ನಾಲ್ಕು ತಿಂಗಳಿನಿಂದ ಹಾವೇರಿ ರೇಷ್ಮೆ ಮಾರುಕಟ್ಟೆ ಬಂದ್: ರಾಮನಗರದತ್ತ ಮುಖ ಮಾಡಿದ ಬೆಳೆಗಾರರು

ಹಾವೇರಿ ಜಿಲ್ಲೆಯ ರೇಷ್ಮೆ ಮಾರುಕಟ್ಟೆ ಕಳೆದ ನಾಲ್ಕು ತಿಂಗಳಿಂದ ಬಂದ್ ಆಗಿದ್ದು, ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರಾಮನಗರಕ್ಕೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೋಗುವಂತಾಗಿದೆ. ಸರ್ಕಾರದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣವೆನ್ನಲಾಗುತ್ತಿದೆ. ಸರ್ಕಾರ ಆನಲೈನ್ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಕೂಗು ಕೇಳಿಬಂದಿದೆ.

ನಾಲ್ಕು ತಿಂಗಳಿನಿಂದ ಹಾವೇರಿ ರೇಷ್ಮೆ ಮಾರುಕಟ್ಟೆ ಬಂದ್: ರಾಮನಗರದತ್ತ ಮುಖ ಮಾಡಿದ ಬೆಳೆಗಾರರು
ನಾಲ್ಕು ತಿಂಗಳಿನಿಂದ ಹಾವೇರಿ ರೇಷ್ಮೆ ಮಾರುಕಟ್ಟೆ ಬಂದ್: ರಾಮನಗರದತ್ತ ಮುಖ ಮಾಡಿದ ಬೆಳೆಗಾರರು
Edited By:

Updated on: Feb 28, 2025 | 9:53 PM

ಹಾವೇರಿ, ಫೆಬ್ರವರಿ 28: ಕಳೆದ ಎರಡು ವರ್ಷಗಳಿಂದ ಹಾವೇರಿ ಜಿಲ್ಲೆಯ ರೇಷ್ಮೆ (Silk) ಮಾರುಕಟ್ಟೆ ಕರ್ನಾಟಕದ ಎರಡನೇ ಅತೀ ದೊಡ್ಡ ಮಾರುಕಟ್ಟೆಯಾಗಿತ್ತು. ಈಗ ವರ್ಷದಿಂದ ವರ್ಷಕ್ಕೆ ರೇಷ್ಮೆ ಬೆಳೆಗಾರರು ಹೆಚ್ಚುತ್ತಿದ್ದಾರೆ ಹೊರತು ಖರೀದಿದಾರರು ಇಲ್ಲಾಗಿದೆ. ಹೀಗಾಗಿ ರೇಷ್ಮೆ ಮಾರುಕಟ್ಟೆ ಬಂದ್ ಆಗಿದ್ದು, ಜಿಲ್ಲೆಯ ರೇಷ್ಮೆ ಬೆಳೆಗಾರರು ರಾಮನಗರ ಮಾರುಕಟ್ಟೆಯತ್ತ ಮುಖ‌ ಮಾಡಿದ್ದಾರೆ.‌

ಇದ್ದು ಇಲ್ಲದಂತಾದ ಮಾರುಕಟ್ಟೆ 

ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಮಾರುಕಟ್ಟೆ ಇದ್ದು ಇಲ್ಲದಂತಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ರೇಷ್ಮೆ ಮಾರುಕಟ್ಟೆ ಬಂದ್ ಆಗಿದ್ದು, ರೇಷ್ಮೆ ಗೂಡು ಮಾರಲು ಬೆಳೆಗಾರರು ರಾಮನಗರದತ್ತ ಮುಖ‌ ಮಾಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. 800 ಕ್ಕೂ ಅಧಿಕ ಬೆಳೆಗಾರರು ಜಿಲ್ಲೆಯಲ್ಲಿದ್ದಾರೆ.‌ ಪ್ರತಿದಿನ ನಾಲ್ಕರಿಂದ ಐದು‌ ಕ್ವಿಂಟಾಲ್ ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ಸರ್ಕಾರದ ರೇಷ್ಮೆ ಮಾರುಕಟ್ಟೆ ಇದ್ದು ಇಲ್ಲದಂತಾಗಿದೆ.

ಇದನ್ನೂ ಓದಿ: ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸರ್ಕಾರಕ್ಕೆ ಸಂಸದ ಡಾ. ಮಂಜುನಾಥ್ ಸಲಹೆ

ಇದನ್ನೂ ಓದಿ
ರೇಷ್ಮೆ ಬೆಳೆಗೆ ಸಂಕಷ್ಟ: ಕುಸಿಯುತ್ತಿದೆ ಬೆಳೆಗಾರರ ಸಂಖ್ಯೆ
ಕೂಲಿ ಕೆಲಸಕ್ಕೆ ಬರುವ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ರೈತ
ಕೊಪ್ಪಳ: ಗೂಡು ಕಟ್ಟದ ರೇಷ್ಮೆ ಹುಳುಗಳು; ಆತಂಕದಲ್ಲಿ ರೇಷ್ಮೆ ಬೆಳೆಗಾರರು
Kolar News: ರೇಷ್ಮೆ ಕೃಷಿ ಮಾಡಿ ನಷ್ಟ ಅನುಭವಿಸಿದ ರೈತರು; ಕಳಪೆ ಹುಳುಗಳ ವಿತರಣೆಯೇ ಕಾರಣವೆಂದ ಅನ್ನದಾತ

ಪ್ರಾರಂಭದಲ್ಲಿ ರಾಮನಗರ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಖರೀದಿದಾರರು ಖರೀದಿ ಮಾಡಲು ಬರುತ್ತಿದ್ದರು. ಈಗ ಖರೀದಿಸಲು ಯಾರು ಬರುತ್ತಿಲ್ಲ. ಹೀಗಾಗಿ ನಾವು ರಾಮನಗರದಲ್ಲಿ ಉತ್ತಮ ದರ ಸಿಗುತ್ತೆ. ಅಲ್ಲಿ ದೊಡ್ಡ ಮಾರ್ಕೆಟಿಂಗ್ ವ್ಯವಸ್ಥೆ ಆಗಬೇಕು ಎಂದು ರೇಷ್ಮೆ ಬೆಳೆದ ರೈತ ಶಿವಾನಂದ ಹೇಳುತ್ತಾರೆ.

ರಾಮನಗರದತ್ತ ಮುಖ ಮಾಡಿದ ರೈತರು

ವರ್ಷದಿಂದ ವರ್ಷಕ್ಕೆ ಹಾವೇರಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಾಗುತ್ತಿದ್ದಾರೆ. ಉತ್ತಮಗುಣಮಟ್ಟದ ರೇಷ್ಮೆ ಗೂಡುಗಳನ್ನ ತೆಗೆಯುತ್ತಿದ್ದಾರೆ.‌ ಆದರೆ ಸರಿಯಾದ ರೇಷ್ಮೆ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ರೈತರು ದೂರದ ರಾಮನಗರಕ್ಕೆ ಹೋಗುವ ಪರಸ್ಥಿತಿ ಬಂದಿದೆ. ಅಲ್ಲದೇ ಈ‌ ಮಾರುಕಟ್ಟೆಗೆ ಒಬ್ಬನೇ ಒಬ್ಬ ವ್ಯಾಪಸ್ಥರಿದ್ದು, ಕಡಿಮೆ ದರಕ್ಕೆ ಖರೀದಿ ‌ಮಾಡಿಕೊಳ್ಳುತ್ತಿದ್ದಾರೆ.‌

ರಾಮನಗರದಲ್ಲಿ ಹೆಚ್ಚು ದರ ಸಿಗುತ್ತದೆ. ಸರ್ಕಾರದ ಆನಲೈನ್ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು. ಜಿಲ್ಲೆಯಲ್ಲಿ ಸಹ ಎರಡು ರೇಷ್ಮೆ ನೂಲು ತೆಗೆಯುವ ಕಾರ್ಖಾನೆ ಪ್ರಾರಂಭ ಆಗುತ್ತಿವೆ. ಮುಂದಿನ ದಿನಗಳಲ್ಲಿ ಉತ್ತಮ‌ ಮಾರುಕಟ್ಟೆ ಪ್ರಾರಂಭವಾಗಲಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಮಾಲತೇಶ ಪಾಟೀಲ ಹೇಳಿದ್ದಾರೆ.

ಇದನ್ನೂ ಓದಿ: ರೇಷ್ಮೆ ನಾಡು ಕೋಲಾದಲ್ಲಿ ರೇಷ್ಮೆ ಬೆಳೆಗೆ ಸಂಕಷ್ಟ: ದಿನದಿಂದ ದಿನಕ್ಕೆ ಕುಸಿಯುತ್ತಿದೆ ಬೆಳೆಗಾರರ ಸಂಖ್ಯೆ

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ.‌ ಸರ್ಕಾರಿ ‌ಮಾರುಕಟ್ಟೆ ಇದ್ದರು ಇಲ್ಲದಂತಾಗಿದೆ.‌ ಅಧಿಕಾರಿಗಳ ನಿರ್ಲಕ್ಷ್ಯದಿಂದ ಖರೀದಿದಾರರು ಖರೀದಿ ಮಾಡಲು ಬರುತ್ತಿಲ್ಲ.  ಮುಂದಿನ‌ ದಿನಗಳಲ್ಲಿ ಸರ್ಕಾರ ಆನಲೈನ್ ಖರೀದಿ ಕೇಂದ್ರ ಓಪನ್ ಮಾಡುವ ಕೆಲಸ ಮಾಡಬೇಕಿದೆ ಎಂಬುವುದು ರೈತರ ಆಗ್ರಹವಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:51 pm, Fri, 28 February 25