ಥರ್ಮಲ್ ಸ್ಕ್ಯಾನರ್​ಗಳನ್ನ ನಂಬಿಕೊಂಡರೆ ಜನರದ್ದು ಅಧೋಗತಿ!

ಥರ್ಮಲ್ ಸ್ಕ್ಯಾನರ್​ಗಳನ್ನ ನಂಬಿಕೊಂಡರೆ ಜನರದ್ದು ಅಧೋಗತಿ!

[lazy-load-videos-and-sticky-control id=”FzsW3uHigVs”] ಬೆಂಗಳೂರು: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ಥರ್ಮಲ್ ಸ್ಕ್ಯಾನರ್ ವಿಫಲವಾಗಿದೆ. ಮನುಷ್ಯನ ದೇಹದ ತಾಪಮಾನ ಕಂಡುಹಿಡಿಯಲು ಹಾಗೂ ಅದರಿಂದ‌ ಸೋಂಕಿತರನ್ನ ಕಂಡುಹಿಡಿಯಲು ಥರ್ಮಲ್‌ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿತ್ತು. ಆದರೆ ಅದನ್ನು ನಂಬಿದ್ರೆ ಅದೋ ಗತಿ ಎಂಬಂತಾಗಿದೆ. ಅಂಗಡಿಗಳು, ಕಚೇರಿ, ಹೋಟೆಲ್‌, ಮಾಲ್‌ಗಳು ಸೇರಿದಂತೆ ಹಲವೆಡೆ ಥರ್ಮಲ್ ಸ್ಕ್ಯಾನರ್ ಬಳಸಲಾಗುತ್ತಿದೆ. ಸೋಂಕಿತರನ್ನು ಇದರಿಂದ ಕಂಡುಹಿಡಿಯಬಹುದು ಎಂಬ ಧೈರ್ಯವಿತ್ತು. ಆದರೆ ಥರ್ಮಲ್ ಸ್ಕ್ಯಾನರ್​ನಿಂದ ಒಬ್ಬ ಸೋಂಕಿತನನ್ನು ಹಿಡಿಯೋಕ್ಕೆ ಆಗ್ತಿಲ್ಲ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ಶೇ. 50 ರಷ್ಟು ಸೋಂಕಿತರಿಗೆ […]

Ayesha Banu

| Edited By:

Jul 28, 2020 | 12:05 PM

[lazy-load-videos-and-sticky-control id=”FzsW3uHigVs”]

ಬೆಂಗಳೂರು: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ ಥರ್ಮಲ್ ಸ್ಕ್ಯಾನರ್ ವಿಫಲವಾಗಿದೆ. ಮನುಷ್ಯನ ದೇಹದ ತಾಪಮಾನ ಕಂಡುಹಿಡಿಯಲು ಹಾಗೂ ಅದರಿಂದ‌ ಸೋಂಕಿತರನ್ನ ಕಂಡುಹಿಡಿಯಲು ಥರ್ಮಲ್‌ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿತ್ತು. ಆದರೆ ಅದನ್ನು ನಂಬಿದ್ರೆ ಅದೋ ಗತಿ ಎಂಬಂತಾಗಿದೆ.

ಅಂಗಡಿಗಳು, ಕಚೇರಿ, ಹೋಟೆಲ್‌, ಮಾಲ್‌ಗಳು ಸೇರಿದಂತೆ ಹಲವೆಡೆ ಥರ್ಮಲ್ ಸ್ಕ್ಯಾನರ್ ಬಳಸಲಾಗುತ್ತಿದೆ. ಸೋಂಕಿತರನ್ನು ಇದರಿಂದ ಕಂಡುಹಿಡಿಯಬಹುದು ಎಂಬ ಧೈರ್ಯವಿತ್ತು. ಆದರೆ ಥರ್ಮಲ್ ಸ್ಕ್ಯಾನರ್​ನಿಂದ ಒಬ್ಬ ಸೋಂಕಿತನನ್ನು ಹಿಡಿಯೋಕ್ಕೆ ಆಗ್ತಿಲ್ಲ.

ಬೆಂಗಳೂರಿನಲ್ಲಿ ಪತ್ತೆಯಾಗಿರುವ ಶೇ. 50 ರಷ್ಟು ಸೋಂಕಿತರಿಗೆ ಗುಣಲಕ್ಷಣಗಳಿಲ್ಲ. ಅವರಿಗೆ ಯಾವುದೇ ಜ್ವರ,‌ ಕೆಮ್ಮು,‌ ನೆಗಡಿ ಲಕ್ಷಣವಿಲ್ಲ. ಸಾಮಾನ್ಯರಂತೆ ಓಡಾಡುತ್ತಿರುವ ಗುಣಲಕ್ಷಣಗಳಿಲ್ಲದ ಸೋಂಕಿತರು ಹತ್ತು ಸಲ ಥರ್ಮಲ್ ಸ್ಕ್ಯಾನರ್ ಎದುರು ಸ್ಕ್ಯಾನ್ ಮಾಡಿಸಿಕೊಂಡ್ರು ನಾರ್ಮಲ್ ಎಂದು ತೋರಿಸುತ್ತಿದೆ. ಆದರೆ ಆ್ಯಂಟಿಜೆನ್ ಟೆಸ್ಟ್‌ನಲ್ಲಿ ಕೊರೊನಾ ದೃಢವಾಗುತ್ತಿದೆ.

ಆ್ಯಂಟಿಜನ್ ಟೆಸ್ಟ್​ನಲ್ಲಿ ಥರ್ಮಲ್ ಸ್ಕ್ಯಾನರ್ ಬಳಕೆ: ಆ್ಯಂಟಿಜನ್ ಟೆಸ್ಟ್​ಗೂ ಮುನ್ನ ಥರ್ಮಲ್ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿದೆ. ಥರ್ಮಲ್ ಸ್ಕ್ಯಾನರ್ ವೇಳೆ ನಾರ್ಮಲ್, ಆ್ಯಂಟಿಜನ್ ಟೆಸ್ಟ್​ನಲ್ಲಿ ಪಾಸಿಟಿವ್ ಬರ್ತಿದೆ. ಥರ್ಮಲ್ ಸ್ಕ್ಯಾನರ್ ನಂಬಿದವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.

ಥರ್ಮಲ್ ಸ್ಕ್ಯಾನರ್ ತೀವ್ರ ಜ್ವರ ಇದ್ದವರನ್ನ ಮಾತ್ರ ಕಂಡುಹಿಡಿಯುತ್ತದೆ. ಅಸಿಂಪ್ಟಮ್ಯಾಟಿಕ್ ಸೋಂಕಿತರಿಗೂ ನಾರ್ಮಲ್ ಟೆಂಪ್ರೆಕ್ಚರ್ ತೋರಿಸುತ್ತೆ. ಹೀಗಾಗಿ ಈಗ ನಮ್ಮನ್ನ ನಾವು ಕಾಪಾಡಿಕೊಳ್ಳಲು ನಮಗೆ ಉಳಿದಿರುವುದು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಮಾತ್ರ.

Follow us on

Related Stories

Most Read Stories

Click on your DTH Provider to Add TV9 Kannada