ನಾಸೀರ್​ ಹುಸೇನ್​​ಗೆ ಪ್ರತಿಜ್ಞಾವಿಧಿ ಬೋಧಿಸದಂತೆ ಉಪ ರಾಷ್ಟ್ರಪತಿಗಳಿಗೆ ಪತ್ರ: ಹಿರಿಯ ಅಧಿಕಾರಿಗಳ ನಡೆ ಸ್ವಾಗತಿಸಿದ ಆರ್​ ಅಶೋಕ್​​

|

Updated on: Mar 07, 2024 | 12:03 PM

Vidhan Soudha Pro Pakistan Slogan: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮುಖಂಡ ನಾಸೀರ್ ಹುಸೇನ್ ಅವರು ಗೆದ್ದಿದ್ದು, ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದರು. ಪೊಲೀಸರು ಪ್ರಕರಣ ತನಿಖೇ ನೆಡಯುತ್ತಿದೆ. ಈ ತನಿಖೆ ಪೂರ್ಣಗೊಳ್ಳುವವರೆಗೂ ನಾಸೀರ್ ಹುಸೇನ್ ಅವರಿಗೆ ಯಾವುದೇ ಕಾರಣಕ್ಕೂ ಪ್ರಮಾಣವಚನ ಬೋಧಿಸಬಾರದು ಎಂದು ನಿವೃತ್ತಿ ಐಎಎಸ್​ ಮತ್ತು ಐಪಿಎಸ್ ಅಧಿಕಾರಿಗಳು ಉಪರಾಷ್ಟ್ರಪತಿ ಅವರಿಗೆ ಮನವಿ ಮಾಡಿದ್ದಾರೆ.

ನಾಸೀರ್​ ಹುಸೇನ್​​ಗೆ ಪ್ರತಿಜ್ಞಾವಿಧಿ ಬೋಧಿಸದಂತೆ ಉಪ ರಾಷ್ಟ್ರಪತಿಗಳಿಗೆ ಪತ್ರ: ಹಿರಿಯ ಅಧಿಕಾರಿಗಳ ನಡೆ ಸ್ವಾಗತಿಸಿದ ಆರ್​ ಅಶೋಕ್​​
ವಿಪಕ್ಷ ನಾಯಕ ಆರ್​ ಅಶೋಕ್​
Follow us on

ಬೆಂಗಳೂರು, ಮಾರ್ಚ 07: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ (Vidhan Soudha Pro Pakistan Slogan) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಸಯ್ಯದ್​ ನಾಸೀರ್ ಹುಸೇನ್ (Syed Nasir Hussain) ಅವರಿ​ಗೆ ಪ್ರತಿಜ್ಞಾವಿಧಿ ಬೋಧಿಸದಂತೆ 24 ನಿವೃತ್ತ ಐಎಎಸ್, ಐಪಿಎಸ್, ಐಎಫ್​ಎಸ್ ಮತ್ತು ಐಆರ್​​ಎಸ್ ಅಧಿಕಾರಿಗಳು ಉಪ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದನ್ನು ವಿಪಕ್ಷ ನಾಯಕ ಆರ್​ ಅಶೋಕ್ (R Ashok)​ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು “ಮಾಜಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನಿಲುವನ್ನು ನಾನು ಸ್ವಾಗತಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ. ಕಾಂಗ್ರೆಸ್​ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಯ್ಯದ್​ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವ ಪ್ರಕರಣ ತನಿಖೆ ಮುಗಿಯುವವರೆಗು ಪ್ರತಿಜ್ಞಾವಿಧಿ ಭೋದಿಸಬಾರದು ಎಂದು ಉಪ ರಾಷ್ಟ್ರಪತಿಗಳಿಗೆ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದಾರೆ”.

ದೇಶದ್ರೋಹಿಗಳಿಂದ ಸುತ್ತುವರೆಯಲ್ಪಟ್ಟಿದ್ದ ನಾಯಕ ಪ್ರಜಾಪ್ರಭುತ್ವದ ದೇವಾಲಯವಾಗಿರುವ ಸಂಸತ್ತಿಗೆ ಪ್ರವೇಶಿಸುವ ಹಕ್ಕಿಲ್ಲ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಮ್ಮ ದೇಶದ ಬಗ್ಗೆ ಗೌರವವಿದ್ದರೆ ನಾಸಿರ್ ಹುಸೇನ್ ಅವರ ರಾಜೀನಾಮೆ ಪಡೆಯಬೇಕು ಮತ್ತು ಮರು ಚುನಾವಣೆಗೆ ಹೋಗಬೇಕು” ಎಂದು ಒತ್ತಾಯಿಸಿದ್ದಾರೆ.

ಪತ್ರ ಏಕೆ

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮುಖಂಡ ನಾಸೀರ್ ಹುಸೇನ್ ಅವರು ಗೆದ್ದಿದ್ದು, ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದರು. ಇದು ಎಫ್​ಎಸ್​ಎಲ್ ವರದಿಯಲ್ಲೂ ಸಹ ದೃಢಪಟ್ಟಿದ್ದು, ಈ ಸಂಬಂಧ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೂ ನಾಸೀರ್ ಹುಸೇನ್ ಅವರಿಗೆ ಯಾವುದೇ ಕಾರಣಕ್ಕೂ ಪ್ರಮಾಣವಚನ ಬೋಧಿಸಬಾರದು ಎಂದು ನಿವೃತ್ತಿ ಐಎಎಸ್​ ಮತ್ತು ಐಪಿಎಸ್ ಅಧಿಕಾರಿಗಳು ಉಪರಾಷ್ಟ್ರಪತಿ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಭದ್ರತಾ ಲೋಪ: ಶಾಸಕರು, ಸಚಿವರಿಂದ ಪೋನ್​ ಮಾಡಿಸಿ ವಿಧಾನಸೌಧದ ಒಳಗೆ ಹೋಗುತ್ತಾರೆ; ಭದ್ರತಾ ಸಿಬ್ಬಂದಿ ಅಸಮಾಧಾನ

ನಾಸೀರ್ ಹುಸ್ಸೇನ್ ಪ್ರಮಾಣ ವಚನ ಸ್ವೀಕರಿಸಬಾರದು: ಬಿವೈ ವಿಜಯೇಂದ್ರ

ಇತ್ತೀಚೆಗೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಾಕಿಸ್ತಾನದ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದ ಪ್ರಕರಣ ಪೂರ್ಣಗೊಳ್ಳದ ಹೊರತು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಾ ಸಯ್ಯದ್ ನಾಸೀರ್ ಹುಸ್ಸೇನ್ ಪ್ರಮಾಣ ವಚನ ಸ್ವೀಕರಿಸಬಾರದು ಎಂದು ಹೇಳಿದ್ದರು.

ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರದ ಸಮಗ್ರತೆ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಹುಸ್ಸೇನ್ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಬೇಕು ಎಂದು ವಿಜಯೇಂದ್ರ ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Thu, 7 March 24