ಹಿಂದೂಗಳ ಬಗ್ಗೆ ಅವಹೇಳನ ಆರೋಪ ಕೇಸ್: ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ಅಮಾನತ್ತು
ಬಷಿರುದ್ದೀನ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಫುಲ್ ಗರಂ ಆಗಿದ್ದು, ಪ್ರತಿಭಟನೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಮತದಾನಕ್ಕೆ ಮೂರು ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಲಾಗಿದೆ. ಹೀಗಾಗಿ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಮಾಡಲು ವಿವಾದಾತ್ಮಕ ಹೇಳಿಕೆ ನೀಡಿದ ಬಷೀರುದ್ದೀನ್‌ನನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.
ರಾಯಚೂರು, ಮೇ 04: ಜೈಶ್ರೀರಾಮ್ ಘೋಷಣೆ ಕೂಗಿದವರಿಗೆ ಬೂಟಲ್ಲಿ ಒದ್ದು ಹೊರಹಾಕಬೇಕಿತ್ತು ಅಂತ ಕಾಂಗ್ರೆಸ್ ಮುಖಂಡ ಬಷೀರುದ್ದೀನ್ (bashiruddin) ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಕಾರ್ಯಕರ್ತರಿಂದ ರಾಯಚೂರು ಡಿಸಿ ಕಚೇರಿ ಮುಂದೆ ಧರಣಿ ಮಾಡಲಾಗಿದೆ. ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯ (BJP) ಶಾಸಕರು ಡಿಸಿಗೆ ಶಾಸಕ ಶಿವರಾಜ್ ಪಾಟೀಲ್ ದೂರು ನೀಡಿದ್ದಾರೆ. ಇದೆಲ್ಲದರ ನಡುವೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಿಂದ ಬಷೀರುದ್ದೀನ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಬಷೀರುದ್ದೀನ್ಗೆ ಕಾಂಗ್ರೆಸ್ ಪತ್ರ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯಿಂದ ಬಷೀರುದ್ದೀನ್ಗೆ ಪತ್ರ ರವಾನಿಸಲಾಗಿದ್ದು, ಅತೀ ಸೂಕ್ಷ್ಮವಾದ ವಿಷಯಗಳ ಬಗ್ಗೆ ಮಾತನಾಡಬಾರದೆಂದು ಕೆಪಿಸಿಸಿಯ ಸೂಚನೆಯ ನಡುವೆಯೂ ಚುನಾವಣೆ ಸಂದರ್ಭದಲ್ಲಿ ಪಕ್ಷ ಮತ್ತು ಪಕ್ಷದ ನಾಯಕರುಗಳು ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡಿರುವ ವಿಡಿಯೋಗಳು ಮಾಧ್ಯಮಗಳಲ್ಲಿ ಹರಿದಾಡತ್ತಿದ್ದು ತಮ್ಮ ಇಂತಹ ಅನಗತ್ಯ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದು ಈ ಕಾರಣಕ್ಕಾಗಿ ತಮ್ಮನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತ್ತು ಮಾಡಲಾಗಿದೆ.
ಇದನ್ನೂ ಓದಿ: ಜೈ ಶ್ರೀರಾಮ ಎಂದಾಗ ಪೊಲೀಸರು ಬೂಟಿನಲ್ಲಿ ಹೊಡೆದು ಒಳಗಾಕಬೇಕಿತ್ತು: ಕಾಂಗ್ರೆಸ್ ಮುಖಂಡ
ತಾವು 7 ದಿನಗಳೊಳಗಾಗಿ ಈ ಹೇಳಿಕೆಗಳ ಬಗ್ಗೆ ತಮ್ಮ ವಿವರಣೆಯನ್ನು ಕೆಪಿಸಿಸಿ ಕಳುಹಿಸಿಕೊಡಬೇಕೆಂದು ಈ ಮೂಲಕ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ನಗರಸಭೆಯಲ್ಲಿ ಬಷೀರುದ್ದೀನ್ ವಿವಾದಾತ್ಮಕ ಹೇಳಿಕೆ
ಗಲಾಟೆ ಬಳಿಕ ನಗರಸ ಸಭೆ ಅಧಿಕಾರಿಗಳೊಂದಿಗೆ ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ಸಭೆ ನಡೆಸಿದ್ದರು. ಈ ವೇಳೆ ಸಭೆಯಲ್ಲಿ “ಯಾವುದಕ್ಕೂ ಸಂಬಂಧಿಲ್ಲದ ವ್ಯಕ್ತಿ ರಾಯಚೂರು ನಗರದಲ್ಲಿ ಅಶಾಂತಿ ಸೃಷ್ಟಿಸಲೆಂದು ಜೈ ಶ್ರೀರಾಮ ಅಂತ ಕೂಗಿದರೇ, ಪೊಲೀಸರು ಬೂಟಿನಲ್ಲಿ ಹೊಡೆದು ಓಳಗೆ ಹಾಕಬೇಕಿತ್ತು” ಎಂದು ಅಧಿಕಾರಿಗಳಿಗೆ ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ; ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ದೇವೇಗೌಡ ಮತ್ತು ನನ್ನ ವಿರುದ್ಧ ಯಾಕೆ ಮೀಡಿಯ ಟ್ರಯಲ್? ಹೆಚ್ ಡಿ ಕುಮಾರಸ್ವಾಮಿ
ಬಷಿರುದ್ದೀನ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಫುಲ್ ಗರಂ ಆಗಿದ್ದು, ಪ್ರತಿಭಟನೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಮತದಾನಕ್ಕೆ ಮೂರು ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಲಾಗಿದೆ. ಹೀಗಾಗಿ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಮಾಡಲು ವಿವಾದಾತ್ಮಕ ಹೇಳಿಕೆ ನೀಡಿದ ಬಷೀರುದ್ದೀನ್‌ನನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.