AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2023: ಜ.26ರಂದು ಯಾವ ಸಚಿವರು, ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ? ಇಲ್ಲಿದೆ ಮಾಹಿತಿ

ನಾಳೆ ಅಂದರೆ ಜನವರಿ 26ರಂದು ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಇನ್ನು ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಗಣರಾಜ್ಯೋತ್ಸವ ದಿನ ಯಾವ ಸಚಿವರು , ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

Republic Day 2023: ಜ.26ರಂದು ಯಾವ ಸಚಿವರು, ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ? ಇಲ್ಲಿದೆ ಮಾಹಿತಿ
ರಾಷ್ಟ್ರ ಧ್ವಜ
TV9 Web
| Edited By: |

Updated on: Jan 25, 2023 | 5:49 PM

Share

ಬೆಂಗಳೂರು: ಬೆಂಗಳೂರು: ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ(Republic Day 2023) ಕ್ಷಣಗಣನೆ ಆರಂಭವಾಗಿದೆ. ನಾಳೆ ಜನವರಿ 26 ಗಣರಾಜ್ಯೋತ್ಸವ ದಿನ ಅದ್ದೂರಿ ಸಮಾರಂಭಕ್ಕೆ ಬೆಂಗಳೂರಿನ ಮಾಣಿಕ್ ಷಾ ಪೆರೆಡ್ ಗ್ರೌಂಡ್(Manekshaw Parade Ground) ಸಕಲ ಪೂರ್ವ ತಯಾರಿಗಳಿಂದ ಮದುವಣಗಿತ್ತಿಯಂತೆ ಸಿದ್ದಗೊಂಡಿದೆ. ಇನ್ನು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಹ ಧ್ವಜಾರೋಹಣಕ್ಕೆ ಸಿದ್ಧತೆಗಳು ನಡೆದಿವೆ. ವಿವಿಧ ಜಿಲ್ಲೆಗಳಲ್ಲಿ ಧ್ವಜಾರೋಹಣ ಸಚಿವ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, 30 ಜಿಲ್ಲೆಗಳಲ್ಲಿ ಬೆಂಗಳೂರು ನಗರ ಹೊರತುಪಡಿಸಿ 25 ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಲಿದ್ದು, 4 ಜಿಲ್ಲಾಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ. ಹಾಗಾದ್ರೆ, ಗಣರಾಜ್ಯೋತ್ಸವ ದಿನ ಯಾವ ಸಚಿವರು , ಯಾವ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಇದನ್ನೂ ಓದಿ: Republic Day 2023 Guidelines: ಮಾಣಿಕ್ ಷಾ ಪೆರೇಡ್ ಗ್ರೌಂಡ್​ನಲ್ಲಿ ಗಣರಾಜ್ಯೋತ್ಸವ ಸಂಭ್ರಮಕ್ಕೆ ಭಾರೀ ಭದ್ರತೆ

ವಿಜಯಪುರ, ಬೀದರ್, ಚಿಕ್ಕಮಗಳೂರು, ಬಾಗಲಕೋಟೆಯಲ್ಲಿ ಆಯಾ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ. ಇನ್ನುಳಿದ ಜಿಲ್ಲೆಗಳಲ್ಲಿ ಸಚಿವರು ಧ್ವಜ ಹಾರಿಸಲಿದ್ದಾರೆ. ಇನ್ನು ಕಂದಾಯ ಸಚಿವ ಆರ್. ಅಶೋಕ್ ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.

  •   ಗೋವಿಂದ ಕಾರಜೋಳ-ಬೆಳಗಾವಿ,
  • ಬಿ.ಶ್ರೀರಾಮುಲು-ಬಳ್ಳಾರಿ
  • ವಿ.ಸೋಮಣ್ಣ-ಚಾಮರಾಜನಗರ
  • ಎಸ್.ಅಂಗಾರ-ಉಡುಪಿ
  • ಆರಗ ಜ್ಞಾನೇಂದ್ರ-ತುಮಕೂರು
  • ಸಿ.ಸಿ.ಪಾಟೀಲ್-ಗದಗ
  • ಆನಂದ್ ಸಿಂಗ್-ಕೊಪ್ಪಳ
  • ಕೋಟ ಶ್ರೀನಿವಾಸ ಪೂಜಾರಿ-ಉತ್ತರ ಕನ್ನಡ
  • ಪ್ರಭು ಚೌಹಾಣ್-ಯಾದಗಿರಿ
  • ಮುರುಗೇಶ್ ನಿರಾಣಿ-ಕಲಬುರಗಿ
  • ಶಿವರಾಂ ಹೆಬ್ಬಾರ್-ಹಾವೇರಿ
  • ಎಸ್.ಟಿ.ಸೋಮಶೇಖರ್-ಮೈಸೂರು
  • ಬಿ.ಸಿ.ಪಾಟೀಲ್-ಚಿತ್ರುದುರ್ಗ
  • ಭೈರತಿ ಬಸವರಾಜ್-ದಾವಣಗೆರೆ
  • ಕೆ.ಸುಧಾಕರ್-ಬೆಂಗಳೂರು ಗ್ರಾಮಾಂತರ
  • ಕೆ.ಗೋಪಾಲಯ್ಯ-ಹಾಸನ
  • ಶಶಿಕಲಾ ಜೊಲ್ಲೆ-ವಿಜಯನಗರ
  • ಎಂಟಿಬಿ ನಾಗರಾಜ್-ಚಿಕ್ಕಬಳ್ಳಾಪುರ
  • ಕೆ.ಸಿ.ನಾರಾಯಣಗೌಡ-ಶಿವಮೊಗ್ಗ
  • ಬಿ.ಸಿ.ನಾಗೇಶ್-ಕೊಡಗು
  • ವಿ.ಸುನೀಲ್ ಕುಮಾರ್-ದಕ್ಷಿಣ ಕನ್ನಡ
  • ಹಾಲಪ್ಪ ಆಚಾರ್-ಧಾರವಾಡ
  • ಶಂಕರ ಪಾಟೀಲ ಮುನೇನಕೊಪ್ಪ-ರಾಯಚೂರು
  • ಮುನಿರತ್ನ-ಕೋಲಾರ
  • ಆರ್.ಅಶೋಕ್-ಮಂಡ್ಯ
  • ವಿಜಯಪುರ-ಡಿಸಿಯಿಂದ ಧ್ವಜಾರೋಹಣ
  • ಬೀದರ್, ಚಿಕ್ಕಮಗಳೂರು, ಬಾಗಲಕೋಟೆಯಲ್ಲಿ ಡಿಸಿ ಧ್ವಜಾರೋಹಣ

Follow Us
TV9 Web
TV9 Web

TV9 Kannada

Read More