ವಿಜಯನಗರ: ಅಕಾಲಿಕ ಮಳೆಗೆ ತತ್ತರಿಸಿದ ರೈತ; ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಸಂಪೂರ್ಣ ನಾಶ
ರಾಜ್ಯಾದ್ಯಂತ ನಿನ್ನೆ(ಮೇ.10) ವಿಧಾನಸಭೆ ಚುನಾವಣೆ ಮತದಾನ ಭರ್ಜರಿಯಾಗಿ ನಡೆದಿದೆ. ಮೇ.13 ರಂದು ಫಲಿತಾಂಶ ಬರಲಿದೆ. ಈ ಮಧ್ಯೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದ್ದು, ಭಾರಿ ಪ್ರಮಾಣದಲ್ಲಿ ಗಾಳಿ ಬಿಸಿದೆ. ಈ ಹಿನ್ನಲೆ ಮರಗಳು ನೆಲಕ್ಕಿರುಳಿದಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ.
ವಿಜಯನಗರ: ರಾಜ್ಯಾದ್ಯಂತ ನಿನ್ನೆ(ಮೇ.10) ವಿಧಾನಸಭೆ ಚುನಾವಣೆ ಮತದಾನ ಭರ್ಜರಿಯಾಗಿ ನಡೆದಿದೆ. ಮೇ.13 ರಂದು ಫಲಿತಾಂಶ ಬರಲಿದೆ. ಈ ಮಧ್ಯೆ ಜಿಲ್ಲೆಯ ಹರಪನಹಳ್ಳಿ(Harapanahalli) ತಾಲೂಕಿನಲ್ಲಿ ಭರ್ಜರಿ ಮಳೆಯಾಗಿದ್ದು, ಭಾರಿ ಪ್ರಮಾಣದಲ್ಲಿ ಗಾಳಿ ಬಿಸಿದೆ. ಈ ಹಿನ್ನಲೆ ಮರಗಳು ನೆಲಕ್ಕಿರುಳಿದಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಅಕಾಲಿಕ ಮಳೆಗೆ ನೆಲಕಚ್ಚಿದ್ದು, ರೈತ ಕಂಗಾಲಾಗಿದ್ದಾನೆ. ಇನ್ನು ಈ ಕುರಿತು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಮಳೆ ಸಹಿತ ಬಿರುಗಾಳಿ; ಸರ್ಕಾರಿ ಶಾಲೆಯಲ್ಲಿ ಬಿದ್ದ ಬೃಹತ್ ಮರ
ಕಲಬುರಗಿ: ಜಿಲ್ಲೆಯಲ್ಲಿ ಮೇ.9ರಂದು ಸಂಜೆ ಬಾರಿ ಬಿರುಗಾಳಿ ಸಹಿತ ಮಳೆಯಾಗಿತ್ತು. ಈ ಕಾರಣ ನಗರದ ಕೋಟನೂರು ಡಿ ಬಡಾವಣೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿತ್ತು. ಅದು ಅಲ್ಲದೆ ನಿನ್ನೆ ಚುನಾವಣೆ ನಿಮಿತ್ತ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಧೀಡಿರನೆ ಮರ ಬಿದ್ದಿದೆ. ಇದರಿಂದ ಕೆಲಹೊತ್ತು ಸಿಬ್ಬಂಧಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ:ರಾಮನಗರ: ಅಕಾಲಿಕ ಮಳೆ ಮತ್ತು ಶೀತಗಾಳಿಯಿಂದ ಕಂಗಾಲಾದ ಮಾವು ಬೆಳೆಗಾರರು, ಇಳುವರಿ ಕುಂಠಿತವಾಗುವ ಆತಂಕ
ಭಾರಿ ಗಾಳಿ ಮಳೆಗೆ ಹಾರಿಹೋದ ಚೆಕ್ ಪೊಸ್ಟ್ ಛಾವಣಿ: ಕರ್ತವ್ಯ ನಿರತ 2 ಸಿಬ್ಬಂದಿಗೆ ಗಂಭೀರ ಗಾಯ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಚೆಕ್ ಪೊಸ್ಟ್ ಛಾವಣಿ ಹಾರಿ ಕರ್ತವ್ಯ ನಿರತ ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರವಂತಹ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಳಿಯ ಕರ್ನಾಟಕ ಮಹಾರಾಷ್ಟ್ರ ಗಡಿಯ ಚೆಕ್ ಪೊಸ್ಟ್ನಲ್ಲಿ ಮೇ.9 ರಂದು ನಡೆದಿದೆ. ತಾಲ್ಲೂಕು ಆಡಳಿತ ಸಿಬ್ಬಂದಿ ಮಾರುತಿ ಪಾಟೀಲ್, SSB ಸೇನಾ ಭದ್ರತಾ ಸಿಬ್ಬಂದಿ ಕಾಳುಸಿಂಗಗೆ ಗಾಯವಾಗಿದೆ. ಗಾಯಾಳುಗಳಿಗೆ ನಿಪ್ಪಾಣಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಳೆ ಚುನಾವಣಾ ಹಿನ್ನೆಲೆ ಕರ್ನಾಟಕ, ಮಹಾರಾಷ್ಟ್ರ ಗಡಿಯ ಚೆಕ್ ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಭಾರಿ ಪ್ರಮಾಣದ ಗಾಳಿ ಮಳೆ ಹಿನ್ನೆಲೆ ಚೆಕ್ ಪೊಸ್ಟ್ ಶೇಡಿನ ಛಾವಣಿ ಹಾಕಿ ಹೋಗಿ ಘಟನೆ ಸಂಭವಿಸಿದೆ.
ಬಸ್ ಮೇಲೆ ಧರೆಗುರುಳಿದ ಬೃಹತ್ ಮರ: ಯುವತಿ ಗಂಭೀರ
ಗದಗ: ಭಾರಿ ಗಾಳಿ ಮಳೆಗೆ ಬೃಹತ್ ಮರ ಧರೆಗುರುಳಿ ಸಾರಿಗೆ ಸಂಸ್ಥೆಯ ಬಸ್ ಮೇಲೆ ಬಿದಿದ್ದಿತ್ತು. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಬಳಿ ಘಟನೆ ನಡೆದಿತ್ತು. ಬಸ್ನಲ್ಲಿದ್ದ ಯುವತಿಗೆ ಗಂಭೀರವಾದ ಗಾಯವಾಗಿದ್ದು, ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಗಜೇಂದ್ರಗಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿತ್ತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ