ಮೃತ ಸೋಂಕಿತರ ಗೌರವಯುತ ಅಂತ್ಯಸಂಸ್ಕಾರಕ್ಕೆ ಹೊಸ ಮಾರ್ಗಸೂಚಿ ರೂಪಿಸಿ: ಹೈಕೋರ್ಟ್​

ಮೃತ ಸೋಂಕಿತರ ಗೌರವಯುತ ಅಂತ್ಯಸಂಸ್ಕಾರಕ್ಕೆ ಹೊಸ ಮಾರ್ಗಸೂಚಿ ರೂಪಿಸಿ: ಹೈಕೋರ್ಟ್​
ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಾರ್ಗಸೂಚಿಯನ್ನು ರೂಪಿಸಲು ಸೂಚನೆ ನೀಡಿದೆ. ಜೊತೆಗೆ, ಅಂತ್ಯಸಂಸ್ಕಾರ ವಿಚಾರದಲ್ಲಿ ಕೆಲವು ನಿಯಮಗಳನ್ನು ರೂಪಿಸುವಂತೆ ಸಹ ಸೂಚಿಸಿದೆ. ಹೈಕೋರ್ಟ್​ ನೀಡಿದ ಸೂಚನೆಯಲ್ಲಿ ಏನಿದೆ? 1)ಧಾರ್ಮಿಕ ಹಾಗೂ ಸಾಂಪ್ರದಾಯಿಕ ಶವಸಂಸ್ಕಾರಕ್ಕೆ ನಿಯಮ ರೂಪಿಸಬೇಕು 2)ಕೆಲ ಸಂಪ್ರದಾಯಗಳಲ್ಲಿ ಸ್ತ್ರೀಯರು ಸ್ಮಶಾನಕ್ಕೆ ಹೋಗುವಂತಿಲ್ಲ. ಹಾಗಾಗಿ ಅಂಥವರಿಗೆ ಅಂತಿಮ ದರ್ಶನಕ್ಕೆ ಮುಂಚೆಯೇ ಅವಕಾಶ ಕಲ್ಪಿಸಿಕೊಡಬೇಕು 3)ವಾರಸುದಾರರಿಲ್ಲದ ಶವಗಳ ಅಂತ್ಯಕ್ರಿಯೆಯ ಬಗ್ಗೆ ಸೂಕ್ತ ನಿಯಮ ರಚಿಸಬೇಕು 4)ಮರಣ ಪ್ರಮಾಣಪತ್ರಗಳಲ್ಲಿ ಕೊವಿಡ್​ನಿಂದ ಸಾವನ್ನಪ್ಪಿದವರೆಂದು […]

sadhu srinath

| Edited By:

Jul 28, 2020 | 1:05 AM

ಬೆಂಗಳೂರು: ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಾರ್ಗಸೂಚಿಯನ್ನು ರೂಪಿಸಲು ಸೂಚನೆ ನೀಡಿದೆ. ಜೊತೆಗೆ, ಅಂತ್ಯಸಂಸ್ಕಾರ ವಿಚಾರದಲ್ಲಿ ಕೆಲವು ನಿಯಮಗಳನ್ನು ರೂಪಿಸುವಂತೆ ಸಹ ಸೂಚಿಸಿದೆ.

ಹೈಕೋರ್ಟ್​ ನೀಡಿದ ಸೂಚನೆಯಲ್ಲಿ ಏನಿದೆ? 1)ಧಾರ್ಮಿಕ ಹಾಗೂ ಸಾಂಪ್ರದಾಯಿಕ ಶವಸಂಸ್ಕಾರಕ್ಕೆ ನಿಯಮ ರೂಪಿಸಬೇಕು 2)ಕೆಲ ಸಂಪ್ರದಾಯಗಳಲ್ಲಿ ಸ್ತ್ರೀಯರು ಸ್ಮಶಾನಕ್ಕೆ ಹೋಗುವಂತಿಲ್ಲ. ಹಾಗಾಗಿ ಅಂಥವರಿಗೆ ಅಂತಿಮ ದರ್ಶನಕ್ಕೆ ಮುಂಚೆಯೇ ಅವಕಾಶ ಕಲ್ಪಿಸಿಕೊಡಬೇಕು 3)ವಾರಸುದಾರರಿಲ್ಲದ ಶವಗಳ ಅಂತ್ಯಕ್ರಿಯೆಯ ಬಗ್ಗೆ ಸೂಕ್ತ ನಿಯಮ ರಚಿಸಬೇಕು 4)ಮರಣ ಪ್ರಮಾಣಪತ್ರಗಳಲ್ಲಿ ಕೊವಿಡ್​ನಿಂದ ಸಾವನ್ನಪ್ಪಿದವರೆಂದು ಉಲ್ಲೇಖಿಸಬೇಕು

ಜೊತೆಗೆ, ಬೇರೆ ಕಾರಣಕ್ಕೆ ಮೃತಪಟ್ಟವರಿಗೂ ಮರಣ ಪ್ರಮಾಣಪತ್ರದಲ್ಲಿ ಕೆಲವೊಮ್ಮೆ ಪಾಸಿಟಿವ್ ಎಂದು ಉಲ್ಲೇಖ ಮಾಡಿರುವುದು ಕಂಡುಬಂದಿದೆ. ಇದು ಸರಿಯೇ ಎಂದು ಹೈಕೋರ್ಟ್​ ಪ್ರಶ್ನಿಸಿದೆ. ಹೀಗಾಗಿ, ಮೇಲ್ಕಂಡ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ ಹೊರಡಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada