AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮ

ಯುಗಾದಿ ಹಬ್ಬಕ್ಕಾಗಿ ಅಣ್ಣ ವೆಂಕಟರಾಜು ಮನೆಗೆ ತಮ್ಮ ಸ್ವಾಮಿ ಹಾಗೂ ಪತ್ನಿ ಸುನಂದ ಬಂದಿದ್ದರು. ಏಪ್ರಿಲ್ 14ರಂದು ಬೆಂಗಳೂರಿನ ಮಾಗಡಿಯಿಂದ ಬಂದು ಒಂದು ವಾರ ತಂಗುವುದಾಗಿ ದಂಪತಿ ಹೇಳಿದ್ದರು. ಆದರೆ ಬಂದ ಮರುದಿನವೇ ಬೀರುವಿನಲ್ಲಿಟ್ಟಿದ್ದ 3.30 ಲಕ್ಷ ಹಣವನ್ನು ಕದ್ದು ಹಿಂದಿರುಗಿದ್ದರು.

ಮೈಸೂರು: ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮ
ಬಂಧನಕ್ಕೊಳಗಾದ ಸ್ವಾಮಿ ಹಾಗೂ ಪತ್ನಿ ಸುನಂದಾ
sandhya thejappa
|

Updated on: Apr 18, 2021 | 4:32 PM

Share

ಮೈಸೂರು: ಯುಗಾದಿ ಹಬ್ಬಕ್ಕಾಗಿ ಅಣ್ಣನ ಮನೆಗೆ ಬಂದ ತಮ್ಮ ಮತ್ತು ತಮ್ಮನ ಪತ್ನಿ ಮನೆಯಲ್ಲಿದ್ದ 3.3 ಲಕ್ಷ ರೂ. ಹಣವನ್ನು ಕದ್ದಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. ಮಗನ ಮದುವೆಗಾಗಿ ಅಣ್ಣ ವೆಂಕಟರಾಜು ಎಂಬುವವರು ಸುಮಾರು 3.30 ಲಕ್ಷ ರೂ. ಹಣವನ್ನು ಕೂಡಿಟ್ಟಿದ್ದರು. ಆದರೆ ಕೂಡಿಟ್ಟ ಹಣವನ್ನು ತಮ್ಮ ಮತ್ತು ಆತನ ಪತ್ನಿ ಕದ್ದಿದ್ದರು. ಈ ಪ್ರಕರಣ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ವಾಮಿ ಹಾಗೂ ಪತ್ನಿ ಸುನಂದಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಯುಗಾದಿ ಹಬ್ಬಕ್ಕಾಗಿ ಅಣ್ಣ ವೆಂಕಟರಾಜು ಮನೆಗೆ ತಮ್ಮ ಸ್ವಾಮಿ ಹಾಗೂ ಪತ್ನಿ ಸುನಂದ ಬಂದಿದ್ದರು. ಏಪ್ರಿಲ್ 14ರಂದು ಬೆಂಗಳೂರಿನ ಮಾಗಡಿಯಿಂದ ಬಂದು ಒಂದು ವಾರ ತಂಗುವುದಾಗಿ ದಂಪತಿ ಹೇಳಿದ್ದರು. ಆದರೆ ಬಂದ ಮರುದಿನವೇ ಬೀರುವಿನಲ್ಲಿಟ್ಟಿದ್ದ 3.30 ಲಕ್ಷ ಹಣವನ್ನು ಕದ್ದು ಹಿಂದಿರುಗಿದ್ದರು. ಬಂದ ಮಾರನೇ ದಿನವೇ ಹಿಂದಿರುಗಿದ ದಂಪತಿಗಳ ನಡೆ ಅನುಮಾನಕ್ಕೆ ಕಾರಣವಾಯಿತು. ನಂತರ ಹಣದ ವಿಚಾರ ಕೇಳಿದಾಗ ಸಾಕ್ಷಿ ಏನಿದೆ ಎಂದು ಸುನಂದ ಉಡಾಫೆಯಿಂದ ಉತ್ತರಿಸಿದ್ದಳು. ಈ ಬಗ್ಗೆ ಹುಲ್ಲಹಳ್ಳಿ ಠಾಣೆಗೆ ವೆಂಕಟರಾಜು ದೂರನ್ನು ನೀಡಿದ್ದರು. ಆ ಬಳಿಕ ದಂಪತಿ ಹಣವನ್ನು ಕದ್ದಿರುವ ಮಾಹಿತಿ ಸ್ಪಷ್ಟವಾಗಿತ್ತು.

ಹಾಡುಹಗಲೇ ನಕಲಿ ಕೀ ಬಳಸಿ ಬೈಕ್ ಕಳ್ಳತನ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಹಾಡುಹಗಲೇ ನಕಲಿ ಕೀಯನ್ನು ಬಳಸಿ ಬೈಕ್​ನ ಕದ್ದಿರುವ ಘಟನೆ ಸಂಭವಿಸಿದೆ. ಬೈಕ್ ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಸ್.ಜಿ.ಗೌಡ ಎಂಬುವವರು ಬೈಕ್ ಕಳೆದುಕೊಂಡಿರುವವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಕೊರೊನಾದಿಂದ ಮೃತಪಟ್ಟ ಪತಿ, ಅತ್ತೆ.. ಖಿನ್ನತೆಗೆ ಒಳಗಾಗಿ ತಾಯಿ-ಮಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಸಾವಿನ ದವಡೆಗೆ ನೂಕುವ ಕ್ರಿಮಿ ಬದುಕಿನ ಮಹತ್ವ ತಿಳಿಸುತ್ತದೆ; ಚೈತ್ರಾ ಕೋಟೂರ್​ ಕಂಬ್ಯಾಕ್​!

(Husband and wife arrested for theft in brother home at mysuru)