ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್ ಬ್ಯಾನ್ ಆಗಿದ್ದೇಕೆ?; ರೊಡಮೈನ್-ಬಿ ಬಗ್ಗೆ ನಿಮಗೂ ಗೊತ್ತಿರಲಿ

ಕಾಟನ್ ಕ್ಯಾಂಡಿ ಬಹುತೇಕ ಮಕ್ಕಳ ಫೇವರಿಟ್ ತಿನಿಸು. ಹೊರಗೆ ಹೋದಾಗ ರಸ್ತೆ ಬದಿಯಲ್ಲಿ ಇಟ್ಟುಕೊಂಡಿರುವ ಪಿಂಕ್, ಹಳದಿ, ನೀಲಿ ಬಣ್ಣದ ಕಾಟನ್ ಕ್ಯಾಂಡಿ ಮಕ್ಕಳನ್ನು ಆಕರ್ಷಿಸದೆ ಇರಲು ಸಾಧ್ಯವೇ ಇಲ್ಲ. ಆದರೆ, ಈಗ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರ ಕಾಟನ್ ಕ್ಯಾಂಡಿಯ ಮಾರಾಟವನ್ನು ನಿಷೇಧಿಸಿದೆ. ಇದರ ಜೊತೆಗೆ ಎಲ್ಲರ ಇಷ್ಟದ ಸ್ನಾಕ್ಸ್​ ಆಗಿರುವ ಗೋಬಿ ಮಂಚೂರಿಯನ್ ಮೇಲೂ ನಿಷೇಧ ಹೇರಿದೆ. ಇದಕ್ಕೆ ಕಾರಣವಾಗಿರುವ ರೊಡಮೈನ್-ಬಿ ಅಷ್ಟು ಅಪಾಯಕಾರಿಯಾ?

ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್ ಬ್ಯಾನ್ ಆಗಿದ್ದೇಕೆ?; ರೊಡಮೈನ್-ಬಿ ಬಗ್ಗೆ ನಿಮಗೂ ಗೊತ್ತಿರಲಿ
ಕಾಟನ್ ಕ್ಯಾಂಡಿImage Credit source: pexels.com
Follow us
ಸುಷ್ಮಾ ಚಕ್ರೆ
|

Updated on: Mar 16, 2024 | 12:06 PM

ತಮಿಳುನಾಡು ಸರ್ಕಾರ ಫೆಬ್ರವರಿ 17ರಂದು ಕಾಟನ್ ಕ್ಯಾಂಡಿ ಮಾರಾಟವನ್ನು ನಿಷೇಧಿಸಿತು. ಈ ಕಾಟನ್ ಕ್ಯಾಂಡಿಯಲ್ಲಿ ಕೈಗಾರಿಕಾ ಡೈ ಆಗಿರುವ ರೊಡಮೈನ್-ಬಿ ಇರುವಿಕೆಯನ್ನು ಸಂಶೋಧನೆಯು ದೃಢಪಡಿಸಿದ್ದರಿಂದ ಈ ತಿನಿಸನ್ನು ಬ್ಯಾನ್ ಮಾಡಲಾಯಿತು. ನಂತರ ಕರ್ನಾಟಕ ಸರ್ಕಾರ ಕೂಡ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್​ನಲ್ಲಿ ಹಾನಿಕಾರಕ ಬಣ್ಣವನ್ನು ಬಳಸುವುದರಿಂದ ಅವುಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಹಾಗಾದರೆ, ಇವುಗಳಲ್ಲಿ ಬಳಸುವ ಬಣ್ಣ ಅಷ್ಟೊಂದು ಅಪಾಯಕಾರಿಯಾ?

ಕರ್ನಾಟಕ ಸರ್ಕಾರವು ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳನ್ನು ಅದರಲ್ಲೂ ನಿರ್ದಿಷ್ಟವಾಗಿ ರೊಡಮೈನ್-ಬಿ ಬಳಕೆಯನ್ನು ನಿಷೇಧಿಸಿದೆ. ಏಕೆಂದರೆ ಅವು ಸಾರ್ವಜನಿಕ ಆರೋಗ್ಯದ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ರೊಡಮೈನ್-ಬಿ ಎಂದರೇನು?:

ರೊಡಮೈನ್ ಬಿ (RhB) ಒಂದು ರಾಸಾಯನಿಕ ಸಂಯುಕ್ತವಾಗಿದ್ದು, ರೇಷ್ಮೆ, ಸೆಣಬು, ಚರ್ಮ, ಹತ್ತಿ ಮತ್ತು ಉಣ್ಣೆಯನ್ನು ಬಣ್ಣ ಮಾಡಲು ಸಿಂಥೆಟಿಕ್ ಬಣ್ಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ, ಹಾಗೆಯೇ ಸೌಂದರ್ಯವರ್ಧಕಗಳು ಮತ್ತು ಪ್ಲಾಸ್ಟಿಕ್ ಉದ್ಯಮಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದರ ಬೆಲೆ ಕಡಿಮೆ. ಇದನ್ನು ಆಹಾರಕ್ಕೆ ಬಣ್ಣ ನೀಡಲು ಹೆಚ್ಚು ಬಳಸಲಾಗುತ್ತದೆ. ಅದರಲ್ಲೂ ಬೀದಿ ಬದಿಯ ತಿಂಡಿಗಳಲ್ಲಿ ಹೆಚ್ಚು ಬಳಸಲಾಗುತ್ತದೆ.

ಇದನ್ನೂ ಓದಿ: Gobi Manchurian: ನೀವು ಗೋಬಿ ಮಂಚೂರಿ ಪ್ರಿಯರಾ?; ಇದನ್ನು ತಿನ್ನೋ ಮುಂಚೆ ಯೋಚಿಸಿ!

ರೊಡಮೈನ್-ಬಿ ಎಷ್ಟು ಹಾನಿಕಾರಕ?:

ಈ ಸಂಯುಕ್ತವನ್ನು ಹೆಚ್ಚಾಗಿ ಆಹಾರದ ಬಣ್ಣವಾಗಿ ಬಳಸಲಾಗುತ್ತದೆ. ವಿಶೇಷವಾಗಿ ಮೆಣಸಿನ ಪುಡಿ ಮತ್ತು ಮೆಣಸಿನ ಎಣ್ಣೆಯಂತಹ ವಸ್ತುಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಇದರ ವ್ಯಾಪಕ ಬಳಕೆಯ ಹೊರತಾಗಿಯೂ, ಚರ್ಮ ಮತ್ತು ಕಣ್ಣಿನ ಕೆರಳಿಕೆ, ಉಸಿರಾಟದ ಸಮಸ್ಯೆಗಳು ಮತ್ತು ಕಾರ್ಸಿನೋಜೆನಿಸಿಟಿ ಸೇರಿದಂತೆ ಹಲವು ಆರೋಗ್ಯದ ಅಪಾಯಗಳನ್ನು ಹೊಂದಿದೆ.

ರೊಡಮೈನ್-ಬಿ ಅನ್ನು ಏಕೆ ನಿಷೇಧಿಸಲಾಗಿದೆ?:

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಪ್ರಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಂತ್ರಣ, 2011ರಲ್ಲಿ ಅನುಮತಿಸದ ಹೊರತು ಆಹಾರಕ್ಕೆ ಯಾವುದೇ ಬಣ್ಣವನ್ನು ಸೇರಿಸಬಾರದು.

ಅನುಮತಿಸಲಾದ ಸಿಂಥೆಟಿಕ್ ಬಣ್ಣದ ಏಜೆಂಟ್‌ಗಳು:

ಕೆಂಪು – ಪೊನ್ಸೆಯು 4 ಆರ್, ಕಾರ್ಮೋಸಿನ್, ಎರಿಥ್ರೋಸಿನ್

ಹಳದಿ – ಟಾರ್ಟ್ರಾಜೈನ್, ಸೂರ್ಯಾಸ್ತದ ಹಳದಿ FCF

ನೀಲಿ – ಇಂಡಿಗೊ ಕಾರ್ಮೈನ್, ಬ್ರಿಲಿಯಂಟ್ ಬ್ಲೂ FCF

ಹಸಿರು – ಫಾಸ್ಟ್ ಗ್ರೀನ್ FCF

ಇದನ್ನೂ ಓದಿ: Cotton Candy Ban: ಕರ್ನಾಟಕದಲ್ಲಿಯೂ ‘ಬಾಂಬೆ ಮಿಠಾಯಿ’ ನಿಷೇಧಕ್ಕೆ ಮುಂದಾದ ಸರ್ಕಾರ

ನಿಮ್ಮ ಆಹಾರದಲ್ಲಿ ರೊಡಮೈನ್-ಬಿ ಬಳಸಲಾಗಿದೆ ಎಂದು ಕಂಡುಹಿಡಿಯುವುದು ಹೇಗೆ?:

ಮೆಣಸಿನ ಪುಡಿಯಲ್ಲಿ ರೋಡಮೈನ್ ಬಿ ಪತ್ತೆ:

– ಟೆಸ್ಟ್ ಟ್ಯೂಬ್‌ನಲ್ಲಿ 2 ಗ್ರಾಂ ಮಾದರಿಯನ್ನು ತೆಗೆದುಕೊಳ್ಳಿ.

– 5 ಮಿಲಿ ಅಸಿಟೋನ್ ಸೇರಿಸಿ.

– ಅಸಿಟೋನ್ ಪದರದ ಬಣ್ಣವನ್ನು ಗಮನಿಸಿ.

– ತಕ್ಷಣ ಕೆಂಪು ಬಣ್ಣ ಬಂದರೆ ಅದು ರೊಡಮೈನ್-ಬಿ ಇರುವಿಕೆಯನ್ನು ಸೂಚಿಸುತ್ತದೆ.

ಗೆಣಸಿನಲ್ಲಿ ರೊಡಮೈನ್-ಬಿ ಪತ್ತೆ:

– ಹತ್ತಿ ಉಂಡೆಯನ್ನು ನೀರು ಅಥವಾ ಸಸ್ಯಜನ್ಯ ಎಣ್ಣೆಯಲ್ಲಿ ಅದ್ದಿ.

– ಹತ್ತಿಯ ಉಂಡೆಯನ್ನು ಗೆಣಸಿನ ಹೊರ ಮೇಲ್ಮೈ ಮೇಲೆ ಉಜ್ಜಿ.

– ಹತ್ತಿ ಉಂಡೆಯು ಸ್ವಚ್ಛವಾಗಿ ಉಳಿದಿದ್ದರೆ, ಗೆಣಸು ಸೇವನೆಗೆ ಸುರಕ್ಷಿತವಾಗಿದೆ.

– ಹತ್ತಿಯ ಚೆಂಡು ಕೆಂಪು ಅಥವಾ ನೇರಳೆ ಬಣ್ಣಕ್ಕೆ ತಿರುಗಿದರೆ, ಅದು ರೊಡಮೈನ್-ಬಿ ಯೊಂದಿಗೆ ಕಲಬೆರಕೆಯನ್ನು ಸೂಚಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ