ಹೃದಯಾಘಾತದಿಂದ ಮೃತಪಟ್ಟರೂ ಬಸ್ ಚಾಲಕನಿಗೆ ಪರಿಹಾರ; ಹೈಕೋರ್ಟ್ ಮಹತ್ವದ ಆದೇಶ
ಎನ್ಇಕೆಆರ್ಟಿಸಿ ಚಾಲಕ ವಿಜಯಕುಮಾರ್ ಸತತ 11 ಗಂಟೆ ಕರ್ತವ್ಯ ನಿರ್ವಹಣೆ ಮಾಡಿದ್ದರು. ಈ ವೇಳೆ ಹೃದಯಾಘಾತದಿಂದ ಮೃತ ಪಟ್ಟಿದ್ದರು. ಹೃದಯಾಘಾತ ಕೂಡ ಅಪಘಾತವೆಂದು ಪರಿಗಣಿಸಿ 21,98,090 ರೂಪಾಯಿ ಪರಿಹಾರಕ್ಕೆ ಕಾರ್ಮಿಕ ಆಯುಕ್ತರು ಆದೇಶಿಸಿದ್ದರು.

ಬೆಂಗಳೂರು: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಬಸ್ ಚಾಲಕನಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ಎನ್ಇಕೆಆರ್ಟಿಸಿ ಚಾಲಕ ವಿಜಯಕುಮಾರ್ ಸತತ 11 ಗಂಟೆ ಕರ್ತವ್ಯ ನಿರ್ವಹಣೆ ಮಾಡಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೃದಯಾಘಾತ ಕೂಡ ಅಪಘಾತವೆಂದು ಪರಿಗಣಿಸಿ 21,98,090 ರೂಪಾಯಿ ಪರಿಹಾರಕ್ಕೆ ಕಾರ್ಮಿಕ ಆಯುಕ್ತರು ಆದೇಶಿಸಿದ್ದರು. ಈ ಬಗ್ಗೆ ಎನ್ಇಕೆಆರ್ಟಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಸುನಿಲ್ ದತ್ ಯಾದವ್, ಪಿ.ಎನ್.ದೇಸಾಯಿರವರಿದ್ದ ಪೀಠ ವಜಾಗೊಳಿಸಿತು.
ಈ ಮೂಲಕ ಕಾರ್ಮಿಕ ಆಯುಕ್ತರ ಆದೇಶವನ್ನು ಎತ್ತಿ ಹಿಡಿಯಿತು. ಬಸ್ ಚಾಲಕನಿಗೆ ಕಾರ್ಯಭಾರದ ಒತ್ತಡದಿಂದ ಹೃದಯಾಘಾತವಾದ ಸಾಧ್ಯತೆ ಇದೆ. ಹೀಗಾಗಿ, ಅವರ ಕುಟುಂಬ ಪರಿಹಾರ ಪಡೆಯಲು ಅರ್ಹವಾಗಿದೆ ಎಂದು ಕೋರ್ಟ್ ಹೇಳಿದೆ.
ಕಬ್ಬನ್ ಪಾರ್ಕ್ ಒಳಾಂಗಣದಲ್ಲಿ ವಾಹನಗಳ ಓಡಾಟ ನಿಷೇಧಿಸಿ: 5 ತಿಂಗಳ ಮಗುವಿನಿಂದ ಹೈಕೋರ್ಟ್ಗೆ ಅರ್ಜಿ