ಸುಮಲತಾ ಬಿಜೆಪಿ ಸೇರ್ಪಡೆ ನಿರ್ಧಾರ ನನಗೂ ಬೆಂಬಲ ಕೊಟ್ಟ ಹಾಗೆ ಎಂದ ಕುಮಾರಸ್ವಾಮಿ
ಇಂದು ಮಂಡ್ಯದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಬೆಂಬಲಿಗರ ಎದುರು ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಅಂತಾ ಘೋಷಣೆ ಮಾಡಿದರು. ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಎಲ್ಲಿಯೂ ಹೇಳಿಲ್ಲ. ಆದರೆ ಇತ್ತ ಕುಮಾರಸ್ವಾಮಿ ಮಾತ್ರ ಸುಮಲತಾ ಬಿಜೆಪಿ ಸೇರ್ಪಡೆ ನಿರ್ಧಾರ ನನಗೂ ಬೆಂಬಲ ಕೊಟ್ಟ ಹಾಗೆ ಎಂದು ಹೇಳಿದ್ದಾರೆ.

ಮಂಡ್ಯ, ಮಾರ್ಚ್ 03: ಬಿಜೆಪಿಗೆ ನನ್ನ ಬೆಂಬಲ ಎಂದು ಘೋಷಿಸುವ ಮೂಲಕ ಮೂರು ತಿಂಗಳ ಬಳಿಕ ಎಲ್ಲಾ ಗೊಂದಲಗಳಿಗೆ ಸಂಸದೆ ಸುಮಲತಾ ತೆರೆ ಎಳೆದಿದ್ದಾರೆ. ಈ ಹಿಂದೆ 2 ಸಾರಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿದ್ದ ಸುಮಲತಾ ಅಂಬರೀಶ್ (Sumalatha Amabareesh) ನಿರ್ಧಾರ ಪ್ರಕಟಿಸಿರಲಿಲ್ಲ. ಬೆಂಬಲಿಗರ ಸಭೆಯಲ್ಲೂ ತಮ್ಮ ನಿರ್ಧಾರ ಹೇಳಲಿಲ್ಲ. ಬಳಿಕ ವಿಜಯೇಂದ್ರ ಮತ್ತು ಹೆಚ್ಡಿ ಕುಮಾರಸ್ವಾಮಿ ಭೇಟಿ ವೇಳೆಯೂ ತಮ್ಮ ನಿಲುವು ಪ್ರಕಟಿಸಲಿಲ್ಲ. ಆದರೆ ಇಂದು ಮಂಡ್ಯದಲ್ಲಿ ತಮ್ಮ ನಿರ್ಧಾರ ಘೋಷಿಸಿದ್ದಾರೆ. ಆದರೆ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿಗೆ ಬೆಂಬಲ ನೀಡುವುದಾಗಿ ಹೇಳಿಲ್ಲ. ಆದರೆ ಇತ್ತ ಕುಮಾರಸ್ವಾಮಿ ಮಾತ್ರ ಸುಮಲತಾ ಬಿಜೆಪಿ ಸೇರ್ಪಡೆ ನಿರ್ಧಾರ ನನಗೂ ಬೆಂಬಲ ಕೊಟ್ಟ ಹಾಗೆ ಎಂದು ಹೇಳಿದ್ದಾರೆ.
ಸುಮಲತಾ ನಿರ್ಧಾರ ಸ್ವಾಗತಾರ್ಹ: ಕುಮಾರಸ್ವಾಮಿ
ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿದ ಸುಮಲತಾರ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದ್ದರಿಂದ ನನಗೆ ಬೆಂಬಲ ಕೊಟ್ಟಂತೆ. ಇಂದು ತೀರ್ಮಾನ ಮಾಡಿದ್ದಾರೆ, ಮುಂದೆ ಪ್ರಚಾರಕ್ಕೂ ಕರೆಯುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಗೆ ಕಾರಣಗಳೇನು? ಇಲ್ಲಿವೆ ನೋಡಿ ಕೆಲ ಅಂಶಗಳು
ಬಿಜೆಪಿ ಜತೆ ಸುಮಲತಾ ಅಂಬರೀಶ್ಗೆ ಮೊದಲಿನಿಂದ ಒಳ್ಳೆಯ ಬಾಂಧವ್ಯವಿದೆ. ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಈ ನಿರ್ಧಾರ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ನಿರ್ಧಾರ ಸ್ವಾಗತಾರ್ಹ. ಈ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸಹಕಾರ ಕೇಳಿದ್ದೇನೆ ಎಂದರು.
ಮಂಡ್ಯದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಬೆಂಬಲಿಗರ ಎದುರು ಮಾತನಾಡಿ ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ನೆಲದಲ್ಲೇ ನಿಂತು ನಾನು ಎಂಪಿ ಸೀಟ್ ಬಿಟ್ಟು ಕೊಡ್ತಿದ್ದೇನೆ. ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಅಂತಾ ಘೋಷಣೆ ಮಾಡಿದರು.
ಇದನ್ನೂ ಓದಿ: Sumalatha Ambareesh: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ, ಬಿಜೆಪಿಗೆ ಸೇರ್ಪಡೆ: ಸುಮಲತಾ
ಬಿಜೆಪಿಯವರು ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಹಾಗೂ ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನನಗೆ ಆಫರ್ ನೀಡಿದ್ದರು. ನಾನು ಮಂಡ್ಯ ಬಿಟ್ಟು ಎಲ್ಲೂ ನಿಲ್ಲಲ್ಲ ಅಂತಾ ಹೇಳಿದ್ದೆ. ಗೆದ್ರೂ.. ಸೋತ್ರೂ ಅದು ಮಂಡ್ಯದಲ್ಲೇ. ಮಂಡ್ಯ ಬಿಟ್ಟು ಎಲ್ಲೂ ಹೋಗೋದಿಲ್ಲ ಅಂತಾ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ನನ್ನ ಮನೆಗೆ ಬಂದಿದ್ದು ಸೌಜನ್ಯದ ಭೇಟಿ ಅಷ್ಟೇ. ಚುನಾವಣಾ ಪ್ರಚಾರದ ಬಗ್ಗೆ ಬಿಜೆಪಿ ಸೇರ್ಪಡೆ ಬಳಿಕ ಹೇಳುತ್ತೇನೆ. ಆ ಮೂಲಕ ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರದ ಬಗ್ಗೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



