ಹೆಚ್​ಡಿ ರೇವಣ್ಣ ಬಂಧನ: ಬೆಳಿಗ್ಗೆಯಿಂದ ಇದುವರೆಗೂ ಏನೆಲ್ಲಾ ನಡೀತು, ಇಲ್ಲಿದೆ ಮಾಹಿತಿ

|

Updated on: May 04, 2024 | 9:27 PM

ಸಂತ್ರಸ್ಥೆ ಮಹಿಳೆಯ ಅಪಹರಣದ ಪ್ರಕರಣವೊಂದರಲ್ಲಿ (woman kidnapping case) ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಇಂದು(ಮೇ.04) 8 ಗಂಟೆ ಸುಮಾರಿಗೆ ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಬಂಧಿಸಿ ವಿಚಾರಣೆಗಾಗಿ ಕಚೇರಿಗೆ ಕರೆದೊಯ್ದಿದ್ದಾರೆ. ಹಾಗಾದರೆ ಇಂದು ರೇವಣ್ಣ ಬಂಧನಕ್ಕೂ ಮೊದಲು ಏನೇನಾಯ್ತು ಎಂಬುದರ ವಿವರ ಇಲ್ಲಿದೆ.

ಹೆಚ್​ಡಿ ರೇವಣ್ಣ ಬಂಧನ: ಬೆಳಿಗ್ಗೆಯಿಂದ ಇದುವರೆಗೂ ಏನೆಲ್ಲಾ ನಡೀತು, ಇಲ್ಲಿದೆ ಮಾಹಿತಿ
ಹೆಚ್​ಡಿ ರೇವಣ್ಣ
Follow us on

ಬೆಂಗಳೂರು, ಮೇ.04: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇದೇ ಕೇಸ್​ನ ಸಂತ್ರಸ್ಥೆ ಮಹಿಳೆಯ ಅಪಹರಣದ ಪ್ರಕರಣವೊಂದರಲ್ಲಿ (woman kidnapping case) ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಇಂದು(ಮೇ.04) 8 ಗಂಟೆ ಸುಮಾರಿಗೆ ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಬಂಧಿಸಿ ವಿಚಾರಣೆಗಾಗಿ ಕಚೇರಿಗೆ ಕರೆದೊಯ್ದಿದ್ದಾರೆ. ಹಾಗಾದರೆ ಇಂದು ರೇವಣ್ಣ ಬಂಧನಕ್ಕೂ ಮೊದಲು ಏನೇನಾಯ್ತು ಎಂಬುದರ ವಿವರ ಇಲ್ಲಿದೆ.

ಬೆಳಿಗ್ಗೆಯಿಂದ ಅಜ್ಞಾತ ಸ್ಥಳದಲ್ಲಿದ್ದ ರೇವಣ್ಣ

ಮಾಜಿ ಸಚಿವ ರೇವಣ್ಣ ಅವರು ಮಹಿಳೆಯ ಕಿಡ್ನಾಪ್ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ಕೋರ್ಟ್​ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇನ್ನು ಈ ಪ್ರಕರಣದ ಎರಡನೇ ಆರೋಪಿ ಆಗಿರುವ ರೇವಣ್ಣ ಸಂಬಂಧಿ ಸತೀಶ್ ಬಾಬು ಅವರನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ವಹಿಸಿದ್ದು, ನಿರೀಕ್ಷಣಾ ಅರ್ಜಿ ವಜಾ ಆದರೆ ಪ್ರಕರಣದ ಎ 1 ಆರೋಪಿ ಆಗಿರುವ ರೇವಣ್ಣಗೂ ಬಂಧನ ಭೀತಿ ಎದುರಾಗಿತ್ತು. ಈ ಹಿನ್ನಲೆ ರೇವಣ್ಣ ತೀರ್ಪು ಬರುವವರೆಗೂ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿದ್ದರು.

ಇದನ್ನೂ ಓದಿ:ಜೆಡಿಎಸ್​ ಶಾಸಕ ಹೆಚ್​ಡಿ ರೇವಣ್ಣ ಬಂಧನವಾಗಿದ್ದು ಯಾವ ಕೇಸ್​ನಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಳಿಗ್ಗೆ ಮನೆಗೆ ಈಶ್ಚರನ ಪ್ರಸಾದ ತಂದ ಅರ್ಚಕರು

ಇನ್ನು ಈ ಪ್ರಕರಣದಲ್ಲಿ ಜಾಮೀನು ದೊರೆಯಲು ಸರಿಯಾಗಿ ಬೆಳಿಗ್ಗೆ 10 ಗಂಟೆಯ ಸುಮಾರಿಗೆ  ದೇವೇಗೌಡರ ಹುಟ್ಟೂರಾದ ಹರದನಹಳ್ಳಿಯಲ್ಲಿರುವ ಮನೆ ದೇವರಾದ ಈಶ್ಚರನ ಪ್ರಸಾದ ತಂದ ಅರ್ಚಕರು, ಭವಾನಿ ರೇವಣ್ಣಗೆ ಕೊಟ್ಟಿದ್ದರು. ಇದರ ಜೊತೆಗೆ 10 ಗಂಟೆ ಬಳಿಕ ಎಸ್ ಐ ಟಿ ಟೀಂ ಆಗಮಿಸುವ ಸಾಧ್ಯತೆಯಿಂದ ಭದ್ರತೆ ಹಿನ್ನಲೆ ಬ್ಯಾರಿಕೇಡ್ ಅಳವಡಿಸಲಾಗಿತ್ತು.

ಮಧ್ಯಾಹ್ನ 1.52 ಕ್ಕೆ ಸಂತ್ರಸ್ತೆ ಸಮ್ಮುಖದಲ್ಲಿ ಎಸ್​ಐಟಿಯಿಂದ ಸ್ಥಳ ಮಹಜರು

ಸರಿಯಾಗಿ 1.52 ರ ಸುಮಾರಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಶಾಸಕ ಹೆಚ್​.ಡಿ.ರೇವಣ್ಣ ನಿವಾಸದಲ್ಲಿ ಎಸ್​ಐಟಿ ಯಿಂದ ಮಹಜರು ಮಾಡಲು ಆಗಮಿಸಿದ್ದರು. ಇಬ್ಬರು ಸಂತ್ರಸ್ತ ಮಹಿಳೆ ಮಾಹಿತಿಯಂತೆ ಬೆಡ್ ರೂಂ, ಸ್ಟೋರ್ ರೂಂ, ಅಡುಗೆ ಮನೆಯಲ್ಲಿ ಒಟ್ಟು ಎಂಟು ತನಿಖಾಧಿಕಾರಿಗಳಾದ ಓರ್ವ ಎಸಿಪಿ, ಇಬ್ಬರು ಮಹಿಳಾ ಇನ್ಸ್​ಪೆಕ್ಟರ್​, ಮಹಿಳಾ PSI,  ಇಬ್ಬರು ಮಹಿಳಾ ಪಿಸಿ, ಓರ್ವ ಹೆಚ್​ಸಿ, ಇಬ್ಬರು ಕಾನ್ಸ್​ಟೇಬಲ್​ ಸೇರಿ ಮಹಜರು ನಡೆಸಿ, ಲೈಂಗಿಕ ದೌರ್ಜನ್ಯ ನಡೆದ ಸ್ಥಳದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿದ್ದರು.

ಸುದ್ದಿ ತಿಳಿದು ರೇವಣ್ಣ ಮನೆ ಮುಂದೆ ಜಮಾಯಿಸಿದ್ದ ಅಭಿಮಾನಿಗಳು

ಇನ್ನು ಮಧ್ಯಾಹ್ನದ ವೇಳೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಯುತ್ತಿರುವ ವಿಷಯ ತಿಳಿದು ರೇವಣ್ಣ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸಿದ್ದರು. ಸತತ ಎರಡು ಗಂಟೆಯಿಂದಲೂ ಮನೆಯ ಮುಂದೆ ಹಾಕಿರುವ ಬ್ಯಾರಿಕೇಡ್ ಮುಂದೆ ನಿಂತಿದ್ದರು. ಜನರು ಸೇರುವುದು ಹೆಚ್ಚಾಗುತ್ತಲೆ ಪೊಲೀಸರು ಸ್ಥಳದಿಂದ ಎಲ್ಲರನ್ನೂ ಕಳುಹಿಸಿದ್ದರು. ಪೊಲೀಸರು

ಇದನ್ನೂ ಓದಿ:SIT Arrests HD Revanna: ನಿರೀಕ್ಷೆಯಂತೆ ಮಹಿಳೆ ಅಪಹರಣ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣರನ್ನು ಬಂಧಿಸಿದ ಎಸ್ಐಟಿ

ಸಾಯಂಕಾಲ 6 ಗಂಟೆ ಬಳಿಕ ನಿರೀಕ್ಷಣಾ ಜಾಮೀನು ನೀಡಲು ನಕಾರ

ಶಾಸಕ ಹೆಚ್‌.ಡಿ.ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಆದೇಶಿಸಿತ್ತು. ಇದಾದ ಬಳಿಕ ರೇವಣ್ಣಗೆ ಬಂಧನದ ಭೀತಿ ಎದುರಾಗಿದ್ದು, ಅಜ್ಞಾತ ಸ್ಥಳದಲ್ಲಿ ಇದ್ದರು.

ರೇವಣ್ಣಗಾಗಿ SIT ಅಧಿಕಾರಿಗಳಿಂದ ಹುಡುಕಾಟ

ಹೆಚ್​.ಡಿ ರೇವಣ್ಣ ಮದ್ಯಂತರ ನಿರೀಕ್ಷಣಾ ಜಾಮೀನು ನಕಾರ ಹಿನ್ನೆಲೆ ರೇವಣ್ಣಗಾಗಿ SIT ಅಧಿಕಾರಿಗಳು ಸಾಯಂಕಾಲ 6.30 ರ ಬಳಿಕ ಹುಡುಕಾಟ ನಡೆಸಿದ್ದರು. ಯಾವುದೇ ಕ್ಷಣದಲ್ಲಾದರೂ ಹೆಚ್​.ಡಿ ರೇವಣ್ಣ ಅರೆಸ್ಟ್ ಸಾದ್ಯತೆ ಇತ್ತು. ಒಂದು ವೇಳೆ ರೇವಣ್ಣ ಸಿಗದೆ ಹೋದರೆ ಹುಡುಕಾಟ ಮುಂದೂವರೆಯಲಿತ್ತು.

7.43 ರ ಸುಮಾರಿಗೆ ರೇವಣ್ಣ ಬಂಧನ

ನಿನ್ನೆಯಿಂದ ದೇವೇಗೌಡರ ಮನೆಯಲ್ಲಿ ಉಳಿದುಕೊಂಡಿದ್ದ ರೇವಣ್ಣ, ಕಳೆದ ಎರಡು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ತಂದೆ ಮನೆಯಲ್ಲಿ ಉಳಿದಿದ್ದರು. ಜೊತೆಗೆ ಕಿಡ್ನಾಫ್​ ಪ್ರಕರಣದಲ್ಲಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಇನ್ನು ದೇವೇಗೌಡರ ನಿವಾಸದಲ್ಲಿ ರೇವಣ್ಣ ಇದ್ದ ಮಾಹಿತಿಯನ್ನು ಮಧ್ಯಾಹ್ನವೇ ತಿಳಿದುಕೊಂಡಿದೆ ಎಸ್ಐಟಿ, ಕೋರ್ಟ್​ನ ಜಾಮೀನು ಅರ್ಜಿ ಆದೇಶಕ್ಕಾಗಿ ಕಾಯುತ್ತಿತ್ತು. ಯಾವಾಗ ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಅರ್ಜಿ ವಜಾ ಆಯಿತು. ಕೂಡಲೇ ರೇವಣ್ಣ ಬಂಧನಕ್ಕೆ ಮುಂದಾದ ಎಸ್ಐಟಿ, ಸಾಯಂಕಾಲ 7.43 ರ ಸುಮಾರಿಗೆ ಬಂಧಿಸಿದೆ.

ಇದನ್ನೂ ಓದಿ:HD Revanna Arrest: ಕೊನೆಗೂ ಹೆಚ್​ಡಿ ರೇವಣ್ಣ ಬಂಧನ; ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಅರೆಸ್ಟ್

ಸದ್ಯ ಎಸ್​ಐಟಿ ಕಚೇರಿಯಲ್ಲಿರುವ JDS ಶಾಸಕ ಹೆಚ್‌.ಡಿ.ರೇವಣ್ಣ

ಇನ್ನು JDS ಶಾಸಕ ಹೆಚ್‌.ಡಿ.ರೇವಣ್ಣ ಅವರನ್ನು ಬಂಧಿಸಿದ ಎಸ್​ಐಟಿ ಅಧಿಕಾರಿಗಳು 7.52 ರ ಸುಮಾರಿಗೆ ತಮ್ಮ ಕಚೇರಿಗೆ ಕರೆದೊಯ್ದಿದ್ದಾರೆ. ಇಂದು ರಾತ್ರಿ ರೇವಣ್ಣರನ್ನು ಸಿಐಡಿ ಕಚೇರಿಯಲ್ಲೇ ಉಳಿಸಿಕೊಂಡು, ನಾಳೆ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸುವ ಸಾಧ್ಯತೆಯಿದೆ. ಪ್ರಾಥಮಿಕವಾಗಿ ಮಹಿಳೆ ಕಿಡ್ನ್ಯಾಪ್ ಬಗ್ಗೆ ಮಾಹಿತಿ ಪಡೆಯುವ SIT, ಎಸ್​ಐಟಿ ಮುಖ್ಯಸ್ಥ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಚಾರಣೆ ನಡೆಸಲಿದೆ. ಸದ್ಯ ಎಸ್​ಐಟಿ ಅಧಿಕಾರಿಗಳ ವಶದಲ್ಲಿರುವ ಕಿಡ್ನ್ಯಾಪ್ ಆಗಿದ್ದ ಮಹಿಳೆ, ಮಹಿಳೆಯನ್ನು ಕರೆತಂದ ಬಳಿಕ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ. ಸದ್ಯ ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿರುವ ಎಸ್​ಐಟಿ ಅಧಿಕಾರಿಗಳು, ರೇವಣ್ಣ ಬಂಧನದ ಬಗ್ಗೆ ಈಗಾಗಲೇ SITಯ ಕೇಸ್ ಡೈರಿಯಲ್ಲಿ ಎಂಟ್ರಿ ಮಾಡಿದ್ದಾರೆ.

ಎಸ್ ಐ ಟಿ ಕಚೇರಿಗೆ ಆಗಮಿಸಿದ ಆಂಬುಲೆನ್ಸ್

ಸರಿಯಾಗಿ ರಾತ್ರಿ 8.25 ರ ಸುಮಾರಿಗೆ ಎಸ್ ಐ ಟಿ ಕಚೇರಿಗೆ ಆಂಬುಲೆನ್ಸ್ ಆಗಮಿಸಿದೆ. ರೇವಣ್ಣ ಬಂಧನ ಹಿನ್ನೆಲೆ ಎಸ್ಐಟಿಗೆ ಆಂಬುಲೆನ್ಸ್ ಕರೆಸಿಕೊಂಡ ಅಧಿಕಾರಿಗಳು, ಕೆಲವೇ ಹೊತ್ತಿನಲ್ಲಿ ರೇವಣ್ಣ ಮೆಡಿಕಲ್ ಟೆಸ್ಟ್ ಸಾಧ್ಯತೆಯಿದೆ. ಈಗಾಗಲೇ ಆರೋಗ್ಯ ಸಮಸ್ಯೆ ಇರೋದಾಗಿ ಹೇಳಿಕೊಂಡಿರುವ ರೇವಣ್ಣ, ಈ ಹಿನ್ನಲೆ ತುರ್ತು ಅಗತ್ಯಕ್ಕಾಗಿ ಆ್ಯಂಬುಲೆನ್ಸ್ ಕರೆಯಿಸಿಕೊಂಡಿದ್ದಾರೆ.

ರೇವಣ್ಣ ನಿವಾಸದಲ್ಲಿ ಸತತ ಆರು ಗಂಟೆ ಸುದೀರ್ಘ ಮಹಜರ್ ಪ್ರಕ್ರಿಯೆ ಅಂತ್ಯ

ಇತ್ತ ಹಾಸನ ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ಸತತ ಆರು ಗಂಟೆ ಸುದೀರ್ಘ ಮಹಜರ್ ಪ್ರಕ್ರಿಯೆ ಅಂತ್ಯವಾಗಿದೆ. ಇಬ್ಬರು ಸಂತ್ರಸ್ಥ ರ ಸಮ್ಮುಖದಲ್ಲಿ ಸ್ಥಳ ಮಹಜರ್ ಪೂರ್ಣವಾಗಿದ್ದು, ಇಲ್ಲಿಂದ ಕೆಲವೇ ಕ್ಷಣದಲ್ಲಿ ಹಾಸನದ ಸಂಸದರ ನಿವಾಸದತ್ತ ಎಸ್ ಐ ಟಿ ಟೀಂ ಹೊರಡುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ