ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮತಾಂತರ ಹೆಚ್ಚಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಕೆಲ ಸದಸ್ಯರು ಪ್ರಸ್ತಾಪಿಸಿದ್ದಾರೆ. ಒತ್ತಾಯಪೂರ್ವಕವಾಗಿ ಮತಾಂತರ ಕಾನೂನುಬಾಹಿರ ಆಗಿದೆ. ಹಾಗಾಗಿ, ಬೇರೆ ಬೇರೆ ರಾಜ್ಯಗಳ ಕಾಯ್ದೆಯನ್ನು ಪರಿಶೀಲನೆ ಮಾಡಿ ರಾಜ್ಯದಲ್ಲೂ ಕಾಯ್ದೆ ಜಾರಿ ಮಾಡುವ ಬಗ್ಗೆ ಚರ್ಚಿಸ್ತೇವೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಸ್ಯಾಟಲೈಟ್ ಫೋನ್ ಬಳಕೆ ಕಾನೂನುಬಾಹಿರ ಆಗಿದೆ. 2011 ರಲ್ಲಿಯೇ ಕೇಂದ್ರ ಸರ್ಕಾರ ಇದನ್ನು ನಿಷೇಧಿಸಿದೆ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಸ್ಯಾಟಲೈಟ್ ಫೋನ್ ಬಳಕೆಯ ಬಗ್ಗೆ ಮಾಹಿತಿ ಬಂದಿದೆ. ಕೇಂದ್ರದ ರಾ ಸಂಸ್ಥೆಯ ಜತೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪಾಕಿಸ್ತಾನ ಏಜೆಂಟ್ ಬಂಧಿಸಲಾಗಿದೆ. ಸೇನಾ ಅಧಿಕಾರಿಗಳ ಸೂಚನೆ ಮೇರೆಗೆ ಬಂಧಿಸಿದ್ದಾರೆ. ಪಾಕ್ ಏಜೆಂಟ್ ಏನು ಮಾಡುತ್ತಿದ್ದ ಎಂಬ ಮಾಹಿತಿ ಸಂಗ್ರಹ ಮಾಡಲಾಗಿದೆ. ಬೆಂಗಳೂರಿನಲ್ಲಿ ಘಟನೆಯಾಗಿರುವ ಹಿನ್ನೆಲೆ ಆತಂಕ ಇದೆ. ಆದ್ರೆ ನಮ್ಮ ಭದ್ರತಾ ಸಿಬ್ಬಂದಿ ಮೇಲೆ ನಮಗೆ ನಂಬಿಕೆ ಇದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಐಎಸ್ಐ ಜತೆ ಜಿತೇಂದ್ರ ಸಿಂಗ್ ನಂಟು; ಸ್ಫೋಟಕ ಮಾಹಿತಿ ಬಯಲು
ಐಎಸ್ಐ ಜತೆ ನಂಟು ಹೊಂದಿದ್ದ ಜಿತೇಂದ್ರ ಸಿಂಗ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಆತನ ವಿರುದ್ಧ ದಾಖಲಾದ ಸ್ಫೋಟಕ ಮಾಹಿತಿ ಬಯಲಾಗಿದೆ. ಆತ ಕರಾಚಿಯ ಇಂಟೆಲಿಜೆನ್ಸ್ ಆಪರೇಟಿವ್ ಜೊತೆ ನೇರ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಜಿತೇಂದ್ರ ಬಗ್ಗೆ ಪೊಲೀಸರಿಂದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗಿದೆ. ಜಾಲಿ ಮೊಹಲ್ಲಾದಲ್ಲಿರುವ ಜಿತೇಂದ್ರ ಮನೆ ಮೇಲೆ ದಾಳಿ ಮಾಡಲಾಗಿದೆ. ಮಿಲಿಟರಿ ಡ್ರೆಸ್ ಹಾಕಿಕೊಂಡು ಫೋಟೋಗಳ ರವಾನೆ ಮಾಡಿದ್ದ. ಆತ ಪಾಕಿಸ್ತಾನದ ಬೇಹುಗಾರಿಕೆಗೆ ಫೋಟೊಗಳ ರವಾನೆ ಮಾಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಬಂಧಿತ ಉಗ್ರನಿಗೆ ಉಪ್ಪಿನಂಗಡಿ ನಂಟು ಶಂಕೆ; ಸ್ಫೋಟಕ ಮಾಹಿತಿ ಬಯಲು
ಇದನ್ನೂ ಓದಿ: ಈ ಮೊದಲು ಜೈಲಿನಲ್ಲಿದ್ದವರು ಯಾರೂ ಗೃಹ ಸಚಿವರಾಗಿಲ್ಲ; ಬಂಧಿಖಾನೆ ಮಂಡಳಿ ವಿಧೇಯಕ ಚರ್ಚೆ ವೇಳೆ ಆರಗ ಜ್ಞಾನೇಂದ್ರ
Published On - 3:48 pm, Tue, 21 September 21