ದಾವಣಗೆರೆ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವೇದಿಕೆಗೆ ಅಗಮಿಸಿದಾಗ ಸಿದ್ದರಾಮಯ್ಯ ಭಾಷಣ ನಿಲ್ಲಿಸಿದರು!

ದಾವಣಗೆರೆ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವೇದಿಕೆಗೆ ಅಗಮಿಸಿದಾಗ ಸಿದ್ದರಾಮಯ್ಯ ಭಾಷಣ ನಿಲ್ಲಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 04, 2024 | 7:13 PM

ಅವರು ಹಾಗೇ ಹೇಳುತ್ತಿರುವಾಗಲೇ ಪ್ರಿಯಾಂಕಾ ವೇದಿಕೆಗೆ ಆಗಮಿಸುತ್ತಾರೆ. ಬಿರುಬಿಸಿಲಲ್ಲೂ ಅವರು ಉತ್ಸಾಹದ ಚಿಲುಮೆಯಂತೆ ಕಾಣುತ್ತಾರೆ. ನೆರೆದಿದ್ದ ಜನ ಕಿವಿಗಡಚಿಕ್ಕುವ ಚಪ್ಪಾಳೆ ಹಾಗೂ ಶಿಳ್ಳೆಯೊಂದಿಗೆ ಅವರನ್ನು ಸ್ವಾಗತಿಸುತ್ತಾರೆ. ಸಿದ್ದರಾಮಯ್ಯ ತಮ್ಮ ಭಾಷಣ ನಿಲ್ಲಿಸಿ ಅವರನ್ನು ಬರಮಾಡಿಕೊಳ್ಳುತ್ತಾರೆ. ವೇದಿಕೆಯ ಬಲಭಾಗದಲ್ಲಿ ಆಸೀನರಾಗಿದ್ದ ಡಿಕೆ ಶಿವಕುಮಾರ್ ಸಹ ಎದ್ದು ಬರುತ್ತಾರೆ.

ದಾವಣಗೆರೆ: ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಭಾಗವಹಿಸಿ ಮಾತಾಡಿದರು. ಅವರು ಬರುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಬ್ಬರದ ಭಾಷಣ ಮಾಡುತ್ತಿದ್ದರು ಮತ್ತು ಧಾರವಾಡದ ಕುಂದಗೋಳದಲ್ಲಿ ವಿನೋದ ಅಸೂಟಿ ಪರ ಮತಯಾಚಿಸಿದ ಡಿಕೆ ಶಿವಕುಮಾರ್ (DK Shivakumar) ಸಕಾಲಕ್ಕೆ ದಾವಣಗೆರೆ ಸಮಾವೇಶಕ್ಕೆ ಆಗಮಿಸಿದ್ದರು. ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ದಾವಣಗೆರೆಯ ಮತದಾರರಿಗೆ ಯಾವ ಕಾರಣಕ್ಕೂ ಸ್ವತಂತ್ರ ಅಭ್ಯರ್ಥಿ ಪರ ಮತ ಚಲಾಯಿಸಬಾರದು, ಕಾಂಗ್ರೆಸ್ ಅಬ್ಯರ್ಥಿಯಾಗಿ ತಾನೇ ಸ್ಪರ್ಧಿಸುತ್ತಿರುವುದಾಗಿ ಭಾವಿಸಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ವೋಟು ನೀಡಬೇಕೆಂದು ಹೇಳುತ್ತಾರೆ. ಅವರು ಹಾಗೇ ಹೇಳುತ್ತಿರುವಾಗಲೇ ಪ್ರಿಯಾಂಕಾ ವೇದಿಕೆಗೆ ಆಗಮಿಸುತ್ತಾರೆ. ಬಿರುಬಿಸಿಲಲ್ಲೂ ಅವರು ಉತ್ಸಾಹದ ಚಿಲುಮೆಯಂತೆ ಕಾಣುತ್ತಾರೆ.

ನೆರೆದಿದ್ದ ಜನ ಕಿವಿಗಡಚಿಕ್ಕುವ ಚಪ್ಪಾಳೆ ಹಾಗೂ ಶಿಳ್ಳೆಯೊಂದಿಗೆ ಅವರನ್ನು ಸ್ವಾಗತಿಸುತ್ತಾರೆ. ಸಿದ್ದರಾಮಯ್ಯ ತಮ್ಮ ಭಾಷಣ ನಿಲ್ಲಿಸಿ ಅವರನ್ನು ಬರಮಾಡಿಕೊಳ್ಳುತ್ತಾರೆ. ವೇದಿಕೆಯ ಬಲಭಾಗದಲ್ಲಿ ಆಸೀನರಾಗಿದ್ದ ಡಿಕೆ ಶಿವಕುಮಾರ್ ಸಹ ಎದ್ದು ಬರುತ್ತಾರೆ. ವೇದಿಕೆ ಮೇಲೆ ಆಸೀನರಾಗಿದ್ದ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪರನ್ನು ಪ್ರಿಯಾಂಕಾಗೆ ಪರಿಚಯಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿತ್ರದುರ್ಗ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗಿ, ಬಿಎನ್ ಚಂದ್ರಪ್ಪ ಪರ ಮತಯಾಚನೆ