂದ ತೀವ್ರವಾಗಿ ಮನನೊಂದಿದ್ದ ಮಂಜುನಾಥ್ ಹಲವು ದಿನಗಳಿಂದ ಹುಚ್ಚನಂತೆ ಆಗಿದ್ದ.
ತೀವ್ರ ಖಿನ್ನತೆಗೆ ಒಳಗಾಗಿದ್ದ ಮಂಜುನಾಥ್ ಗೆ ಅವರ ತಾಯಿ ಹಾಗೂ ತಮ್ಮ ಬುದ್ದಿ ಹೇಳಿದ್ರು. ತಲೆ ಕೆಡಿಸಿಕೊಳ್ಳದೇ ಆರಾಮಾಗಿ ಇರು ಎಂದು ಬುದ್ದಿ ಹೇಳಿದ್ರು. ಆದರೆ ಮಂಜುನಾಥ್ ಗೆ ತನ್ನ ಸಂಗಾತಿಯನ್ನು ಮರೆಯಲು ಆಗಲಿಲ್ಲ. ಇಂದು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ https://tv9kannada.com/karnatakaನೋಡಿ ನೇಣಿಗೆ ಶರಣಾಗಿದ್ದಾನೆ. ಮಗನ ಶವ ನೋಡಿ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಒಟ್ಟಿನಲ್ಲಿ ಬಾಳಿ ಬದುಕಬೇಕಿದ್ದ ಮಗ ನೇಣಿಗೆ ಕೊರಳೊಡ್ಡಿದ್ದು ನೋಡಿ ಹೆತ್ತವ್ವ ಮುಗಿಲು ಮುಟ್ಟುವಂತೆ ಅತ್ತಿದ್ದು ನೋಡಿ ನೆರೆ ಹೊರೆಯವರೂ ಕಣ್ಣೀರು ಹಾಕಿದರು. ಪ್ರೀತಿಯ ಮಾಯಾಜಾಲಕ್ಕೆ ಸಿಲುಕಿ ಮಂಜುನಾಥ್ ತನ್ನ ಜೀವವನ್ನೇ ಕಳೆದುಕೊಂಡಿದ್ದು ವಿಪರ್ಯಾಸ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
Published On - 6:12 pm, Sun, 13 September 26