AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಜನೆ ಆರಂಭವಾಗಿ ಒಂದು ವರ್ಷವೂ ಕಳೆದಿಲ್ಲ, ಆಗಲೇ ಗ್ಯಾರೇಜ್ ಸೇರಿದ ಲಕ್ಷಾಂತರ ರೂಪಾಯಿ ವೆಚ್ಚದ ಆಂಬ್ಯುಲೆನ್ಸ್

ಸರ್ಕಾರ ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿ, ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತೆ. ಆದ್ರೆ, ಅದರ ಲಾಭ ಜನಸಾಮಾನ್ಯರಿಗೆ ತಲುಪಿಸೊಕೆ ಆಗುತ್ತಿಲ್ಲ. ಜನರ ತೆರಿಗೆ ಹಣ ಸುಖಾ ಸುಮ್ಮನೆ ಪೋಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ, ಈ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಪಶು ಅಂಬ್ಯುಲೆನ್ಸ್ ಯೋಜನೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ.

ಯೋಜನೆ ಆರಂಭವಾಗಿ ಒಂದು ವರ್ಷವೂ ಕಳೆದಿಲ್ಲ, ಆಗಲೇ ಗ್ಯಾರೇಜ್ ಸೇರಿದ ಲಕ್ಷಾಂತರ ರೂಪಾಯಿ ವೆಚ್ಚದ ಆಂಬ್ಯುಲೆನ್ಸ್
ಹಾವೇರಿ
ಸೂರಜ್​, ಮಹಾವೀರ್​ ಉತ್ತುರೆ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Jul 08, 2023 | 12:14 PM

Share

ಹಾವೇರಿ: ಹವಾಮಾನ ವೈಪರಿತ್ಯದಿಂದ ನಷ್ಟ ಅನುಭವಿಸಿದ್ರು, ಸ್ವಾವಲಂಬಿಯಾಗಿ ತನ್ನ ಜೀವನ ಸಾಗಿಸುತ್ತಿರುವ ರೈತನಿಗೆ ಬೆನ್ನೆಲುಬಾಗಿರುವುದು ದನ ಕರುಗಳು. ಅವುಗಳಿಗೆ ಇದ್ದಲ್ಲಿಯೇ ಉತ್ತಮ ಗುಣ ಮಟ್ಟದ ಉಚಿತ ಚಿಕಿತ್ಸೆಯನ್ನು ನೀಡುವ ಸದುದ್ದೇಶದಿಂದ 2022 ರ ಜುಲೈ ನಲ್ಲಿ ಬಸವರಾಜ್ ಬೊಮ್ಮಾಯಿ(Basavaraj Bommai)ಯವರ ಸರ್ಕಾರ, ಪಶು ಅಂಬ್ಯುಲೆನ್ಸ್ ಯೋಜನೆ(Pashu Sanjeevini Ambulance)ಯನ್ನು ಜಾರಿಗೆ ತರಲಾಗಿತ್ತು. ಆದ್ರೆ, ಇದೀಗ ಪಶು ಆಂಬ್ಯುಲೆನ್ಸ್​ಗಳನ್ನು ಹುಡುಕುವ ಪರಿಸ್ಥಿತಿ ಇದೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು 9 ಪಶು ಆಂಬ್ಯಲೆನ್ಸ್​​ಗಳಿದ್ದು, ಇಂದು ಒಂದೇ ಒಂದು ಅಂಬ್ಯಲೆನ್ಸ್ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನು ಈ ಅಂಬ್ಯಲೆನ್ಸ್​ಗಳು ಕೇವಲ ನಾಲ್ಕೈದು ತಿಂಗಳಿಗೆ ಮಾತ್ರ ಕಾರ್ಯ ನಿರ್ವಹಿಸಿವೆ.

ಇನ್ನು ಈ ಕುರಿತು ಹಾವೇರಿ ಪಶು ಇಲಾಖೆ ಎಡಿ ಕಿರಣ ಸಂತಿಯವರು ಮಾತನಾಡಿ ‘ಪಶು ಅಂಬ್ಯಲೆನ್ಸ್ ಯೋಜನೆಯನ್ನು ಕಾರ್ಯ ನಿರ್ವಹಿಸಲು ಖಾಸಗಿ ಕಂಪನಿಗೆ ಟೆಂಡರ್ ಕೊಡಲಾಗಿದ್ದು, ಇದುವರೆಗೂ ಆ ಕಂಪನಿ ಕಾರ್ಯನಿರ್ವಹಿಸದೆ ಇರುವುದರಿಂದ ಈ ಯೋಜನೆಯ ಲಾಭ ರೈತರಿಗೆ ಸಿಗುತ್ತಿಲ್ಲ ಎಂದು ಹೇಳಿದರು. ಸರ್ಕಾರ ಯಾವುದೆ ಕಾರ್ಯಕ್ರಮ ಜಾರಿಗೆ ತರುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡಿದ್ರೆ, ಇಂದು ಈ ಸಮಸ್ಯೆ ಆಗುತ್ತಿರಲಿಲ್ಲ.

ಇದನ್ನೂ ಓದಿ:‘ಹಾವೇರಿಯಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ: ಅಂಬ್ಯುಲೆನ್ಸ್ ಬಂದಿದ್ದು ಬಿಟ್ಟರೆ ರೋಗಗ್ರಸ್ತ ಜಾನುವಾರುಗಳಿಗೆ ಚಿಕಿತ್ಸೆ ನೀಡಿಲ್ಲ

ಸರ್ಕಾರ ಪ್ರಚಾರಕ್ಕೆಂದು ಕೊಟ್ಯಾಂತರ ರೂಪಾಯಿ ವೆಚ್ಚದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದ್ರೆ, ಯೋಜನೆಯ ಲಾಭ ಜನರಿಗೆ ಯಾವ ರೀತಿ ತಲುಪಿಸಬೇಕು, ಸಮರ್ಪಕ ಸಿಬ್ಬಂಧಿ ಇದ್ದಾರಾ? ಇಲ್ಲವ, ಎಂಬುವುದರ ಕನಿಷ್ಟ ಯೋಚನೆಯನ್ನು ಮಾಡದೆ, ರೈತರ ಹೆಸರಿನಲ್ಲಿ ಜಾರಿಗೆ ತರುವ ಯೋಜನೆಗಳನ್ನು ಮಾಡುವುದಾದ್ರೂ ಯಾಕೆ ಎಂದು ರೈತರು ಪ್ರಶ್ನಿಸಿದ್ದಾರೆ. ಈ ಸಮಸ್ಯೆ ಕೇವಲ ಹಾವೇರಿ ಜಿಲ್ಲೆಯದ್ದಷ್ಟೆ ಅಲ್ಲದೆ ಇಡಿ ರಾಜ್ಯದಲ್ಲೂ ಇದೆ ಸಮಸ್ಯೆ ಇದೆ. ಆದಷ್ಟು ಬೇಗ ಹೊಸ ಸಂಪುಟ ರಚನೆ ಮಾಡಿ, ಬಜೆಟ್ ಮಂಡನೆ ಮಾಡಿರುವ ಸರ್ಕಾರ ಇನ್ನಾದ್ರೂ, ಈ ಪಶು ಅಂಬ್ಯುಲೆನ್ಸ್ ಯೋಜನೆಯನ್ನು ಸಮರ್ಪವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತಾ ಅಥವಾ ಈ ಕಾರ್ಯಕ್ರಮವನ್ನು ಕೈ ಬಿಡುತ್ತಾ ಕಾದು ನೋಡಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ