ಟ್ಯಾಟೂನಿಂದ ಎಚ್​ಐವಿ, ಕ್ಯಾನ್ಸರ್: ಕೇಂದ್ರಕ್ಕೆ ಪತ್ರ ಬರೆದು ಹೊಸ ಕಾನೂನು ರೂಪಿಸುತ್ತೇವೆಂದ ಗುಂಡೂರಾವ್

| Updated By: Ganapathi Sharma

Updated on: Feb 28, 2025 | 2:44 PM

ಬೆಂಗಳೂರಿನಲ್ಲಿ ಇಡ್ಲಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ, ಟ್ಯಾಟೂಗಳಿಂದ ಎಚ್‌ಐವಿ ಮತ್ತು ಚರ್ಮದ ಕ್ಯಾನ್ಸರ್‌ ಬರುವ ಸಾಧ್ಯತೆಗಳ ಬಗ್ಗೆಯೂ ವರದಿಯಾಗಿದೆ. ಮತ್ತೊಂದೆಡೆ, ಆಹಾರ ಪದಾರ್ಥಗಳು ಮತ್ತು ಔಷಧಿಗಳಲ್ಲಿ ಅನೇಕ ಅಸುರಕ್ಷಿತ ಅಂಶಗಳು ಪತ್ತೆಯಾಗಿವೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ ಮಾಹಿತಿ ಇಲ್ಲಿದೆ.

ಟ್ಯಾಟೂನಿಂದ ಎಚ್​ಐವಿ, ಕ್ಯಾನ್ಸರ್: ಕೇಂದ್ರಕ್ಕೆ ಪತ್ರ ಬರೆದು ಹೊಸ ಕಾನೂನು ರೂಪಿಸುತ್ತೇವೆಂದ ಗುಂಡೂರಾವ್
ದಿನೇಶ್ ಗುಂಡೂರಾವ್
Follow us on

ಬೆಂಗಳೂರು, ಫೆಬ್ರವರಿ 28: ಇಡ್ಲಿಯಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆ, ಟ್ಯಾಟೂನಿಂದ ಎಚ್​ಐವಿ ಹಾಗೂ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆಗಳ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆಯ ಆಯುಕ್ತ ಶ್ರೀನಿವಾಸ್ ನೇತ್ವದಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ಯಾಟೂನಿಂದ ಆರೋಗ್ಯ ಸಮಸ್ಯೆಗಳ ಸಾಧ್ಯತೆ ವಿಚಾರವಾಗಿ ಕೇಂದ್ರ ಸರ್ಕಾರ ನಿಯಮ ರೂಪಿಸಲು ಅವಕಾಶ ಇದೆ. ಟ್ಯಾಟೂ ಇಂಕ್ ಕಾಂತಿ ವರ್ಧಕಗಳ ಅಡಿಯಲ್ಲಿ ತರಲು ಪತ್ರ ಬರೆಯಲಾಗುವುದು. ಆಯುಕ್ತರಿಗೆ ಪತ್ರ ಬರೆದು ಮನವಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಪತ್ರ ಬರೆದು ಕಾನೂನು ರೂಪಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಜವವರಿಯಿಂದ ಒಟ್ಟು 3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 26 ಮಾದರಿಗಳು ಅಸುರಕ್ಷಿತವಾಗಿವೆ ಎಂಬುದು ತಿಳಿದುಬಂದಿದೆ. 28 ಕಳಪೆಯಾಗಿವೆ. ಇದೇ ಜನವರಿಯಲ್ಲಿ 681 ರಷ್ಟು ಇಡ್ಲಿ ಸ್ಯಾಂಪಲ್ಸ್ ಪಡೆಯಲಾಗಿದೆ. ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಘಟನೆ ಸಂಬಂಧ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ ಎಂದು ಗುಂಡೂರಾವ್ ತಿಳಿಸಿದರು.

ಔಷಧಗಳ ಗುಣಮಟ್ಟದ ಬಗ್ಗೆಯೂ ಮಾಹಿತಿ ನೀಡಿದ ಅವರು, 1133 ಔಷಧ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ, 938 ಔಷಧಗಳು ಗುಣಮಟ್ಟ ಹೊಂದಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
ಗೋಬಿ, ಕಬಾಬ್​ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ!
ಆಹಾರದಲ್ಲಿ ಕೃತಕ ಬಣ್ಣ ಬಳಸುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆ?
ರಾಜ್ಯಾದ್ಯಂತ ಕಬಾಬ್‌, ಫಿಶ್‌, ಚಿಕನ್‌ಗೆ ಕೃತಕ ಬಣ್ಣ ಬಳಕೆ ಬ್ಯಾನ್!
ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್​ನಲ್ಲಿರುವ ರೊಡಮೈನ್-ಬಿ ಎಷ್ಟು ಅಪಾಯಕಾರಿ?

ಇದನ್ನೂ ಓದಿ: ಟ್ಯಾಟೂನಿಂದ ಬರುತ್ತೆ ಹೆಚ್​ಐವಿ, ಕ್ಯಾನ್ಸರ್​: ಆರೋಗ್ಯ ಇಲಾಖೆ ಅಲರ್ಟ್

ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿ 246 ಬ್ಯಾಚ್ ಮಾದರಿಗಳಿವೆ. ಈ ಪೈಕಿ 113 ಮಾದರಿಗಳು ಕಳಪೆ ಗುಣಮಟ್ಟ ಹೊಂದಿವೆ. ಹೀಗಾಗಿ ಪಶ್ಚಿಮ ಬಂಗಾಳದ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆ ವಿರುದ್ಧ 9 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಗುಂಡೂರಾವ್ ಹೇಳಿದ್ದಾರೆ.

ನೀರಿನ ಬಾಟಲ್​ಗಳ ಪರೀಕ್ಷೆ: ಗುಂಡೂರಾವ್

ಕುಡಿಯುವ ನೀರಿನ ಬಾಟಲ್​ ಬಗ್ಗೆಯೂ ವಿಶ್ಲೇಷಣೆ ಮಾಡಲಾಗಿದೆ. ಕುಡಿಯುವ ನೀರಿನ 288 ಬಾಟಲ್​ಗಳನ್ನು ಲ್ಯಾಬ್​ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಲ್ಯಾಬ್​ನಿಂದ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. ಇದರೊಂದಿಗೆ, ಕುಡಿಯುವ ನೀರು ಕೂಡ ಸುರಕ್ಷಿತವಲ್ಲವೇ ಎಂಬ ಅನುಮಾನ ಸೃಷ್ಟಿಯಾಗಿದೆ. ಲ್ಯಾಬ್​ನಿಂದ ವರದಿ ಬಂದ ಕೂಡಲೇ ಇದಕ್ಕೆ ಉತ್ತರ ದೊರೆಯಲಿದೆ. ಇಡ್ಲಿಯಲ್ಲಿ ಕ್ಯಾನ್ಸರ್​ಕಾರಕ ಪತ್ತೆಯಾದ ಬೆನ್ನಲ್ಲೇ ಇದೀಗ ಒಂದೊಂದಾಗಿ ರಹಸ್ಯಗಳು ಬಯಲಾಗುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ