AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಾ ಮೆಲ್ದಂಡೆ ಯೋಜನೆಯಡಿಯಲ್ಲಿ ಕಾಲುವೆ ನಿರ್ಮಾಣ; ಅಸಮರ್ಪಕ ನಿರ್ವಹಣೆಯಿಂದ ಬರದ ನೀರು, ರೈತರು ಕಂಗಾಲು

ಜಿಲ್ಲೆಯ ರೈತರಿಗೆ ಅನಕೂಲವಾಗಲು, ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೀರಾವರಿ ಯೋಜನೆ, ರೈತರ ಪಾಲಿಗೆ ಮುಳುವಾಗಿ ಪರಿಣಮಿಸಿದೆ. ಹೌದು ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಬೆಸತ್ತು, ಈ ಯೋಜನೆ ಯಾಕಾದ್ರೂ ಜಾರಿಗೆ ತಂದಿರೂ ಎಂದು ರೈತರು ಪ್ರಶ್ನಿಸಿತೊಡಗಿದ್ದಾರೆ. ಏನು ಇದೆ ಕಥೆ ಅಂತೀರಾ? ಇಲ್ಲಿದೆ ನೋಡಿ.

ತುಂಗಾ ಮೆಲ್ದಂಡೆ ಯೋಜನೆಯಡಿಯಲ್ಲಿ ಕಾಲುವೆ ನಿರ್ಮಾಣ; ಅಸಮರ್ಪಕ ನಿರ್ವಹಣೆಯಿಂದ ಬರದ ನೀರು, ರೈತರು ಕಂಗಾಲು
ಪ್ರಾತಿನಿಧಿಕ ಚಿತ್ರ
ಕಿರಣ್ ಹನುಮಂತ್​ ಮಾದಾರ್
|

Updated on:May 17, 2023 | 11:05 AM

Share

ಹಾವೇರಿ: ಕೃಷಿಗೆ ಅವಶ್ಯಕವಾಗಿರುವ ನೀರು, ಹಾಗೂ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ನೀಡಿದ್ರೆ, ರೈತನ ಬಾಳು ಹಸನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ವಿಚಾರವನ್ನಿಟ್ಟುಕೊಂಡು ಹಾವೇರಿ(Haveri) ಜಿಲ್ಲೆಯ ಜಿಲ್ಲೆಯ ಐದಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ರೈತರಿಗೆ ಅನುಕೂಲವಾಗಲೆಂದು ತುಂಗಾ ಮೆಲ್ದಂಡೆ ಯೋಜನೆಯಡಿಯಲ್ಲಿ ನಿರ್ಮಿಸಿರುವ ಕಾಲುವೆ ನಿರ್ಮಿಸಲಾಗಿದೆ. ಬೃಹತ್ ಗಾತ್ರದಲ್ಲಿ ನಿರ್ಮಿಸಿರುವ ಈ ಕಾಲುವೆಯಿಂದ ರೈತರಿಗೆ ಅನಕೂಲಕ್ಕಿಂತ ಅನಾನೂಕೂಲವೇ ಜಾಸ್ತಿ ಆಗಿದೆ. ಹೌದು ಕೊಟ್ಯಾಂತರ ರೂಪಾಯಿ ವೆಚ್ಚದ ತುಂಗಾ ಮೆಲ್ದಂಡೆ ಯೋಜನೆ ಘೋಷಣೆ ಆದಾಗ, ಹಾವೇರಿ ಜಿಲ್ಲೆಯ ರೈತರು ಸಂತಸ ವ್ಯಕ್ತಪಡಿಸಿದ್ರು, ಅಷ್ಟೆ ಅಲ್ಲದೆ ಹುಲ್ಲು ಕಡ್ಡಿಯೂ ಬೆಳೆಯಲಾಗದ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಬಹುದೆಂದು ಯೋಜನೆಗೆ ತಮ್ಮ ಜಮೀನನ್ನು ನೀಡಿದ್ರೂ. ಆದ್ರೆ, ಈ ಯೋಜನೆಯನ್ನ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ, ಕಾಲುವೆಯಲ್ಲಿ ನೀರು ಬರುವುದಂತೂ ಕಷ್ಟ. ಅಲ್ಲದೆ, ಕಾಲುವೆ ಪಕ್ಕದ ಜಮಿನುಗಳಲ್ಲಿ ಹಾವುಗಳ ಕಾಟ ಜಾಸ್ತಿಯಾಗಿದ್ದೂ, ಗದ್ದೆಗೆ ಹೊಗಲು ಯೋಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಈ ಕಾಲುವೆಗೆ ಬರುವ ನೀರು, ಕೊನೆಯವರೆಗೂ ಹೋಗದೆ ಮಧ್ಯದಲ್ಲೆ ರೈತರ ಬೆಳೆಗಳಿಗೆ ನುಗ್ಗಿ ಬೆಳೆ ಹಾನಿಯಾದ ಎಷ್ಟೊ ಘಟನೆಗಳನ್ನು ಇಲ್ಲಿನ ರೈತರು ಅನುಭವಿಸಿದ್ದಾರೆ. ಇನ್ನೂ ಇಷ್ಟೆಲ್ಲಾ ಕಷ್ಟ ಅನೂಭವಿಸುತ್ತಿರುವ ಈ ರೈತರು ಕಾಲುವೆ ನಿರ್ಮಾಣಕ್ಕಾಗಿ ಕೊಟ್ಟ ಜಮೀನಿಗೆ ಇದುವರೆಗೂ ಪರಿಹಾರವೂ ಸಿಕ್ಕಿಲ್ಲ. ಒಟ್ಟಾರೆಯಾಗಿ ರೈತರಿಗೆ ವರದಾನ ಆಗಬೇಕಿದ್ದ ಕೊಟ್ಯಾಂತರ ರೂಪಾಯಿ ವೆಚ್ಚದ ಈ ಯೋಜನೆ, ಸಾಲು ಸಾಲು ಕಷ್ಟಗಳನ್ನೆ ನೀಡಿದ್ದೂ, ಇನ್ನು ಮೇಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತೂ, ಕಾಲುವೆಯನ್ನು ಸಮರ್ಪಕ ನಿರ್ವಹಣೆ ಮಾಡಿ ಅನ್ನದಾತನಿಗೆ ಯೋಜನೆಯ ಲಾಭ ಸಿಗುವಂತಾಗಬೇಕಿದೆ.

ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲ ಗ್ಯಾರಂಟಿಗಳನ್ನು ನಾವು ಈಡೇರಿಸುತ್ತೇವೆ, ರೈತರಿಗೆ ಹೆಚ್ಚಿನ ಅನುದಾನ ಮೀಸಲು: ರಾಹುಲ್ ಗಾಂಧಿ

ಏಕಾಏಕಿ ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾದ ರೈತ

ಸೀಸನ್​ ಅಲ್ಲದ ಸಮಯದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಇನ್ನು ಸೀಸನ್‌ ಅಲ್ಲದ ಕಾರಣ ಕಳೆದ ಒಂದೆರಡು ತಿಂಗಳಿಂದ ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವಿಭಾಗದಲ್ಲಿ ವಹಿವಾಟು ಕುಸಿತವಾಗಿದೆ. ಏಕಾಏಕಿ ಸೋಮವಾರದಿಂದ ಇಲ್ಲಿಗೆ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದ್ದು, ಕಡಿಮೆ ಗುಣಮಟ್ಟದ ಹೆಚ್ಚು ಈರುಳ್ಳಿ ಬಂದಿರುವ ಕಾರಣಕ್ಕೆ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದೆ. ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 8-10 ರೂ. ಗೆ ಮಾರಾಟವಾಗುತ್ತಿದ್ದು, ಕಳಪೆ ಈರುಳ್ಳಿ ಬೆಲೆ 5-8 ದರದಲ್ಲಿ ಹರಾಜು ಹಾಕಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 20 ರೂ. ಗೆ ಮಾರಾಟವಾಗುತ್ತಿದ್ದು, ಕಳಪೆ ಈರುಳ್ಳಿಗೆ 10-12 ರೂ. ಮಾತ್ರವೇ ಬೆಲೆಯಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 11:05 am, Wed, 17 May 23