Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್​ ಶಾಸಕ ಹೆಚ್​ಡಿ ರೇವಣ್ಣ ಬಂಧನವಾಗಿದ್ದು ಯಾವ ಕೇಸ್​ನಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

ಮನೆ ಕೆಲಸ ಮಾಡುತ್ತಿದ್ದ ಮಹಿಳೆ ರೇವಣ್ಣ ಹಾಗೂ ಪುತ್ರ ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ರೇವಣ್ಣಗೆ ಬಂಧನ ಭೀತಿ ಇರಲಿಲ್ಲ. ಆದರೆ ದೂರು ನೀಡಿದ್ದ ಮಹಿಳೆಯನ್ನ ರೇವಣ್ಣ ಕಿಡ್ನ್ಯಾಪ್‌ ಮಾಡಿಸಿದ್ದಾರೆ ಅಂತಾ ಮತ್ತೊಂದು ಕೇಸ್‌ ದಾಖಲಾಗಿತ್ತು. ಹೀಗಾಗಿ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣರನ್ನು ಬಂಧಿಸಲಾಗಿದೆ.

ಜೆಡಿಎಸ್​ ಶಾಸಕ ಹೆಚ್​ಡಿ ರೇವಣ್ಣ ಬಂಧನವಾಗಿದ್ದು ಯಾವ ಕೇಸ್​ನಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಜೆಡಿಎಸ್​ ಶಾಸಕ ಹೆಚ್​ಡಿ ರೇವಣ್ಣ ಬಂಧನವಾಗಿದ್ದು ಯಾವ ಕೇಸ್​ನಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
Follow us
ಗಂಗಾಧರ​ ಬ. ಸಾಬೋಜಿ
|

Updated on: May 04, 2024 | 9:06 PM

ಬೆಂಗಳೂರು, ಮೇ 04: ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಕಿಡ್ನ್ಯಾಪ್​​ ಆರೋಪದ ಸುಳಿಯಲ್ಲಿ ಸಿಲುಕಿದ್ದ ಮಾಜಿ ಸಚಿವ ಹೆಚ್​.ಡಿ.ರೇವಣ್ಣ (HD Revanna) ಇಂದು ಅರೆಸ್ಟ್​ ಆಗಿದ್ದಾರೆ. ನಿರೀಕ್ಷಣಾ ಜಾಮೀನು ನಿರಾಕರಣೆ ಆದ ಬೆನ್ನಲ್ಲೆ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪುತ್ರ ಎಸ್​ಐಟಿ ಖೆಡ್ಡಾಗೆ ಬಿದ್ದಿದ್ದಾರೆ. ಪ್ರಜ್ವಲ್​ ರೇವಣ್ಣ (Prajwal Revanna) ಪೆನ್​ಡ್ರೈವ್​ ಪ್ರಕರಣ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಇದರ ನಡುವೆ ರೇವಣ್ಣ ವಿರುದ್ಧ ಹೊಳೆನರಸೀಪುರ ಸ್ಟೇಷನ್​​ನಲ್ಲಿ ಲೈಂಗಿಕ ದೌರ್ಜನ್ಯ ಆರೋಪದ ಕೇಸ್​ ದಾಖಲಾಗಿತ್ತು. ಹಾಗೇ, ನಿನ್ನೆಯಷ್ಟೇ ಮೈಸೂರಿನ ಕೆ.ಆರ್​.ನಗರ ಸ್ಟೇಷನ್​​ನಲ್ಲಿ ಮಹಿಳೆಯೊಬ್ಬರ ಅಪಹರಣದ ಆರೋಪವೂ ರೇವಣ್ಣ ವಿರುದ್ಧ ಕೇಳಿ ಬಂದಿತ್ತು. ಇದೀಗ, ಇದೇ ಪ್ರಕರಣದಡಿ ಬಂಧಿಸಲಾಗಿದೆ.

ಹೆಚ್​ಡಿ ರೇವಣ್ಣ ಬಂಧನವಾಗಿದ್ದು ಯಾವ ಕೇಸ್​ನಲ್ಲಿ?

ಮನೆ ಕೆಲಸ ಮಾಡುತ್ತಿದ್ದ ಮಹಿಳೆ ರೇವಣ್ಣ ಹಾಗೂ ಪುತ್ರ ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ರೇವಣ್ಣಗೆ ಬಂಧನ ಭೀತಿ ಇರಲಿಲ್ಲ. ಆದರೆ ದೂರು ನೀಡಿದ್ದ ಮಹಿಳೆಯನ್ನ ರೇವಣ್ಣ ಕಿಡ್ನ್ಯಾಪ್‌ ಮಾಡಿಸಿದ್ದಾರೆ ಅಂತಾ ಮತ್ತೊಂದು ಕೇಸ್‌ ದಾಖಲಾಗಿತ್ತು. ಹೀಗಾಗಿ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮೊದಲು ಇದೇ ಕೇಸ್​ ವಿಚಾರವಾಗಿ ನಿರೀಕ್ಷಣಾ ಜಾಮೀನಿಗಾಗಿ ರೇವಣ್ಣ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಮೇ 6 ಕ್ಕೆ ವಿಚಾರಣೆ ಮುಂದೂಡಿದೆ. ಅಷ್ಟೇ ಅಲ್ಲ ಮಧ್ಯಂತರ ನಿರೀಕ್ಷಣಾ ಜಾಮೀನು ಕೊಡಲು ನಿರಾಕರಿಸಿದೆ.

ಇದನ್ನೂ ಓದಿ: HD Revanna Arrest: ಕೊನೆಗೂ ಹೆಚ್​ಡಿ ರೇವಣ್ಣ ಬಂಧನ; ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಅರೆಸ್ಟ್

ಪ್ರಕರಣ ಸಂಬಂಧ ಹೆಚ್‌ಡಿ ರೇವಣ್ಣ, ಹಾಗೂ ರೇವಣ್ಣ ಆಪ್ತ ಸತೀಶ್ ಬಾಬು ಮೇಲೆ ಮೈಸೂರಿನ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಆಗಿರುವ ಸಂತ್ರಸ್ತೆ ಪುತ್ರ ದೂರು ನೀಡಿದ್ದ. ಕೂಡಲೇ ಅಲಾರ್ಟ್ ಆದ ಪೊಲೀಸರು ಪ್ರಕರಣದ ಎ2 ಆರೋಪಿ ಸತೀಶ್ ಬಾಬುನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಬಳಿಕ ನ್ಯಾಯಾಧೀಶರ ಮುಂದೆ ಆರೋಪಿಯನ್ನ ಹಾಜರು ಪಡಿಸಿದ ಹಿನ್ನಲೆ ನ್ಯಾಯಾಧೀಶರು ಆರೋಪಿ ಸತೀಶ್ ಬಾಬುವನ್ನ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ತಡರಾತ್ರಿ ಕೆ.ಆರ್‌ ನಗರ ಠಾಣೆಗೆ ಹಾಜರಾದ ಸಂತ್ರಸ್ತೆ ಪುತ್ರ ಹೆಚ್.ಡಿ.ರೇವಣ್ಣ ಹಾಗೂ ರೇವಣ್ಣ ಆಪ್ತ ಸತೀಶ್ ಬಾಬು ನನ್ನ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ನೀಡಿದ್ದ. ಸಂತ್ರಸ್ತೆ ಹೆಚ್.ಡಿ.ರೇವಣ್ಣ ಮನೆಯಲ್ಲಿ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಏಪ್ರಿಲ್ 29 ರಾತ್ರಿ 9 ಗಂಟೆಗೆ ಸಂತ್ರಸ್ತೆ ಮನೆಗೆ ಬಂದ ಹೆಚ್.ಡಿ.ರೇವಣ್ಣ ಆಪ್ತ ಸತೀಶ್ ಬಾಬು ಸಂತ್ರಸ್ತೆಯನ್ನ ಒತ್ತಾಯ ಮಾಡಿ ಕರೆದೊಯ್ದಿದ್ದಾನೆ.

ಸತೀಶ್ ಹಿರೋಹೊಂಡ ಸ್ಪೈಂಡರ್ ಬೈಕ್​ನಲ್ಲಿ ಕರೆದೊಯ್ದರು‌. ನನ್ನ ತಾಯಿಯನ್ನ ಎಲ್ಲಿಗೆ ಕರೆದೊಯ್ದರು ಗೊತ್ತಿಲ್ಲ. ಮೇ. 1 ರಂದು ಗೆಳೆಯರ ಮೂಲಕ ಅಶ್ಲೀಲ ವಿಡಿಯೋ ಬಂತು. ನಿನ್ನ ಅಮ್ಮ ಕಾಲು ಕಟ್ಟಿದ್ದು, ಪ್ರಜ್ವಲ್ ಅತ್ಯಾಚಾರ ಮಾಡಿದ್ದಾರೆ ಎಂದು ಗೆಳೆಯರು ತಿಳಿಸಿದರು. ಈ ಸಂಬಂಧ ದೊಡ್ಡ ಕೇಸ್ ಆಗಿದೆ ಎಂದು ಗೆಳೆಯರೇ ಮಾಹಿತಿ ನೀಡಿದರು ಎಂದು ಉಲ್ಲೇಖಿಸಿದ್ದ ಸಂತ್ರಸ್ತೆ ಪುತ್ರ ನನ್ನ ತಾಯಿಯನ್ನ ಒತ್ತಾಯ ಪೂರ್ವಕವಾಗಿ ಕೂಡಿ ಹಾಕಿದ್ದಾರೆ ಎಂದು ಸಂತ್ರಸ್ತೆ ಪುತ್ರ ದೂರಿನಲ್ಲಿ ಅಳಲು ತೋಡಿಕೊಂಡಿದ್ದ.

ಇದನ್ನೂ ಓದಿ: ಹೆಚ್.ಡಿ.ರೇವಣ್ಣಗೆ ಬಂಧನ ಭೀತಿ: ಮಧ್ಯಂತರ ನಿರೀಕ್ಷಣಾ ಜಾಮೀನು ವಜಾ

ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಹೆಚ್.ಡಿ.ರೇವಣ್ಣ ಹಾಗೂ ಆಪ್ತ ಸತೀಶ್ ಬಾಬು ಮೇಲೆ ದಾಖಲಾಗಿದ್ದ ಕಿಡ್ನಾಪ್ ಕೇಸ್​​ನಲ್ಲಿ ಈಗಾಗಲೇ ಪ್ರಕರಣದ ಎರಡನೇ ಆರೋಪಿ ಸತೀಶ್ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ ಈ ಎರಡನೇ ಆರೋಪಿ ಸಿಕ್ರೂ ಸಂತ್ರಸ್ತೆ ಮಾತ್ರ ಪತ್ತೆಯಾಗಿಲ್ಲ. ನಾಪತ್ತೆಯಾಗಿರೋ ಸಂತ್ರಸ್ತೆ ಎಲ್ಲಿ ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ. ಸಂತ್ರಸ್ತೆ ಪೊಲೀಸರ ಮುಂದೆ ಬಂದ್ರೆ ರೇವಣ್ಣಗೆ ಕಂಟಕ ಎದುರಾಗುತ್ತೆ ಅನ್ನೋ ಕಾರಣಕ್ಕೆ ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ಕೆ.ಆರ್. ನಗರದ ಮನೆಯಿಂದಲೇ ಸಂತ್ರಸ್ತೆಯನ್ನ ಕಿಡ್ನಾಪ್ ಮಾಡಿ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎನ್ನಲಾಗಿದ್ದು ಮಹಿಳೆ ಸಿಕ್ರೆ ಹೆಚ್.ಡಿ. ರೇವಣ್ಣ ಬಣ್ಣ ಬಯಲಾಗುತ್ತೆ ಅನ್ನೋ ಕಾರಣಕ್ಕೆ ಸಂತ್ರಸ್ತೆ ಗುರುತು ಪತ್ತೆಹಚ್ಚಲು ಸಾಧ್ಯವಾಗದ ರೀತಿ ನೋಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ