ಹೊಸ ವರ್ಷಕ್ಕೆ ಪ್ರಯಾಣಿಕರಿಗೆ BMTC ಗುಡ್ ನ್ಯೂಸ್: ಟಿಕೆಟ್ ದರ ಇಳಿಕೆ
ಈಗ ಮೊದಲಿನಷ್ಟು ಪ್ರಯಾಣಿಕರು ಎಸಿ ಬಸ್ನಲ್ಲಿ ಸಂಚಾರ ಮಾಡುತ್ತಿಲ್ಲ. ಹೀಗಾಗಿ, ಪ್ರಯಾಣಿಕರನ್ನ ಆಕರ್ಷಣೆ ಮಾಡಲು ಹವಾ ನಿಂಯತ್ರಿತ ಬಸ್ಗಳ ಟಿಕೆಟ್ ಹಾಗೂ ಪಾಸ್ ದರವನ್ನು ಶೇ.20 ಇಳಿಕೆ ಮಾಡಿದೆ.
ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ BMTC ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಐಷಾರಾಮಿ ಬಸ್ ಟಿಕೆಟ್ ಹಾಗೂ ಪಾಸ್ ದರವನ್ನು ಇಳಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ.
ಹವಾ ನಿಯಂತ್ರಿತ ಸ್ಥಳಗಳಲ್ಲಿ ಕೊರೊನಾ ಸೋಂಕು ಹೆಚ್ಚು ವೇಗವಾಗಿ ಹರಡಲಿದೆ ಎನ್ನಲಾಗಿದೆ. ಈ ಕಾರಣಕ್ಕೆ ಆರಂಭದಲ್ಲಿ ಎಸಿ ಬಸ್ಗಳ ಸಂಚಾರಕ್ಕೆ ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು. ನಂತರ ಎಸಿ ಬಸ್ಗಳನ್ನು ಕೂಡ ರಸ್ತೆಗೆ ಇಳಿಸಿತ್ತು. ಆದರೆ, ಈಗ ಮೊದಲಿನಷ್ಟು ಪ್ರಯಾಣಿಕರು ಎಸಿ ಬಸ್ನಲ್ಲಿ ಸಂಚಾರ ಮಾಡುತ್ತಿಲ್ಲ. ಹೀಗಾಗಿ, ಪ್ರಯಾಣಿಕರನ್ನು ಆಕರ್ಷಿಸಲು ಹವಾ ನಿಯಂತ್ರಿತ ಬಸ್ಗಳ ಟಿಕೆಟ್ ಹಾಗೂ ಪಾಸ್ದರವನ್ನು ಶೇ.20 ಇಳಿಕೆ ಮಾಡಿದೆ.
ಜನವರಿ 1ರಿಂದ ಈ ಹೊಸ ಆದೇಶ ಅನ್ವಯ ಆಗಲಿದೆ. ಏರ್ಪೋರ್ಟ್ ರ್ಪೋರ್ಟ್, ವೈಲ್ ಫೀಲ್ಡ್, ಕಾಡಗೋಡಿ, ಹೊಸಕೋಟೆ, ಬನ್ನೇರುಘಟ್ಟ ಸೇರಿದಂತೆ ವಿವಿಧ ಭಾಗಗಳಲ್ಲಿ ಐಷಾರಾಮಿ ಬಸ್ಗಳು ಸಂಚಾರ ಮಾಡುತ್ತಿವೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಬಿಎಂಟಿಸಿ ಆ್ಯಪ್! ಇದು MyBMTC ಅಲ್ಲ! Why ಬಿಎಂಟಿಸಿ ಆ್ಯಪ್?