AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime Update: ಟಿಕೆಟ್ ಖರೀದಿಗೆ ಗಲಾಟೆ, ಡ್ರೈವರ್ ಕಂಡಕ್ಟರ್ ಮೇಲೆ ಹಲ್ಲೆ, ಎಸಿಬಿ ಬಲೆಗೆ ಪಟ್ಟಣ ಪಂಚಾಯ್ತಿ ಅಧಿಕಾರಿ

ಓರ್ವ ಮಹಿಳೆ ಸೇರಿದಂತೆ ಆರು ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಸಾರಿಗೆ ನಿಗಮದ ಸಿಬ್ಬಂದಿ ಆಗ್ರಹಿಸಿದ್ದಾರೆ.

Crime Update: ಟಿಕೆಟ್ ಖರೀದಿಗೆ ಗಲಾಟೆ, ಡ್ರೈವರ್ ಕಂಡಕ್ಟರ್ ಮೇಲೆ ಹಲ್ಲೆ, ಎಸಿಬಿ ಬಲೆಗೆ ಪಟ್ಟಣ ಪಂಚಾಯ್ತಿ ಅಧಿಕಾರಿ
ಹಾನಗಲ್​ನಲ್ಲಿ ಹಲ್ಲೆಗೊಳಗಾದ ಸಾರಿಗೆ ಬಸ್ ಸಬ್ಬಂದಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Dec 09, 2021 | 11:29 PM

Share

ಹಾವೇರಿ: ಬಸ್‌ನಲ್ಲಿ ಬಾಲಕನಿಗೆ ಟಿಕೆಟ್ ಖರೀದಿಸುವ ವಿಚಾರಕ್ಕೆ ಶುರುವಾದ ಗಲಾಟೆಯಿಂದ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಖಂಡಿಸಿ ಸಾರಿಗೆ ನಿಗಮದ ಸಿಬ್ಬಂದಿ ಹಾನಗಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು. ಬಸ್‌ ಚಾಲಕ ಶಿವಾನಂದ ಮತ್ತು ಕಂಡಕ್ಟರ್ ವೀರಪ್ಪ ಮೇಲೆ ಹಲ್ಲೆ ನಡೆದಿದೆ. ಓರ್ವ ಮಹಿಳೆ ಸೇರಿದಂತೆ ಆರು ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಸಾರಿಗೆ ನಿಗಮದ ಸಿಬ್ಬಂದಿ ಆಗ್ರಹಿಸಿದ್ದಾರೆ. ಗಾಯಾಳು ಚಾಲಕನಿಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಹಾನಗಲ್​ಗೆ ಮಹಿಳೆಯು ಬಾಲಕನೊಂದಿಗೆ ಪ್ರಯಾಣಿಸಿದ್ದರು. ಬಾಲಕನಿಗೆ ಪೂರ್ತಿ ಟಿಕೆಟ್ ತೆಗೆಸುವಂತೆ ಹೇಳಿದ್ದ ಕಂಡಕ್ಟರ್ ಜೊತೆಗೆ ಮಹಿಳೆ ಜಗಳವಾಡಿಕೊಂಡಿದ್ದರು. ಬಸ್ಸು ಹಾನಗಲ್ ಬಸ್ ನಿಲ್ದಾಣಕ್ಕೆ ಬಂದಾಗ ತಮ್ಮ ಕಡೆಯವರನ್ನು ಕರೆಸಿ ಕಂಡಕ್ಟರ್ ಮೇಲೆ ಮಹಿಳೆ ಮತ್ತು ಅವರ ಪರಿಚಿತರು ಹಲ್ಲೆ ನಡೆಸಲು ಮುಂದಾಗಿದ್ದರು. ಕಂಡಕ್ಟರ್​ರನ್ನು ಹಲ್ಲೆಯಿಂದ ಬಿಡಿಸಲು ಮುಂದಾದ ಡ್ರೈವರ್ ಮೇಲೂ ಹಲ್ಲೆ ನಡೆಯಿತು. ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ಮತ್ತು ಡ್ರೈವರ್ ಮೇಲಿನ ಹಲ್ಲೆ ನೋಡಿ ಜನರು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಜಮಾಯಿಸಿದ ನಂತರ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು. ಡ್ರೈವರ್ ಶಿವಾನಂದ ಹೊಟ್ಟೆಗೆ ಹೆಚ್ಚಿನ ಪೆಟ್ಟು ಬಿದ್ದಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಮೊಸಳೆ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ ಬೆಂಗಳೂರು: ನಗರದಲ್ಲಿ ಜೀವಂತ ಮೊಸಳೆ ಮರಿ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಈಶ್ವರಿ ಥಿಯೇಟರ್ ಸಮೀಪ ಪೊಲೀಸರು ಬಂಧಿಸಿದ್ದಾರೆ. ಜಯನಗರದ ಅಬ್ದುಲ್, ರಾಮನಗರದ ಗಂಗಾಧರ್ ಬಂಧಿತರು. ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಸಿಬಿ ಬಲೆಗೆ ಪ.ಪಂ. ಮುಖ್ಯಾಧಿಕಾರಿ ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮತ್ತು ಆರ್​ಐ ದೇವರಾಜು ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಮೀನಿಗೆ ಒ-ಸ್ವತ್ತು ನೀಡಲು 3,000 ರೂಪಾಯಿ ಲಂಚ ಸ್ವೀಕರಿಸುವಾಗ ಇವರನ್ನು ಎಸಿಬಿ ವಶಕ್ಕೆ ಪಡೆಯಿತು. ಇ-ಸ್ವತ್ತು ಮಾಡಿಕೊಡಲು ಇವರು 30 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಾಗಿ 3 ಸಾವಿರ ರೂ ಲಂಚ ಪಡೆಯುವಾಗ ಕಚೇರಿಯಲ್ಲೇ ಎಸಿಬಿ ಬಲೆಗೆ ಬಿದ್ದರು.

ಟಂಟಂ ಪಲ್ಟಿ: ಮಹಿಳೆ ಸಾವು ಯಾದಗಿರಿ: ನಾಯಿ ಅಡ್ಡು ಬಂದು ಟಂಟಂ ವಾಹನ ಪಲ್ಟಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರ ಬಳಿ ನಡೆದಿದೆ. ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದ ಅನೀತಮ್ಮ (35) ಮೃತ ಮಹಿಳೆ. ಟಂಟಂ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರಿಗೆ ಗಾಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Crime News: ಆಲ್ಕೋಹಾಲ್ ತರಲಿಲ್ಲವೆಂದು ಹೊಡೆದ ಮಗನನ್ನೇ ಕೊಂದ ತಾಯಿ! ಇದನ್ನೂ ಓದಿ: ಬಾಗಲಕೋಟೆ: 2012ರಲ್ಲಿ ನಡೆದ ಕೊಲೆ ಪ್ರಕರಣದ 7 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ

Published On - 11:24 pm, Thu, 9 December 21