ಅಂಗಡಿಯಿಂದ ಅವಾಂತರ: ಒಂದೇ ಒಂದು ಬಟ್ಟೆ ಅಂಗಡಿಯಿಂದ 30 ಜನರಿಗೆ ಸೋಂಕು
[lazy-load-videos-and-sticky-control id=”DsClBlU4Yqs”] ರಾಯಚೂರು: ನೀರಿನಲ್ಲಿರೋ ಮೀನಿನ ಹೆಜ್ಜೆಯನ್ನು ಕಂಡುಹಿಡಿಯುವುದು ಎಷ್ಟು ಕಷ್ಟವೋ ಅದೇ ರೀತಿ ಈಗ ಕೊರೊನಾ ಹೆಜ್ಜೆ ಪತ್ತೆ ಹಚ್ಚುವುದು ಕೂಡ ಅಷ್ಟೇ ಕಷ್ಟವಾಗಿದೆ. ಗುಣಲಕ್ಷಣಗಳಿಲ್ಲದ ವ್ಯಕ್ತಿಗಳಿಂದ ಸೋಂಕು ಮತ್ತಷ್ಟು ಬಲಿಷ್ಠವಾಗಿ ಹರಡುತ್ತಿದೆ. ಒಂದೇ ಒಂದು ಬಟ್ಟೆ ಅಂಗಡಿಯಿಂದ 30 ಜನರಿಗೆ ಕೊರೊನಾ ಸೋಂಕು ಹಬ್ಬಿದೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಅಮರದೀಪ ಬಟ್ಟೆ ಅಂಗಡಿಯಿಂದ 30 ಜನರಿಗೆ ಸೋಂಕು ತಗುಲಿದೆ. ಕಂಟೇನ್ಮೆಂಟ್ ಜೋನ್‌ನ ನಿವಾಸಿಯಾಗಿದ್ದ ಕೊರೊನಾ ಸೋಂಕಿತೆ ಈ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ್ದರು. ಮಹಿಳೆ […]

[lazy-load-videos-and-sticky-control id=”DsClBlU4Yqs”]
ರಾಯಚೂರು: ನೀರಿನಲ್ಲಿರೋ ಮೀನಿನ ಹೆಜ್ಜೆಯನ್ನು ಕಂಡುಹಿಡಿಯುವುದು ಎಷ್ಟು ಕಷ್ಟವೋ ಅದೇ ರೀತಿ ಈಗ ಕೊರೊನಾ ಹೆಜ್ಜೆ ಪತ್ತೆ ಹಚ್ಚುವುದು ಕೂಡ ಅಷ್ಟೇ ಕಷ್ಟವಾಗಿದೆ. ಗುಣಲಕ್ಷಣಗಳಿಲ್ಲದ ವ್ಯಕ್ತಿಗಳಿಂದ ಸೋಂಕು ಮತ್ತಷ್ಟು ಬಲಿಷ್ಠವಾಗಿ ಹರಡುತ್ತಿದೆ. ಒಂದೇ ಒಂದು ಬಟ್ಟೆ ಅಂಗಡಿಯಿಂದ 30 ಜನರಿಗೆ ಕೊರೊನಾ ಸೋಂಕು ಹಬ್ಬಿದೆ.
ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಅಮರದೀಪ ಬಟ್ಟೆ ಅಂಗಡಿಯಿಂದ 30 ಜನರಿಗೆ ಸೋಂಕು ತಗುಲಿದೆ. ಕಂಟೇನ್ಮೆಂಟ್ ಜೋನ್‌ನ ನಿವಾಸಿಯಾಗಿದ್ದ ಕೊರೊನಾ ಸೋಂಕಿತೆ ಈ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ್ದರು. ಮಹಿಳೆ ಅಂಗಡಿಗೆ ಬಂದ ಹೋದ ಮೇಲೆ ಮೊದಲಿಗೆ ಅಂಗಡಿ ಮಾಲೀಕ ಮತ್ತು ಇಬ್ಬರು ಕೆಲಸಗಾರರಿಗೆ ಸೋಂಕು ತಗುಲಿತ್ತು. ಬಳಿಕ ಈ ಒಂದೇ ಬಟ್ಟೆ ಅಂಗಡಿಯಿಂದ 30 ಜನರಿಗೆ ಕೊರೊನಾ ಸೋಂಕು ಹಬ್ಬಿದೆ.
ಬಟ್ಟೆ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯವಹಿಸಿದ ಹಿನ್ನೆಲೆಯಲ್ಲಿ ಅಮರದೀಪ್ ಅಂಗಡಿ ಮಾಲೀಕನ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ಆರೋಪ ದಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಬಟ್ಟೆ ಅಂಗಡಿ ಲೈಸೆನ್ಸ ರದ್ದುಪಡಿಸಲು ಪೊಲೀಸ್ ಇಲಾಖೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ.
Published On - 9:17 am, Tue, 28 July 20




