ಬಜೆಟ್‌ನಲ್ಲಿ ಹೆಸರು ಹೇಳದೆ ಇದ್ರೂ ಹಣ ಬರುತ್ತೆ: ರಾಜ್ಯಕ್ಕೆ ಏನಿಲ್ಲ ಆರೋಪಕ್ಕೆ ಎಚ್ಡಿಕೆ ಸಮರ್ಥನೆ
ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ತಮ್ಮ ಏಳನೇ ಬಜೆಟ್ ಮಂಡಿಸಿದರು. ಒಟ್ಟು 48.21 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಆಂಧ್ರ ಪ್ರದೇಶ ಹಾಗೂ ಬಿಹಾರ ರಾಜ್ಯಕ್ಕೆ ಬಂಪರ್ ಕೊಡುಗಿಗಳನ್ನು ಘೋಷಣೆ ಮಾಡಲಾಗಿದೆ. ಇದು ಇತರೆ ರಾಜ್ಯಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನು ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ/ಬೆಂಗಳೂರು, (ಜುಲೈ 23): 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆಂಧ್ರ ಪ್ರದೇಶ, ಬಿಹಾರ್ಗೆ ಮಾತ್ರ ಈ ಬಜೆಟ್ ಸೀಮಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಅಸಮಾದಾನ ಹೊರಹಾಕಿದ್ದಾರೆ. ಇನ್ನು ಅತ್ತ ನವದೆಹಲಿಯಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಮಾತನಾಡಿದ್ದು, ಆಂಧ್ರ, ಬಿಹಾರಕ್ಕೆ ಹೆಚ್ಚು ನೆರವು ಕೊಟ್ಟಿದ್ದಾರೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಹೆಚ್ಚು ಅಭಿವೃದ್ಧಿಗೆ ಒತ್ತು ನೀಡುವುದಕ್ಕೆ ಕಾರಣವೇನು? ರಾಜ್ಯ ಇಬ್ಬಾಗವಾದಗ ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಘೋಷಣೆ ಮಾಡಿದ್ದೇ ಕಾಂಗ್ರೆಸ್ ಆದರೆ ಜಾರಿಗೆ ತಂದಿರಲಿಲ್ಲ. ಈಗ ಪ್ರಧಾನಿ ಮೋದಿಯವರು ಜಾರಿಗೆ ತಂದಿದ್ದಾರೆ. ನಮ್ಮ ರಾಜ್ಯದ ಯೋಜನೆಗಳು ಯಾವುದು ಇಲ್ಲ ಎನ್ನುವ ಆರೋಪವಿದೆ. ಈ ರೀತಿಯ ಟೀಕೆ ಮಾಡುವುದು ಸಹಜ. ಬಜೆಟ್ ಮಂಡನೆ ವೇಳೆ ಹೆಸರು ಹೇಳದೆ ಇದ್ದರೂ ಸಹ ರಾಜ್ಯಗಳಿಗೆ ಹಣ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಅಭಿವೃದ್ಧಿಗೆ 2.65 ಲಕ್ಷ ಕೋಟಿ ಹಣ ಹಂಚಿಕೆ ಮಾಡಲಾಗಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಬಜೆಟ್ ಪೂರಕವಾಗಿದೆ. ಆಂಧ್ರ,ಬಿಹಾರಕ್ಕೆ ಹೆಚ್ಚು ನೆರವು ಕೊಟ್ಟಿದ್ದಾರೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಹೆಚ್ಚು ಅಭಿವೃದ್ಧಿಗೆ ಒತ್ತು ನೀಡುವುದಕ್ಕೆ ಕಾರಣವೇನು.? ರಾಜ್ಯ ಇಬ್ಬಾಗವಾದಗ ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಘೋಷಣೆ ಮಾಡಿದ್ದೇ ಕಾಂಗ್ರೆಸ್ ಆದರೆ ಜಾರಿಗೆ ತಂದಿರಲಿಲ್ಲ. ಈಗ ಪ್ರಧಾನಿ ಮೋದಿಯವ್ರು ಜಾರಿಗೆ ತಂದಿದ್ದಾರೆ. ನಮ್ಮ ರಾಜ್ಯದ ಯೋಜನೆಗಳು. ಯಾವುದು ಇಲ್ಲ ಎನ್ನುವ ಆರೋಪವಿದೆ. ಈ ರೀತಿಯ ಟೀಕೆ ಮಾಡುವುದು ಸಹಜ. ಬಜೆಟ್ ಮಂಡನೆ ವೇಳೆ ಹೆಸರು ಹೇಳದೆ ಇದ್ದರೂ ರಾಜ್ಯಗಳಿಗೆ ಹಣ ಬಿಡುಗಡೆಯಾಗಲಿದೆ. ಗ್ರಾಮೀಣ ಅಭಿವೃದ್ಧಿಗೆ ನೀಡುವ ಹಣದಲ್ಲಿ ರಾಜ್ಯಕ್ಕೂ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: 5 ಜನ ಕೇಂದ್ರ ಮಂತ್ರಿಗಳಿದ್ದರೂ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ: ಸಿದ್ದರಾಮಯ್ಯ ಆಕ್ರೋಶ
ಕನ್ನಡನಾಡಿನ ಜನತೆಗೆ ನಾನು ಮನವಿ ಮಾಡುತ್ತೇನೆ. ಕಾಂಗ್ರೆಸ್ ನವರು ಮೊದಲು ಟೀಕೆ ಮಾಡುವುದನ್ನು ನಿಲ್ಲಿಸಬೇಕು. ನಾವು ಕರ್ನಾಟಕಕ್ಕೆ ಹೋದಲು ಯಾಕೆ ಬಂದ್ರಿ ಅಂತಾರೆ. ಈಗ ರಾಜ್ಯಕ್ಕೆ ಏನು ತಂದರು ಎಂದು ಕೇಳುತ್ತಾರೆ. ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯಕ್ಕೆ ಯೋಜನೆಗಳನ್ನು ತರಲು ನಾನು ಶ್ರಮಿಸುತ್ತೇನೆ. ಒಂದು ತಿಂಗಳಲ್ಲೇ ಎಲ್ಲವನ್ನು ತಂದು ಇಳಿಸಲು ಸಾಧ್ಯವಿಲ್ಲ. ಯೋಜನೆಗಳನ್ನು ತರುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯಗಳಿಗೆ ಅನುದಾನ ಹಂಚಿಕೆಗೆ ಮಾರ್ಗಸೂಚಿ ಇರುತ್ತವೆ. ಸಿದ್ದರಾಮಯ್ಯನವರು ಎಲ್ಲಾ ಜಿಲ್ಲೆಗಳಿಗೆ ಸರಿಸಮನಾಗಿ ಹಣ ಹಂಚಿಕೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕೆಲವು ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಕೊಡುವುದು ನಡೆದುಕೊಂಡು ಬಂದಿದೆ. ಕಲ್ಯಾಣ ಕರ್ನಾಟಕಕ್ಕೆ ಯಾಕೆ ವಿಶೇಷ ಪ್ಯಾಕೇಜ್ ಕೊಡುವುದಕ್ಕೆ ಬಂತು. ಈಶಾನ್ಯ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಕೊಡುತ್ತಾರೆ. ದೇವೇಗೌಡರು ಈಶಾನ್ಯ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ನೀಡಿದ್ದರು. ಹಾಸನಕ್ಕೆ ಐಐಟಿ ಬಗ್ಗೆ ಬೇಡಿಕೆ ಇದೆ/ ರಾಯಚೂರಿನ ಜನರು ಏಮ್ಸ್ ಕೇಳುತ್ತಿದ್ದಾರೆ. ಬಜೆಟ್ ನಲ್ಲಿ ಘೋಷಣೆ ಮಾಡದೆ ಇದ್ದರೂ ಕೊಡಬಾರದು ಎಂದೇನಿಲ್ಲ. ಕುರ್ಚಿ ಉಳಿಸಿಕೊಳ್ಲೂವುದು ಎಷ್ಟು ಮುಖ್ಯವೋ ಹಿಂದುಳಿದ ರಾಜ್ಯಗಳಿಗೆ ಹಣಕಾಸು ಸಹಾಯ ಮಾಡುವುದು ಅಷ್ಟೇ ಮುಖ್ಯ ಎಂದರು.
ವಿಕಸಿತ ಭಾರತ ಪ್ರಧಾನಿ ಮೋದಿ ಚಿಂತನೆಯಾಗಿದೆ. 2047ಕ್ಕೆ ಅಮೃತಕಾಲದ ದೂರದೃಷ್ಟಿಯ ಬಜೆಟ್ ಇದಾಗಿದೆ. ಕೌಶಲ್ಯ ತರಬೇತಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದಾರೆ. 4.10ಕೋಟಿ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಿದ್ದಾರೆ. MSMS ಗಳಿಗೆ ಆರ್ಥಿಕ ಶಕ್ತಿ ತುಂಬುವುದು ಮೋದಿ ಕಲ್ಪನೆ. ನಗರ ಮತ್ತು ಗ್ರಾಮಗಳಲ್ಲಿ ಮನೆ ನಿರ್ಮಾಣಕ್ಕೆ ಹೆಚ್ಚು ಹಣ ನೀಡಿದ್ದಾರೆ. ಕೃಷಿ ವಲಯಕ್ಕೆ ಈ ಬಾರಿ ಹೆಚ್ಚು ಆದ್ಯತೆ ನೀಡಿದ್ದಾರೆ. ಸಂಶೋಧನಾ ಕೇಂದ್ರಗಳನ್ನು ತೆರೆಯುವ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Tue, 23 July 24