‘ನನ್ನನ್ನು ನೋಡಿ ಡಿಕೆಶಿಗೆ ಟೆನ್ಷನ್ ಆಗಿದೆ.. ಮೊದಲು ಮಾತ್ರೆ ತಗೊಳ್ಳೋಕೆ ಹೇಳಿ’
ಬೆಂಗಳೂರು: ನನ್ನ ಮಾತುಗಳನ್ನ ಕೇಳಿದ್ರೆ ಟೆನ್ಷನ್ ಆಗಿದೆ ಅಂದ್ಕೊಳ್ತಿರಾ? ನಿಜವಾಗಿಯೂ ನನಗೆ ಯಾವುದೇ ರೀತಿಯ ಟೆನ್ಷನ್ ಇಲ್ಲ. ನನ್ನನ್ನು ನೋಡಿ ಡಿ.ಕೆ.ಶಿವಕುಮಾರ್ಗೆ ಟೆನ್ಷನ್ ಆಗಿದೆ ಎಂದು ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿದ್ದಾರೆ. ಡಿಕೆಶಿ ಆ ಟೆನ್ಷನ್‌ಗೆ ಮೊದಲು ಮಾತ್ರೆ ತೆಗೆದುಕೊಳ್ಳಲಿ ಎಂದು ಸಹ ಲೇವಡಿ ಮಾಡಿದ್ದಾರೆ. ಶಿವಕುಮಾರ್ಗೆ ಚುನಾವಣೆ ಅಲ್ಲ ಹಲವಾರು ಟೆನ್ಷನ್ಗಳು ಇವೆ. ನಮ್ಮ ಕಾರ್ಯಕರ್ತರನ್ನ ಸೆಳೆದ ಮಾತ್ರಕ್ಕೆ ಅವರು ಗೆಲ್ಲೋದಿಲ್ಲ. ಕಾರ್ಯಕರ್ತರನ್ನ ಸೆಳೆದ ಮಾತ್ರಕ್ಕೆ ಚುನಾವಣೆ ಗೆಲ್ಲಲ್ಲ. ಅವರಿಗೆ ನಮ್ಮ ಪಕ್ಷದ ಬಗ್ಗೆ […]

ಬೆಂಗಳೂರು: ನನ್ನ ಮಾತುಗಳನ್ನ ಕೇಳಿದ್ರೆ ಟೆನ್ಷನ್ ಆಗಿದೆ ಅಂದ್ಕೊಳ್ತಿರಾ? ನಿಜವಾಗಿಯೂ ನನಗೆ ಯಾವುದೇ ರೀತಿಯ ಟೆನ್ಷನ್ ಇಲ್ಲ. ನನ್ನನ್ನು ನೋಡಿ ಡಿ.ಕೆ.ಶಿವಕುಮಾರ್ಗೆ ಟೆನ್ಷನ್ ಆಗಿದೆ ಎಂದು ಮಾಜಿ ಸಿಎಂ H.D. ಕುಮಾರಸ್ವಾಮಿ ಹೇಳಿದ್ದಾರೆ. ಡಿಕೆಶಿ ಆ ಟೆನ್ಷನ್‌ಗೆ ಮೊದಲು ಮಾತ್ರೆ ತೆಗೆದುಕೊಳ್ಳಲಿ ಎಂದು ಸಹ ಲೇವಡಿ ಮಾಡಿದ್ದಾರೆ.
ಶಿವಕುಮಾರ್ಗೆ ಚುನಾವಣೆ ಅಲ್ಲ ಹಲವಾರು ಟೆನ್ಷನ್ಗಳು ಇವೆ. ನಮ್ಮ ಕಾರ್ಯಕರ್ತರನ್ನ ಸೆಳೆದ ಮಾತ್ರಕ್ಕೆ ಅವರು ಗೆಲ್ಲೋದಿಲ್ಲ. ಕಾರ್ಯಕರ್ತರನ್ನ ಸೆಳೆದ ಮಾತ್ರಕ್ಕೆ ಚುನಾವಣೆ ಗೆಲ್ಲಲ್ಲ. ಅವರಿಗೆ ನಮ್ಮ ಪಕ್ಷದ ಬಗ್ಗೆ ಹೆಚ್ಚು ಟೆನ್ಷನ್ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
‘ನಮ್ಮ ಕುಟುಂಬ ರಾಜ್ಯಕ್ಕೆ ಕೊಡುಗೆ ಕೊಟ್ಟಿಲ್ವಾ?’ ನಾವು ಕುಟುಂಬ ರಾಜಕಾರಣ ಮಾಡ್ತೇವೆ ಎಂದು ಹೇಳ್ತಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ, ಜಾರಕಿಹೊಳಿ ಮತ್ತು ಅವರ ಸಹೋದರರು, ಡಿಕೆ ಬ್ರದರ್ಸ್ ಎಲ್ಲರೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಮ್ಮ ಕುಟುಂಬದ ಮೇಲೆ ಮಾತ್ರ ಆರೋಪಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಯಾಕೆ ನಮ್ಮ ಕುಟುಂಬ ರಾಜ್ಯಕ್ಕೆ ಕೊಡುಗೆ ಕೊಟ್ಟಿಲ್ವಾ? ಪ್ರಧಾನಿಯಾಗಿ ದೇವೇಗೌಡರು, ಮುಖ್ಯಮಂತ್ರಿಯಾಗಿ ನಾನು. ಮಂತ್ರಿಯಾಗಿ ಹೆಚ್.ಡಿ.ರೇವಣ್ಣ ಕೊಡುಗೆ ಕೊಟ್ಟಿಲ್ವಾ? ನಮ್ಮ ಕುಟುಂಬದ ಮೇಲೆ ಆರೋಪ ಮಾಡುವುದನ್ನು ಬಿಡಿ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.



