ಇಸ್ರೋ ರೋಬೋಟಿಕ್ಸ್ ಚಾಲೆಂಜ್ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಅದ್ಭುತ ಸಾಧನೆ: ರಾಷ್ಟ್ರಕ್ಕೆ ಕೀರ್ತಿ
ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ ಧಾರವಾಡ) ಟೀಮ್ ಇಕಾರಸ್, ಇಸ್ರೋ ರೋಬೋಟಿಕ್ಸ್ ಚಾಲೆಂಜ್ 2026 ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿ ₹2 ಲಕ್ಷ ನಗದು ಬಹುಮಾನ ಪಡೆದಿದೆ. ಮಂಗಳ ಗ್ರಹದಲ್ಲಿ ಜಿಪಿಎಸ್ ಇಲ್ಲದೆ ಕಾರ್ಯನಿರ್ವಹಿಸುವ ವಿಶೇಷ ರೋಬೋಟಿಕ್ ಡ್ರೋನ್ ನಿರ್ಮಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಈ ಸಾಧನೆ ಸಂಸ್ಥೆಗೆ ಹೆಮ್ಮೆಯ ಕಿರೀಟಪ್ರಾಯವಾಗಿದೆ.
ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ ಧಾರವಾಡ) ಏಳು ವಿದ್ಯಾರ್ಥಿಗಳನ್ನೊಳಗೊಂಡ ಟೀಮ್ ಇಸ್ರೋ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಇಸ್ರೋ ರೋಬೋಟಿಕ್ಸ್ ಚಾಲೆಂಜ್ – URSC (IRoC-U) 2026 ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಸಂಸ್ಥೆಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದಿದೆ. ತಂಡವು 2 ಲಕ್ಷ ರೂ. ನಗದು ಬಹುಮಾನವನ್ನೂ ಪಡೆದಿದೆ. ಈ ತಂಡವು ಮಂಗಳ ಗ್ರಹದಲ್ಲಿ ಜಿಪಿಎಸ್ (GPS) ಇಲ್ಲದೆ ಕಾರ್ಯನಿರ್ವಹಿಸಬಲ್ಲ ವಿಶೇಷ ರೋಬೋಟಿಕ್ ಡ್ರೋನ್ ಅನ್ನು ಯಶಸ್ವಿಯಾಗಿ ನಿರ್ಮಿಸಿದೆ. ಇದು ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಗೆ ಮಹತ್ವದ ಕೊಡುಗೆಯಾಗಿದೆ. ನಾಲ್ಕು ಹಂತಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಸಾವಿರಾರು ತಂಡಗಳಲ್ಲಿ ಟೀಮ್ ಇಕಾರಸ್ ಮೊದಲ ಮೂರು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಅಂತಿಮ 20 ತಂಡಗಳಲ್ಲಿ ಸ್ಥಾನ ಪಡೆಯಿತು. ಅಂತಿಮವಾಗಿ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿ ಗಮನ ಸೆಳೆದಿದೆ. ಅಹಮದಾಬಾದ್ನಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ದಿನ ಫಲಿತಾಂಶವನ್ನು ಘೋಷಿಸಲಾಯಿತು. ಈ ಸಾಧನೆಯು ಐಐಐಟಿ ಧಾರವಾಡದ ತಾಂತ್ರಿಕ ನಾವೀನ್ಯತೆ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

