ಮೈಸೂರಿನ ಎರಡು ದೇವಾಲಯಗಳಲ್ಲಿ ಕಳ್ಳತನ.. ಕದ್ದು ಹೋದರು ಕೆ.ಜಿ. ಗಟ್ಟಲೆ ಚಿನ್ನಾಭರಣ
ಕೆ.ಆರ್.ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಎರಡು ದೇವಾಲಯಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಗ್ರಾಮದ ಆದಿಶಕ್ತಿ ಮುತ್ತು ತಾಳಮ್ಮ ಮತ್ತು ವೀರಭದ್ರೇಶ್ವರ ದೇಗುಲಗಳಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಮೈಸೂರು: ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ದೇವಾಲಯಗಳ ಕಳ್ಳತನದ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಎರಡು ದೇವಾಲಯಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಗ್ರಾಮದ ಆದಿಶಕ್ತಿ ಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇಗುಲಗಳಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ದೇವಸ್ಥಾನದ ಬಾಗಿಲು ಬೀಗ ಒಡೆದು ಖದೀಮರು ಕಳ್ಳತನ ಮಾಡಿದ್ದಾರೆ. ಮುತ್ತುತಾಳಮ್ಮ ದೇಗುಲದಲ್ಲಿ 15 ಗ್ರಾಂನ ಚಿನ್ನದ ತಾಳಿ, ಗುಂಡು, 250 ಗ್ರಾಂ ಬೆಳ್ಳಿ, 10 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಹಾಗೂ ವೀರಭದ್ರೇಶ್ವರ ದೇವಾಲಯದಲ್ಲಿ 12 ಸಾವಿರ ನಗದು, 1.5 ಕೆ.ಜಿ. ಬೆಳ್ಳಿಯ ಎರಡು ಬಸವ, 1 ಕುದುರೆ ಕಳವಾಗಿದೆ. ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ರೀತಿಯ ದೇವಸ್ಥಾನದ ಕಳ್ಳತನ ಪ್ರಕರಣಗಳು ಅಪರೂಪವೇನಲ್ಲ. ಖದೀಮರು ಹೆಚ್ಚಾಗಿ ಕಳ್ಳತನಕ್ಕೆ ದೇವರನ್ನೇ ಹಾರಿಸುತ್ತಿದ್ದಾರೆ. ಭಕ್ತರು ದೇವರಿಗೆ ನೀಡಿದ ಕಾಣಿಕೆಯನ್ನು ಕದಿಯುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು, ಅಧಿಕಾರಿಗಳು ತಮಗೆ ವಿಷಯವೇ ಗೊತ್ತಿಲ್ಲ ಎಂಬಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಖದೀಮರು ಮಾತ್ರ ರಾಜಾರೋಷವಾಗಿ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಸಹ ಇದೇ ರೀತಿ ಮಂಡ್ಯದ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದಾಗ ನಾವು ಮಾಡುತ್ತಿದ್ದ ಕೃತ್ಯ ಗೊತ್ತಾಯಿತೆಂದು ಮೂವರು ಅರ್ಚಕರನ್ನು ಕೊಲೆ ಮಾಡಿ ಕಳ್ಳತನ ಮಾಡಿದ್ದ ಘಟನೆ ನಡೆದಿತ್ತು. ಈ ರೀತಿ ಖದೀಮರು ಕಳ್ಳತನ ಮಾಡಲು ಯಾವ ಹೀನಾಯ ಕೆಲಸ ಮಾಡಲು ಹಿಂದೆ ಮುಂದೆ ನೋಡಲ್ಲ. ಆದಷ್ಟು ಬೇಗ ಪೊಲೀಸರು ಇಂತಹ ಕಳ್ಳರನ್ನು ಹಿಡಿದು ತಕ್ಕ ಪಾಠ ಕಲಿಸಬೇಕಾಗಿದೆ.
ದೈವೀ ಸನ್ನಿಧಿಯಲ್ಲಿ ಪೈಶಾಚಿಕ ಕೃತ್ಯ: ಮೂವರ ಬರ್ಬರ ಕೊಲೆ, ಹುಂಡಿ ಕದ್ದೊಯ್ದ ದುಷ್ಕರ್ಮಿಗಳು