Karnataka Dam Water Level: ಕಬಿನಿ ಜಲಾಶಯಕ್ಕೆ ಭಾರಿ ಒಳಹರಿವು, ಜು.08ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ

ಮುಂಗಾರು ಮಳೆ ಅಬ್ಬರದಿಂದ ರಾಜ್ಯದ ಜನರಲ್ಲಿ ಸಂತಸ ಮೂಡಿದೆ. ಬರಗಾಲದಿಂದ ಒಣಗಿದ್ದ ನದಿಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅದರಲ್ಲೂ ಕೃಷ್ಣ, ಮಲಪ್ರಭ, ಕಾವೇರಿ, ತುಂಗಭದ್ರ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ.

Karnataka Dam Water Level: ಕಬಿನಿ ಜಲಾಶಯಕ್ಕೆ ಭಾರಿ ಒಳಹರಿವು, ಜು.08ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ
ಹೇಮಾವತಿ ಡ್ಯಾಂ
Follow us
|

Updated on: Jul 08, 2024 | 7:24 AM

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮುಂಗಾರು ಮಳೆಯಾಗುತ್ತಿದೆ. ನದಿಗಳಿಗೆ ಒಳಹರಿವು ಹೆಚ್ಚಿದೆ. ಹೇಮಾವತಿ ಜಲಾಶಯಕ್ಕೆ ಕೂಡ ಭಾರಿ ನೀರು ಹರಿದು ಬರುತ್ತಿದೆ. ಹಾಗೆಯೇ ಕೆಆರ್​ಎಸ್​ ಮತ್ತು ಕಬಿನಿ ಡ್ಯಾಂಗಳು ಬಹುತೇಕ ಭರ್ತಿಯಾಗಿವೆ. ಹಾಗಾದರೆ ರಾಜ್ಯದ ಜಲಾಶಯಗಳ ಇಂದಿನ (ಜು.08) ನೀರಿನ ಮಟ್ಟ (Karnataka Dam Water Level) ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 59.39 19.14 59306 430
ತುಂಗಭದ್ರಾ ಜಲಾಶಯ (Tungabhadra Dam) 497.71 105.79 18.24 3.08 50715 391
ಮಲಪ್ರಭಾ ಜಲಾಶಯ (Malaprabha Dam) 633.80 37.73 9.11 6.88 4048 194
ಕೆ.ಆರ್.ಎಸ್ (KRS Dam) 38.04 49.45 24.42 10.57 11027 562
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 35.41 15.83 29044 1570
ಕಬಿನಿ ಜಲಾಶಯ (Kabini Dam) 696.13 19.52 17.98 7.50 5039 3250
ಭದ್ರಾ ಜಲಾಶಯ (Bhadra Dam) 657.73 71.54 21.69 26.15 8689 553
ಘಟಪ್ರಭಾ ಜಲಾಶಯ (Ghataprabha Dam) 662.91 51.00 17.07 4.13 17759 114
ಹೇಮಾವತಿ ಜಲಾಶಯ (Hemavathi Dam) 890.58 37.10 17.60 14.14 7796 250
ವರಾಹಿ ಜಲಾಶಯ (Varahi Dam) 594.36 31.10 5.91 3.29 1090 0
ಹಾರಂಗಿ ಜಲಾಶಯ (Harangi Dam)​​ 871.38 8.50 5.46 3.39 2472 200
ಸೂಫಾ (Supa Dam) 564.00 145.33 42.81 30.88 28597 500
ನಾರಾಯಣಪುರ ಜಲಾಶಯ (Narayanpura Dam) 492.25 33.31 21.16 14.19 201 201
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 18.08 24.86 0 147

37 ಟಿಎಂಸಿ ಸಾಮರ್ಥ್ಯ ಇರುವ ಹೇಮಾವತಿ ಡ್ಯಾಂಗೆ ಈಗ ಬರೋಬ್ಬರಿ 7,796 ಕ್ಯುಸೆಕ್​ ನೀರು ಹರಿದು ಬರುತ್ತಿದೆ. 17.599 ಟಿಎಂಸಿ ನೀರು ಸಂಗ್ರಹವಾಗಿದೆ. ಮಳೆ ಮುಂದುವರಿದರೆ ಜುಲೈ ಅಂ್ಯಕ್ಕೆ ಹೇಮಾವತಿ ಜಲಾಶಯ ತುಂಬಿ ತುಳುಕುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ